ಪ್ರೀತಿಯ ಪುಸ್ತಕ : ಸಂಚಿಕೆ - 71
Friday, August 11, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 71
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ.... ಪುಟ ತುಂಬಾ ಚಿತ್ರಗಳು, ಕೆಲವೇ ಕೆಲವು ವಾಕ್ಯಗಳಲ್ಲಿ ಕಥೆ ಹೇಳಲಾಗಿದೆ. ಖುಶಿ ಖುಶಿಯಾಗಿ ಓದುವ ಹಾಗೆ ಇದೆ. ಗುಲಾಬ್ ತೋಟದ ಮಾಲಿ ಕೆಲಸ ಮಾಡುತ್ತಾನೆ. ಅದಕ್ಕಾಗಿ ಅವನು ದಿನಾ ಗುಡ್ಡ ಹತ್ತಿ ಹೋಗಬೇಕು. ಹಿಮ ಸಂಪಿಗೆ ಹೂವಿನ ಮರದ ಕೆಳಗೆ ಕುಳಿತು ಕೆಲಸ ಮಾಡುತ್ತಿದ್ದ. ಅವನ ಹೆಂಡತಿ ಅವನಿಗೆ ‘ಚಂದ್ರನಂತೆ ಚಂದ ಇರುವ’ ಹಿಮಸಂಪಿಗೆ ಹೂವುಗಳನ್ನು ತರುವುದಕ್ಕೆ ಹೇಳಿದ್ದಳು. ಅಂತೆಯೇ ಅವನು ಒಂದು ದೊಡ್ಡ ಗೊಂಚಲು ಸಂಪಿಗೆ ಹೂವುಗಳನ್ನು ತೆಗೆದುಕೊಂಡು ಮನೆ ಕಡೆ ಹೊರಟ. ದಾರಿ ಸಾಗುತ್ತಿರಬೇಕಾದರೆ, ಈ ಹೂವುಗಳನ್ನು ಹೆಂಡತಿಗೆ ಮಾತ್ರ ಯಾಕೆ ಕೊಡಬೇಕು ಅನಿಸಿ, ಅವನಿಗೆ ಇಷ್ಟ ಇರುವ ಅನೇಕ ಮಂದಿಗೆ ಒಂದೊಂದಾಗಿ ಹೂವು ಕೊಡುತ್ತಾ ಹೋದ. ಯಾರಿಗೆಲ್ಲಾ ಹೂವು ಕೊಟ್ಟ, ಕೊನೆಗೆ ಹೆಂಡತಿಗೆ ಕೊಡಲು ಏನು ಉಳಿಯಿತು ಅಂತ ತಿಳಿದುಕೊಳ್ಳಲು ಪುಸ್ತಕ ಓದಿ. ಹೆಂಡತಿಗೆ ಅವನು ಕೊಟ್ಟ ವಸ್ತುವಿನಿಂದಾಗಿ ಅವನ ಮನೆ ಅಂಗಳದಲ್ಲಿಯೇ ರಾಶಿ ಹೂವು ಸಿಗುವಂತಾಯಿತು. ಹಾಗಾದರೆ ಏನಿರಬಹುದು?
ಲೇಖಕರು: ಮಾಲತಿ ಷಾ
ಅನುವಾದ: ಬಾಗೇಶ್ರೀ
ಚಿತ್ರಗಳು: ಅಮೃತಾ ಕಾಠೇಡ್
ಪ್ರಕಾಶಕರು: ತುಲಿಕಾ
ಬೆಲೆ: ರೂ.150/
ಐದನೇ ತರಗತಿ ಮತ್ತು ಮೇಲ್ಪಟ್ಟ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು. ಚಿತ್ರಗಳನ್ನು ಚಿಕ್ಕವರೂ ದೊಡ್ಡವರೂ ಆನಂದಿಸುವ ಹಾಗೆ ಇವೆ.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************