-->
ಜಗಲಿ ಕಟ್ಟೆ : ಸಂಚಿಕೆ - 13

ಜಗಲಿ ಕಟ್ಟೆ : ಸಂಚಿಕೆ - 13

ಜಗಲಿ ಕಟ್ಟೆ : ಸಂಚಿಕೆ - 13
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


   ಎಲ್ಲರಿಗೂ ನಾಗರಪಂಚಮಿ ಹಬ್ಬದ ಶುಭಾಶಯಗಳು....
    ಹಬ್ಬಗಳು ಶುರುವಾದವು. ಎದುರು ನೋಡುತ್ತಿದ್ದ ಸಂಭ್ರಮದ ದಿನಗಳು ಮತ್ತೆ ಬಂದಿದೆ. ಮಳೆಗಾಲದ ಸವಿಯೊಂದಿಗೆ ಎಲ್ಲರ ದಿನಗಳು ಖುಷಿ ಖುಷಿಯಾಗಿರಲಿ ಎಂದು ಬಯಸುವೆ. 
    ಮಕ್ಕಳ ಮುಗ್ಧ ಬರಹಗಳು ತುಂಬಾನೆ ಖುಷಿ ಕೊಡುತ್ತದೆ. ಜಗಲಿಯಲ್ಲಿ ಬರೆಯುತ್ತಿದ್ದ 5ನೇ ತರಗತಿ ಪುಟಾಣಿ ಹುಡುಗಿಯೊಬ್ಬಳನ್ನು ಗಮನಿಸುತ್ತಿದ್ದೆ. ಯಾವಾಗಲೂ ಪುಟ್ಟ ಪುಟ್ಟ ಬರಹಗಳನ್ನು ಬರೆದು ಕಳಿಸುತ್ತಿದ್ದಳು. ಬರೆದು ಕಳಿಸಿದ ಮೇಲೆ ಸರಿಯಾಗಿದೆಯಾ ಸರ್, ಚಂದಾಗಿದ್ಯಾ ಸರ್.... ಮುಗ್ಧ ಸ್ವರದಿಂದ ಕೇಳುತ್ತಿದ್ದಳು. ಆ ಪುಟಾಣಿಯು ಎಷ್ಟೊಂದು ನಿರೀಕ್ಷೆಗಳು ಎಷ್ಟೊಂದು ಆಕಾಂಕ್ಷೆಗಳನ್ನು ಹೊಂದಿರಬಹುದೆಂದು ಮನದಲ್ಲೇ ಯೋಚನೆ ಮಾಡುತ್ತಿದ್ದೆ. ಅಲ್ಪಸ್ವಲ್ಪ ತಿದ್ದುಪಡಿಗಳನ್ನು ಮಾಡಿಕೊಂಡು ಪ್ರಕಟಿಸಿ ಸಂತೋಷವನ್ನು ಕೊಡುವ ಕೆಲಸವನ್ನು ಮಾಡಿದ್ದು ತುಂಬಾ ಫಲಪ್ರದವಾಯಿತು. ಹೀಗೆ ಬರೆದು ಕಳಿಸುತ್ತಿದ್ದ ಹುಡುಗಿ ಪ್ರಬುದ್ಧವಾಗಿ ಬರೆಯುವ ಹಂತವನ್ನು ತಲುಪಿರುವುದು ಒಂದು ರೀತಿಯ ಸಾಧನೆಯೂ ಹೌದು.
       ಸ್ವಾತಂತ್ರ್ಯೋತ್ಸವದ ದಿನದಂದು ಶಿಕ್ಷಕರಾದ ಮಹೇಶ್ ಕುಮಾರ್. ವಿ. ಕರ್ಕೇರ ಇವರು ಹೈಫಾ ಕದನದ ಲೇಖನವನ್ನು ನಮ್ಮ ಮುಂದಿಟ್ಟಿದ್ದರು. ಇಂತಹ ಅನೇಕ ಸಂಗತಿಗಳು ನಮಗೆ ಗೊತ್ತಿಲ್ಲದೆ ಮರೆಯಾಗುತ್ತಿದೆ. ಸ್ವಾತಂತ್ರ್ಯ ವೀರರ ಕಥೆಗಳು ಅಷ್ಟೇ. ಅಂದಿನ ಬಲಿದಾನ, ಸೇವೆ, ತ್ಯಾಗಗಳು ಮೌಲ್ಯ ಕಾಣಬೇಕು. ಅವರು ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕೆ ಸರ್ವಕಾಲವು ಬೆಲೆ ಕೊಡುವವರಾಗಬೇಕು. ಡಾ.ಬಿ.ಆರ್ ಅಂಬೇಡ್ಕರ್ ಹೇಳಿದಂತೆ, "ಇತಿಹಾಸ ತಿಳಿಯದವ ಇತಿಹಾಸ ಸೃಷ್ಟಿಸಲಾರ.." ಎನ್ನುವ ಮಾತು ಅಕ್ಷರಶಃ ಸತ್ಯ.
            
