ರಕ್ಷಾ ಬಂಧನದ ವಿಶೇಷ ಮಕ್ಕಳ ಕವನ - ರಚನೆ : ಧೃತಿ ಕಲ್ಲಾಜೆ , ಪ್ರಥಮ ಪಿಯುಸಿ
Tuesday, August 29, 2023
Edit
ರಕ್ಷಾ ಬಂಧನದ ವಿಶೇಷ - ಮಕ್ಕಳ ಕವನ
ಕವನ ರಚನೆ : ಧೃತಿ ಕಲ್ಲಾಜೆ
ಪ್ರಥಮ ಪಿಯುಸಿ,
ವಿಠಲ ಪದವಿಪೂರ್ವ ಕಾಲೇಜು
ವಿಟ್ಲ, ಕೊಳ್ನಾಡು ಗ್ರಾಮ,
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು
ಪ್ರೀತಿಯು ತುಂಬಿರಲು ಅನುದಿನ
ಬಿಡಿಸಲಾಗದ ಬಂಧ ಸಹೋದರತೆಯ
ಭ್ರಾತೃತ್ವದ ಶ್ರೀರಕ್ಷಾ ಸಂಕೇತ ರಕ್ಷಾಬಂಧನ
ಸಹೋದರ ಸಹೋದರಿಯ
ಸಂಬಂಧದ ಬೆಸುಗೆಯಲಿ
ಯುಗ ಯುಗಾಂತ್ಯಕ್ಕೂ ಬಾರದಿರಲಿ ಕದನ
ಅಣ್ಣ ತಂಗಿ ,ಅಕ್ಕ ತಮ್ಮಂದಿರಲಿ
ಸದಾಕಾಲವಿರಲಿ ಪರಸ್ಪರ ಪ್ರೀತಿ
ಕಾಳಜಿ - ನಂಬಿಕೆಯ ಗಮನ
ಅಣ್ಣ ತಂಗಿಯ ಮುದ್ದಾದ ಸಂಬಂಧ
ಬಿಡಿಸಲಾಗದ ಅನುಬಂಧ
ಮುಗ್ಧತೆ ತುಂಬಿದ ಒಡಲು
ದಾರದಲಿ ದ್ಯೋತಕ ಒಲುಮೆಯ ಹೊನಲು
ಪ್ರಥಮ ಪಿಯುಸಿ,
ವಿಠಲ ಪದವಿಪೂರ್ವ ಕಾಲೇಜು
ವಿಟ್ಲ, ಕೊಳ್ನಾಡು ಗ್ರಾಮ,
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************