-->
ಕವನಗಳ ರಚನೆ : ರೇಣುಕಾ ಸಂಗಪ್ಪನವರ , ದ್ವಿತೀಯ ಪಿ.ಯು.ಸಿ

ಕವನಗಳ ರಚನೆ : ರೇಣುಕಾ ಸಂಗಪ್ಪನವರ , ದ್ವಿತೀಯ ಪಿ.ಯು.ಸಿ

ಕವನಗಳ ರಚನೆ : ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ 


ನಾ ಅಂಬೆಗಾಲಿಟ್ಟಾಗ ನಕ್ಕಾಕಿ
ಜಾರಿ ಬಿದ್ದಾಗ ಕೈ ಇಡಿದು ಇತ್ತಾಕಿ
ಪೆಟ್ಟಾಯಿತೆಂದು ಕೇಳಾಕಿ
ಎದೆಗಪ್ಪಿಕೊಂಡು ಅತ್ತಾಕಿ...!!!
ಯಾಕಂದ್ರ ನನ್ ಅವ್ವಾ ರೀ ಇಕೀ
     ವರ್ಣಿಸಲಾಗದ ಪ್ರೀತಿಯ ಕೊಟ್ಟಾಕಿ
     ದಿನಾ ಕೈ ತುತ್ತ ನೀಡಾಕಿ
     ಬೆಳಗೆದ್ದ ಬಿಳಿ ಜೋಳದ ರೊಟ್ಟಿ
     ಮಾಡಿ ಕೋಡಾಕಿ...!!!
     ಯಾಕಂದ್ರ ನನ್ ಅವ್ವಾ ರೀ ಇಕೀ
ಅಪ್ಪನ ಕಣ್ಣ ತಪ್ಪಿಸಿ
ಅಡ್ಗಿ ಮನ್ಯಾನ ಸಾಸಬಿ ಡಬ್ಯಾಗಿನ
ರೊಕ್ಕನ ಮಡಚಿ ಕೂಡಾಕಿ
ಏನಾರ ಇರಲಿ ನನ್ನ ಮಕ್ಳು
ಚಂದ ಇರಲಿ ಅಂತ
ದೇವರ ಹಂತೇಕ ಬೇಡಾಕಿ...!!!
ಯಾಕಂದ್ರ ನನ್ ಅವ್ವಾ ರೀ ಇಕೀ
      ನಾ ತಪ್ಪ ಮಾಡಿರ್ ತಿದ್ದಿ
      ಬೈದು ಬುದ್ದಿ ಹೇಳಾಕಿ
      ನಾ ಅವ್ವಾ ಅಂತ ಹತ್ರ ಹೋದ್ರ
      ಮುದ್ದು ಮಾಡಿ ನನ್ನ ರಾಜಕುಮಾರಿ ಅನ್ನಾಕಿ...!!!
      ಯಾಕಂದ್ರ ನನ್ ಅವ್ವಾ ರೀ ಇಕೀ
ಎಲ್ಲಾರ್ ಮುಂದ ನಕ್ಕೋತ ಇರಾಕಿ
ಕದ್ದು ಸೇರಗಲಿ ಕಣ್ಣೀರ ಒರಸಿಕೊಲಾಕಿ
ಜನ್ಮ ಜನ್ಮಕೊ ಮಾಸದ
ಪ್ರೀತಿಯ ಋಣ ಕೊಟ್ಟಾಕಿ
ತನ್ನ ಉಸಿರಲ್ಲೇ ನನ್ನ ಹೆಸರ
ಇಟ್ಟಕೊಂಡು ಬದುಕ ಕಟ್ಟಿದಾಕಿ...!!!
ಯಾಕಂದ್ರ ನನ್ ಅವ್ವಾ ರೀ ಇಕೀ
     ಇಕೀನ ಮಾತೇ ನಂಗ ವೇದ ವಾಕ್ಯರೀ
     ಇಕೀನ ನಗುನ ನಂಗ ಸ್ವರ್ಗರೀ
     ಇಕೀನ ಆಯಸ್ಸೇ ನಂಗ ಸಂಪತ ರೀ
     ಇಕೀನ ನಂಗ ದೇವರ-ದಿಂಡರ ರೀ
     ಇಕೀನಿಂದ ನನ್ ಬಾಳ ಬಂಗಾರ್ರಿ...!!!
     ಯಾಕಂದ್ರ ನನ್ ಅವ್ವಾ ರೀ ಇಕೀ
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************


