-->
ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 : ಭಿತ್ತಿ ಪತ್ರ ಬಿಡುಗಡೆ

ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 : ಭಿತ್ತಿ ಪತ್ರ ಬಿಡುಗಡೆ

ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 : ಭಿತ್ತಿ ಪತ್ರ ಬಿಡುಗಡೆ


  'ಮಕ್ಕಳ ಜಗಲಿ' ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. 2020 ನವೆಂಬರ್ 14ರಂದು ಮಕ್ಕಳಿಗಾಗಿ ಸ್ಥಾಪನೆಯಾದ ಈ ಮಕ್ಕಳ ಆನ್ಲೈನ್ ಪತ್ರಿಕೆಯು ಸಾವಿರಾರು ಜನರ ಮನ - ಮನೆಗಳಿಗೆ ತಲುಪಿದೆ. ಈ ಸವಿ ನೆನಪಿನಲ್ಲಿ ಮಕ್ಕಳಿಗಾಗಿ 2ನೇ ವರ್ಷದ ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 ಯನ್ನು ಆಯೋಜಿಸಲಾಗಿದೆ. 
     ಇದರ ಭಿತ್ತಿ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸಹ ನಿರ್ದೇಶಕರಾದ ಡಾ. ಸಿಪ್ರಿಯನ್ ಮೊಂತೇರೊ ಇವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. 
     ಮಕ್ಕಳ ಜಗಲಿಯ ಮಾರ್ಗದರ್ಶಕರಾದ ಜಿಲ್ಲಾ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಹಿರಿಯ ಉಪನ್ಯಾಸಕರು ಡಾ. ಎನ್ ಶಿವಪ್ರಕಾಶ್ , ಡಾ. ಉಷಾ (ಉಪನ್ಯಾಸಕರು), ಶ್ರೀ ಸದಾನಂದ ಪೂಂಜ (ಉಪನ್ಯಾಸಕರು), ಶೋಭಾ ಕುಮಾರಿ (ಪ್ರವಾಚಕರು), ಶ್ರೀ ಕಮಾಲಾಕ್ಷ ಕಲ್ಲಡ್ಕ (ಪ್ರಭಾರ ಮುಖ್ಯೋಪಾಧ್ಯಾಯರು ಶಂಭೂರು ಪ್ರೌಢಶಾಲೆ), ಉಪಸ್ಥಿತರಿದ್ದರು. 
      ಮಕ್ಕಳ ಜಗಲಿಯ ಹುಟ್ಟಿಗೆ ಕಾರಣವಾದ ಮಂಚಿ - ಕೊಳ್ನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ ಹಾಗೂ ಮಕ್ಕಳ ಜಗಲಿಯ ಬಳಗದ ಸಹಕಾರದೊಂದಿಗೆ, ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2023 ಭಿತ್ತಿಪತ್ರದ ಬಿಡುಗಡೆ ಕಾರ್ಯಕ್ರಮವನ್ನು ಸಂಯೋಜನೆಗೊಳಿಸಲಾಯಿತು. ಮಕ್ಕಳ ಜಗಲಿ ಸಂಪಾದಕರಾದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.


Ads on article

Advertise in articles 1

advertising articles 2

Advertise under the article