         
     ಕಳೆದ ಸಂಚಿಕೆಯ ಜಗಲಿಕಟ್ಟೆ - 12 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು, ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

     ನಮಸ್ತೆ ಸರ್ ನಾನು ಕವಿತಾ ಶ್ರೀನಿವಾಸ್  
ಚಾರಣದದೊಂದಿಗೆ ಹಕ್ಕಿಕತೆಯಲ್ಲಿ ಅರವಿಂದ ಕುಡ್ಲ ಸರ್ ಹಿಮಾಲಯದಲ್ಲಿ ಗುಬ್ಬಚ್ಚಿಯನ್ನು ನೋಡಿದ ಸಂತೋಷವನ್ನು ಹಂಚಿಕೊಂಡದ್ದು... ಗುಬ್ಬಚ್ಚಿಗಳು ದಟ್ಟ ಕಾಡುಗಳಲ್ಲಿ ಬದುಕದೆ ಮನುಷ್ಯರು ವಾಸಿಸುವಲ್ಲೆಲ್ಲಾ ಇರುವ ಹಕ್ಕಿಗಳು ಎಂದು ಕೇಳಿದ್ದೆ. ಹಿಮಾಚ್ಛಾದಿತ ಪ್ರದೇಶದಲ್ಲೂ ಗುಬ್ಬಚ್ಚಿಗಳಿವೆ ಎಂಬುದನ್ನು ತಿಳಿದುಕೊಳ್ಳಲು ಸರ್ ಲೇಖನ ಸಹಕಾರಿಯಾಯಿತು. 
     ಯಾಕೂಬ್ ಸರ್ ಅವರ "ಹೃದಯದ ಮಾತು" ಅಂಕಣದಲ್ಲಿ ಕಠಿಣ ‌ಸಮಯದಲ್ಲಿ ತೆಗೆದುಕೊಳ್ಳುವ ಗಟ್ಟಿ ನಿರ್ಧಾರಗಳು... ಮಾತು ತುಂಬಾ ಇಷ್ಟವಾಯ್ತು. ಎಂತಹ ಸಮಯದಲ್ಲಿಯೂ ಬದುಕೇ ನಮ್ಮ ‌ಆಯ್ಕೆಯಾಗಿರಬೇಕು, ಬದುಕನ್ನು ಪ್ರೀತಿ ಸಹನೆಯಿಂದ ‌ನಿರ್ವಹಿಸುವ ಮಾರ್ಗವನ್ನು ಕಂಡುಕೊಳ್ಳಬೇಕು ಎಂಬುದು ಮನವರಿಕೆಯಾಯಿತು. 
    ಅಬ್ಬಬ್ಬಾ..! ಮಹೇಶ್ ಸರ್ ವಿಸ್ತ್ರತವಾಗಿ ವಿವರಿಸಿದ ರಣ ರೋಚಕ ಹೈಫಾ ಕದನದ ಚಾರಿತ್ರಿಕ ಹಿನ್ನೆಲೆ ಕಣ್ಣಿಗೆ ಕಟ್ಟಿದಂತಿದೆ.
     ಸ್ವಾತಂತ್ರೋತ್ಸವದ ವಿಶೇಷ ಮಕ್ಕಳ ಕವನ ಓದಿ ಖುಷಿಯಾಯಿತು. 
     ಪರಿಸರದಲ್ಲಿ ಕಾಣಲು ಅಪರೂಪವಾಗುತ್ತಿರುವ ಸಸ್ಯ ಪ್ರಭೇದಗಳನ್ನು ಜಗಲಿಯಲ್ಲಿ ಪರಿಚಯಿಸಿ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಕಾರಣರಾದ ವಿಜಯ ಮೇಡಂ ನಿಮಗೆಲ್ಲರಿಗೂ ನನ್ನ ಅಂತರಾಳದ ನಮನಗಳು. ಓದುವ ಖುಷಿಯನ್ನು ನೀಡಿದ ಮಕ್ಕಳ ಜಗಲಿಗೆ ಧನ್ಯವಾದಗಳು.
......................... ಶ್ರೀಮತಿ ‌ಕವಿತಾ ಶ್ರೀನಿವಾಸ್
'ಚೈತನ್ಯ' ನೆಲ್ಯಡ್ಕ, ಅಂತರ
ನರಿಕೊಂಬು ಗ್ರಾಮ ಮತ್ತು ಅಂಚೆ, 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