       
       ಬಯಸದೆ ಬಾಳಿನಲ್ಲಿ ಬಂದಿರುವೆ
       ಬಯಸಿದರೂ ಸಿಗದೇ ಹೋಗಿರುವೆ
       ಕಾರಣ ತಿಳಿಸದೇ ದೂರವಾಗಿರುವೆ
        ನಿನಗಾಗಿ ನಾ ಕಾಯುತ್ತಿರುವೆ...
ಮರೆತರು ಮರುಕಳಿಸೋ ನೆನಪು ನೀನಾಗಿರುವೆ
ಆ ನೆನಪಿನ ದೋಣಿಯಲ್ಲಿ ನಾ ಸಾಗುತ್ತಿರುವೆ
ಎನ್ನ ಹೃದಯದಲ್ಲಿ ನಿನೇ ತುಂಬಿರುವೆ
ನಿನಗಾಗಿ ನಾ ಕಾಯುತ್ತಿರುವೆ...
      ಸವಿದರು ಸವೆಯದ ಪ್ರೀತಿ ಕೊಟ್ಟಿರುವೆ
      ಕೊಟ್ಟು ನನ್ನಿಂದ ದೂರಾಗಿರುವೆ
      ಇದು ನಿನಗೆ ಸರಿಯೇ..?
      ನಿನಗಾಗಿ ನಾ ಕಾಯುತ್ತಿರುವೆ...
ನೀ ಮರಳಿ ಬರುವೆ
ಎಂಬ ಆಸೆಯಲ್ಲಿ ನಾ ಇರುವೆ
ನಿನಗಾಗಿ ನಾ ಕಾಯುತ್ತಿರುವೆ...
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************

          
ಮನೆ ಬೆಳಗಲು ನಂದಾದೀಪಗಳಂತೆ
ಎರಡು ಮುದ್ದಿನ ಮಕ್ಕಳು
ಆ ದೀಪಗಳಿಗೆ ಬತ್ತಿ - ಎಣ್ಣೆ
ಹಾಕಿದವರು ತಂದೆ - ತಾಯಿಗಳು
    ಒಂದು ದೀಪ ದೇವರ ಮನೆಯಲ್ಲಿ
    ದೇವರ ಮುಂದೆ ರಾರಾಜಿಸಿತು
    ಇನ್ನೊಂದು ದೀಪ ಅಡುಗೆ ಮನೆಯಲ್ಲಿ
    ಅನ್ನದ ಒಲೆಯ ಮುಂದೆ ಬತ್ತಿಹೋಯಿತು
ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ದೊರೆತಿದ್ದು
ದೇವರ ಮುಂದಿನ ಬೆಳ್ಳಿಯ ದೀಪಕ್ಕೆ
ಆದರೆ, ಬಡತನದ ನೋವು ಕಾಣಿಸಿದ್ದು
ಒಲೆಯ ಪಕ್ಕ ಇದ್ದ ಮಣ್ಣಿನ ದೀಪಕ್ಕೆ
     ಬೆಳ್ಳಿಯ ದೀಪ ಬೆಳಗಿದರೇನು?
     ದೊರೆತದ್ದು ಕೇವಲ ಬೆಳಕು
     ಮಣ್ಣಿನ ದೀಪ ಹೊತ್ತಿ ಕರಕಲಾದರೇನು?
     ಸಿಕ್ಕಿದ್ದು ಸಂತೋಷದ ಬದುಕು
ಬೆಳಕಾದರೇನು..? ಬದುಕಾದರೇನು..?
ಮರೆಯಬಾರದು ಬತ್ತಿ - ಎಣ್ಣೆ
ಹಾಕಿದ ಹೆತ್ತವರನ್ನು...
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************

      
ಗೆಳೆಯಾ...
ಕಾಯಿತ್ತಿರುವೆ ನಿನಗಾಗಿ
ಜಡಿ ಮಳೆಯಲ್ಲಿ ಕೊಡೆಹಿಡಿದು...!!
       ಮತ್ತೊಮ್ಮೆ ಬರಬರದೇ
       ನನ್ನೀ ಬಾಳಲ್ಲಿ...
       ಇಂದೊಮ್ಮೆ ತರಬಾರದೇ
       ಸೃಷ್ಟಿಯ ಅಂಗೈಯಲ್ಲಿ...!!
ಕಲ್ಪನೆಗೆ ನಿಲುಕದ
ಕನಸ್ಸೊಂದ ಕಟ್ಟೋಣ ಬಾ...
ಬರಡಾದ ಹೃದಯದಲ್ಲಿ
ಒಂಚೂರು
ಪ್ರೀತಿಯ ಬಿತ್ತು ಬಾ...!!
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ *******************************************

      

