-->
ಪ್ರೀತಿಯ ಪುಸ್ತಕ : ಸಂಚಿಕೆ - 72

ಪ್ರೀತಿಯ ಪುಸ್ತಕ : ಸಂಚಿಕೆ - 72

ಪ್ರೀತಿಯ ಪುಸ್ತಕ
ಸಂಚಿಕೆ - 72
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ

                          ನೀಲಿಯ ರಹಸ್ಯ
    ಪ್ರೀತಿಯ ಮಕ್ಕಳೇ.... ನೀಲಿ ಬಣ್ಣ ಯಾರಿಗೆ ಇಷ್ಟ? ನೀಲಿ ಬಣ್ಣ ಹೇಗೆ ತಯಾರು ಮಾಡುತ್ತಾರೆ? ಎಷ್ಟೊಂದು ಬಣ್ಣಗಳಿವೆಯಲ್ಲಾ? ಅವನ್ನೆಲ್ಲಾ ಬಟ್ಟೆ ಮಾಡುವವರು ಹೇಗೆ ತಯಾರು ಮಾಡುತ್ತಾರೆ? ಈ ಪುಸ್ತಕದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಕಥೆಯ ರೂಪದಲ್ಲಿ ಕೊಟ್ಟಿದ್ದಾರೆ. ಪುಟ ತುಂಬಾ ಸುಂದರವಾದ ಚಿತ್ರಗಳೂ ಇವೆ. ಬಹಳ ಹಿಂದೆ, ಬಾದಾಮಿಯ ಹತ್ತಿರದ ಇಳಕಲ್ ಎಂಬ ಹಳ್ಳಿಯಲ್ಲಿ ಕುಂಕು ಎಂಬ ಪುಟ್ಟ ಹುಡುಗಿ ಇದ್ದಳು. (ಈ ಇಳಕಲ್ ನಲ್ಲಿ ಈಗಲೂ ಸೀರೆ ತಯಾರಿಸುತ್ತಾರೆ. ಅಲ್ಲಿಯ ಸೀರೆಗಳು ಇಳಕಲ್ ಸೀರೆ ಎಂಬ ಹೆಸರಿನಲ್ಲಿ ಮೆರೆಯುತ್ತಿವೆ) ಕುಂಕುವಿನ ತಂದೆ ನೇಕಾರ. ಮಣ್ಣಿನ ಜಾಡಿಗಳಲ್ಲಿ ಊರಿನವರೆಲ್ಲಾ ಅತ್ಯಂತ ಸುಂದರ ಬಣ್ಣಗಳನ್ನು ಕಲಸುತ್ತಿದ್ದರು. ಪಾರಿವಾಳ ಚಂದ್ರಕಲಿ ಕುಂಕುವಿನ ಸ್ನೇಹಿತೆ. ಆದರೆ ಅವರಿಗೆ ನೀಲಿ ಬಣ್ಣ ಮಾಡುವುದು ಗೊತ್ತಿರಲಿಲ್ಲ. ಕುಂಕುವಿನ ಆಸೆಯಂತೆ ಚಂದ್ರಕಲಿ ದೂರದ ಕಾಶಿ ಪಟ್ಟಣಕ್ಕೆ ಹಾರಿ ಹೋಗಿ ನೀಲಿ ಬಣ್ಣ ಮಾಡುವುದನ್ನು ಕಲಿತು ಬರುತ್ತದೆ. ಓದಿ ನೋಡಿ ಸೊಗಸಾದ ಕಥೆ. 
ಲೇಖಕರು: ಮ್ಯೂರಿಯಲ್ ಕಕಾನಿ
ಅನುವಾದ: ದೀಪಾ ಗಣೇಶ್
ಚಿತ್ರಗಳು: ಬೊಸ್ಕಿ ಜೈನ್ 
ಪ್ರಕಾಶಕರು: ತುಲಿಕಾ 
ಬೆಲೆ: ರೂ.150/-
ಆರನೇ ತರಗತಿ ಮತ್ತು ಮೇಲ್ಪಟ್ಟ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು. ಚಿತ್ರಗಳನ್ನು ಚಿಕ್ಕವರೂ ದೊಡ್ಡವರೂ ಆನಂದಿಸುವ ಹಾಗೆ ಇವೆ.
........................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************

Ads on article

Advertise in articles 1

advertising articles 2

Advertise under the article