ನಮಸ್ತೇ,
     ಕಳೆದ ವಾರದ ಜಗಲಿಯ ಇಣುಕು ನೋಟ ... 
  'ನಾನು' ಎಂಬ ಅಹಂಕಾರದ ಬಂಧನದಿಂದ ಮುಕ್ತಿಗೊಂಡು ಶಾಂತಿ, ಸಹಬಾಳ್ವೆಯಿಂದ ಜೀವಿಸುವುದೇ ನಿಜವಾದ ಸ್ವಾತಂತ್ರ್ಯ. ಸ್ವಾತಂತ್ರ್ಯದ ಕುರಿತಾದ ಸುಂದರ ಲೇಖನ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ. ವಂದನೆಗಳು ಸರ್ ತಮಗೆ. 
      ಪುಟ್ಟ ಮಗುವಿನಿಂದ ಹಿಡಿದು ಹಿರಿಯರ ತನಕ ಹಾಗೂ ಪ್ರಕೃತಿಯಲ್ಲಿರುವ ಎಲ್ಲರಲ್ಲೂ ಗುರುವನ್ನು ಕಾಣುವ ಜೊತೆಗೆ ಗುರುವಿನ ಮಹತ್ವದ ಅರಿವನ್ನು ಮೂಡಿಸುವ ಚಂದದ ಲೇಖನ ರಮೇಶ್ ಸರ್ ರವರಿಂದ. ಧನ್ಯವಾದಗಳು ಸರ್ ತಮಗೆ.  
     ಮಷಿನ್ ಗನ್ ಗಳನ್ನು ಹೊಂದಿದ್ದ 1500 ಟರ್ಕಿ ಸೈನಿಕರನ್ನು ಜೋಧಪುರದ ಅಶ್ವದಳ ಮತ್ತು ಕೇವಲ 400 ರಷ್ಟಿದ್ದ ನಮ್ಮ ಮೈಸೂರಿನ ವೀರ ಯೋಧರು ಕುದುರೆಯ ಮೇಲೇರಿ ಈಟಿಯಿಂದ ಸೋಲಿಸಿದ ಸಾಹಸವನ್ನು ಸಾರುವ ದೆಹಲಿಯ ತೀನ್ ಮೂರ್ತಿ ಸ್ಮಾರಕದ ಮೂವರು ಸೈನಿಕರ ಕಥೆಯು ಅದ್ಭುತವಾಗಿತ್ತು. ಬಹಳ ದಿನಗಳ ನಂತರ ಮಹೇಶ್ ರವರ ಲೇಖನವನ್ನು ಕಂಡಂತಾಯಿತು. ಮಹೇಶ್ ಸರ್ ಗೆ ನನ್ನ ಧನ್ಯವಾದಗಳು. ಮಕ್ಕಳ ಕವನಗಳಲ್ಲಿ ಸ್ವಾತಂತ್ರ್ಯದ ಕುರಿತಾದ ಧನ್ವಿತಾ ಮತ್ತು ನಂದಿತಾರವರ ಕವನಗಳು ಹಾಗೂ ದಿವ್ಯಶ್ರೀ ಅವರ ಕವನಗಳು ಚೆನ್ನಾಗಿವೆ. ಅಭಿನಂದನೆಗಳು ಮಕ್ಕಳಿಗೆ. 
     ಅರವಿಂದರ ಹಕ್ಕಿಕಥೆಯಲ್ಲಿ ಅಳಿವಿನಂಚಿನಲ್ಲಿರುವ ಕೆಂಗದ್ದು ಗುಬ್ಬಚ್ಚಿಯ ಪರಿಚಯ ಸೊಗಸಾಗಿತ್ತು. 