    ನಾ ಗೀಚಿದ ಕವಿತೆಯಲ್ಲಿ ಸಾಲು ನೀನು
    ಎನ್ನ ಬಾಳಿನ ಬೆಳದಿಂಗಳು ನೀನು
    ನೀ ಜೊತೆಗಿದ್ದರೆ ಗೆಲ್ಲುವೆನು
    ಜಗವನ್ನೇ ನಾನು..
ನಾ ಕಟ್ಟಿದ ಕನಸ್ಸಿನಲ್ಲಿ ಕಾಣೆಯಾಗಿರುವೆ ನೀನು
ಎನ್ನ ಭಾವನೆಯಲ್ಲೊಂದು ಬೆಳಕು ನೀನು
ನೀ ಪ್ರೀತಿಸಿದರೆ ಮರೆಯುವೆನು
ನನ್ನನ್ನೇ ನಾನು...!!
     ನಾ ಮೂಡಿದ ಹೂವಿನಲ್ಲಿ ಸುಗಂಧ ನೀನು
     ಎನ್ನ ಮನಸ್ಸಿನ ಪ್ರತಿಬಿಂಬ ನೀನು
     ನೀ ಕೊಟ್ಟರೆ ಮೂಡಿಯುವೆನು
     ಹೂವನ್ನೇ ನಾನು...
ನಾ ಹಾಡುವ ಹಾಡಿನಲ್ಲಿ ಸ್ವರ ನೀನು
ಎನ್ನ ಮನದಾಳದ ಪಿಸು ಮಾತು ನೀನು
ನೀ ಹೂಂ ಎಂದರೆ ಪ್ರೀತಿಸುವೆನು
ನಿನನ್ನೇ ನಾನು...!!
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************


            
ಆಗಸವ ಕೈಯಲ್ಲಿ ಹಿಡಿಯುವ ಹಂಬಲ
ನೀವಾದಿರಿ ನನಗೆ ಬೆಂಬಲ
ಆಕಾಶದೆತ್ತರದ ಎನ್ನ ನಂಬಿಕೆ
ನನ್ನೆಲ್ಲ ಇಚ್ಛೆಗಳ ಈಡೇರಿಸುವ ಸಾಹುಕಾರ..
    ಸಾಗರದಿ ಹೊಳೆಯುವ ಮುತ್ತು
    ನೀ ನೀಡಿದ ಬೆಳದಿಂಗಳ ಕೈತುತ್ತು
    ಬದುಕಿಗೆ ಆಸರೆ ನೀ
    ನನ್ನ ಪ್ರೀತಿಯ ಅಗಣಿತ ಸಂಪತ್ತು ನೀ..
ಹುಸಿಮುನಿಸಿನ ತುಸು ಕೋಪಕೆ
ನೀನಾದೆ ಪ್ರೀತಿಯ ಲಸಿಕೆ
ಗದರು ಮೇಸೆಯ ಹೃದಯವಂತಿಕೆಯ ತಾಯಿ
ನನ್ನೊಳಗೆ ನಿನ್ನ ಪ್ರೀತಿಯ ಸಾಲೇ..
      ಅಕ್ಕರೆಯ ಅಗಣಿತ ಸಾಲು
      ಪೋಣಿಸಿದರು ಸಾಲದು
      ಪದಗಳಲ್ಲಿ ಶಬ್ದಕೋಶಧಿ
      ನಿನ್ನ ವರ್ಣಿಸಲು ಅಪ್ಪಾ..
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************

            
ಎಲ್ಲದಕ್ಕೂ ಮಿಗಿಲಾದ ಬಂಧನ
ಸಾಸಿವೆ ಕೋಪ ಸಾಗರ 
ಸಂತೋಷಗಳ ಸಮ್ಮಿಲನ
ತರ್ಲೆ ತುಂಟಾಟದ ಸಮ್ಮಿಲನ...
    ಆಗಸದಷ್ಟು ಆತ್ಮೀಯತೆ ಆಲಂಬನ
    ಹಲವು ಕಾಲ ಮುನಿಸಿನ ಸಿಹಿ ಸಿಂಚನ
    ನೋವ ಮರಿಸೋ ವಿತ್ರತ್ವ ನಯನ...
ಹೇಳದೆ ಅರ್ಥಸಿಕೊಳ್ಳುವ ಸದ್ಗುಣ
ಅದೋ ಜೀವನದ ಅತ್ಯುತ್ತಮ ಕ್ಷಣ
ಜಗದ ಸುಖ ಕೊಂಡುಕೊಳ್ಳೋ ಸಿರಿತನ...
     ಬಾಳೊಂದು ಸುಂದರ ಪಯಣ
     ಭಾವನೆಗಳಿಗೆ ಸ್ಪಂದಿಸುವದೊಂದು ಮನ
     ಎಷ್ಟೇ ಹೇಳಿದರು ಮುಗಿಯದ ಕಥನ...
ಮೇಘಲತೆಯ ಸುಂದರ ಗೆಳೆತನ
ಸದಾ ಸಂಭ್ರಮದ ಕಿರಣ
ಹೀಗೆ ಸ್ನೇಹದ ಕಡಲಲ್ಲಿ 
ನಲಿಯುತ ಸಾಗೋಣ...
.............................. ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************