     ನಾನು ಸಣ್ಣವನಿದ್ದಾಗ ಪ್ರಾಥಮಿಕ ಶಾಲೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ನನ್ನಾರಿ ಬೇರಿನ ಪರಿಮಳ ಅದನ್ನು ಕೆಲವೊಮ್ಮೆ ಕಿತ್ತು ತಿಂದು ಖುಷಿ ಪಟ್ಟ ಆ ನೆನಪು ವಿಜಯಾ ಮೇಡಂರವರ ನಿಷ್ಪಾಪಿ ಸಸ್ಯಗಳ ಲೇಖನದಿಂದ ಮರು ನೆನಪಿಸುವಂತೆ ಮಾಡಿತು. ಈಗ ಅಪರೂಪವಾಗಿರುವ ಸಸ್ಯದ ಕುರಿತಾದ ಲೇಖನ ತುಂಬಾ ಸೊಗಸಾಗಿದೆ. ಧನ್ಯವಾದಗಳು ಮೇಡಂ.
      ಸಫಲತೆಯ ಗುರಿಯನ್ನು ಸೇರಲು ಅಗತ್ಯವಾದ ಅಂಶಗಳನ್ನು ಉದಾಹರಣೆ ಸಹಿತ ಚೆಂದವಾಗಿ ವಿವರಿಸಿದ್ದಾರೆ ಯಾಕೂಬ್ ಸರ್ ರವರು. ಧನ್ಯವಾದಗಳು ಸರ್ ತಮಗೆ.
      ವಾಣಿಯಕ್ಕನವರ ನೀಲಿಯ ರಹಸ್ಯಗಳು ಪುಸ್ತಕದ ಪರಿಚಯ ಸೊಗಸಾಗಿತ್ತು. 
     ಪದದಂಗಳ 80 ನೇ ಸಂಚಿಕೆ ತಲಪಿದೆ. ಹೀಗೆ ಶತಕದತ್ತ ಮುನ್ನುಗ್ಗಲಿ. ರಮೇಶ್ ಸರ್ ರವರಿಗೆ ಅಭಿನಂದನೆಗಳು. 
     ಶಿಕ್ಷಕರ ಮನವೊಲಿಕೆಯಿಂದ ಅನಿಯಮಿತ ಗೈರುಹಾಜರಿಯಿಂದ ನಿಯಮಿತವಾಗಿ ಶಾಲೆಗೆ ಹಾಜರಾಗಿ ಎಲ್ಲರಿಗೂ ಮಾದರಿಯಾದ ವಿದ್ಯಾರ್ಥಿಯ ಅಕಾಲಿಕ ಅಂತ್ಯ ತುಂಬಾ ದುಃಖಕರ. ಶಿಕ್ಷಕರ ಡೈರಿಯಲ್ಲಿಲೋಕೇಶ್ ಸರ್ ರವರು ತಮ್ಮ ಸುಂದರ ಅನುಭವವನ್ನು ಹಂಚಿಕೊಂಡಿದ್ದಾರೆ.
     ಹೊಸ ಹೊಸ ವಿಚಾರಗಳನ್ನು ಹೊರತರುತ್ತಿರುವ ಜಗಲಿಯ ಎಲ್ಲರಿಗೂ ಜೊತೆಗೆ ಜಗಲಿಯಲ್ಲಿ ಕೈಯಾಡಿಸುತ್ತಿರುವ ಎಲ್ಲಾ ಮಕ್ಕಳಿಗೆ ಹಾಗೂ ತಾರಾನಾಥರಿಗೆ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು, ಶ್ರೀಮತಿ ‌ಕವಿತಾ ಶ್ರೀನಿವಾಸ್.....ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************




Ads on article

Advertise in articles 1

advertising articles 2

Advertise under the article