       
ಭೂಮಿಗೆ ಬಂದಾಗ ನೀ ಒಂಟಿ
ಭೂಮಿ ಬಿಟ್ಟು ಹೋಗುವಾಗ ನೀ ಒಂಟಿ
     ಯಾರು ಬಂದಿಹರು ನಿನ್ನ ಜೊತೆ ?
     ಯಾರು ಬರುವರು ನಿನ್ನ ಜೊತೆ ?
ಧರೆಯ ಮೇಲಿರುವಷ್ಟು ಕಾಲ
ಬಾಳು ನೀ ನಿನ್ನೊಟ್ಟಿಗಿರುವವರೊಟ್ಟಿಗೆ
       ಸಮಸ್ಯೆ ಬಂದಾಗ ನೀ ಒಂಟಿ
       ಸಮಸ್ಯೆ ಎದುರಿಸುವಾಗ ನೀ ಒಂಟಿ
ಯಾರು ತಿಳಿಸುವರು ನಿನಗೆ ಪರಿಹಾರ ?
ಯಾರಾಗುವರು ನಿನಗೆ ಪರಿಹಾರ ?
       ನೀನೆ ಎದುರಿಸಬೇಕು ಬಂದಿದ್ದು
       ತಿಳಿ ನಿನ್ನ ಸಮಸ್ಯೆಯದು
ನಡೆಯುವಾಗ ನೀ ಒಂಟಿ
ನುಡಿಯಿವಾಗ ನೀ ಒಂಟಿ
      ಯಾರು ನಡೆವರು ನಿನ್ನೊಟಿಗೆ ?
      ಯಾರಾಗುವರು ಜೊತೆ ನಿನ್ನ ನುಡಿಗೆ ?
ನೀನೆ ನಡಿಯಬೇಕು ನಿನ್ನ ಶಕ್ತಿ ಇರುವಷ್ಟು
ನುಡಿ ನಿನಗೆ ತಿಳಿದಷ್ಟು
       ಸಾಗು ನೀ ಒಂಟಿಯಾಗಿ..
       ಯಾರಿರುವರು ನಿನಗಾಗಿ..
ಕಾಯಬೇಡ ಬಾರದವರಿಗಾಗಿ..
ಹುಡುಕಬೇಡ ನಿನ್ನದಲ್ಲದನ್ನು..
       ಈ ಪಯಣದಲ್ಲಿ ಒಂಟಿಯಾಗಿದ್ದರೇನು..
       ಇರುವಷ್ಟು ಕಾಲ ಬಾಳು ಬದುಕಿನಲ್ಲಿ
ಸಿಗುವವರ ಜೊತೆ ಸುಂದರವಾದ 
ಜೀವನದ ಸಿಹಿಯನ್ನು ಸವಿದು ಬಿಡು....
................................ ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************

             
ಹೇ ಗೆಳೆಯ...
ಏನೆಂದು ಹೇಳಲಿ ನಿನ್ನ ಕುರಿತು
ತಿಳಿಯದೀಗ ನನಗೆ
ಸ್ನೇಹವೆಂಬ ಪದಕ್ಕೆ 
ಅರ್ಥ ನೀಡಿದವ ನೀ
      ನನ್ನ ಜೊತೆಗೆ ನಾನೆ ಹೋಗುತಿದ್ದೆ
      ಒಬ್ಬಳೇ ಸಂಚಾರಿಯಾಗಿ
      ನೀ ಬಂದೆ ಸ್ನೇಹವೆಂಬ ಲೋಕಕ್ಕೆ
      ಕಾಳಜಿಯ ರೂವಾರಿಯಾಗಿ
ಪಂಜರದೊಳಗಿನ ಪಾರಿವಾಳಕ್ಕೆ
ಸಾಂತ್ವಾನ ಹೇಳಲು ಚಿಟ್ಟೆ ಜೊತೆಯಾದಂತೆ
ನಾ ಕತ್ತಲೆಯ ಮಾಯೆಯೊಳಿರಲು
ನೀ ಬಂದೆ ಈ ಬಾಳಿಗೆ ಬೆಳಕಂತೆ
       ಮೌನದಲ್ಲೇ ಉತ್ತರ ನೀಡುತ್ತಿದ್ದೆ
       ಅದೆಷ್ಟೋ ಪ್ರಶ್ನೆಗಳಿಗೆ
       ಭಾವನೆಗಳ ಮೂಲಕ ಸ್ಪಂದನೆ
       ನೀಡಿ ಕನ್ನಡಿಯಾದೆ
ಕೇಳುವುದಿಲ್ಲ ಇನ್ನೇನು ನಾ.. ನಿನ್ನಲ್ಲಿ
ನಿನ್ನ ಪ್ರಯತ್ನವು ಸದಾ ಗರಿಯಂತಿರಲಿ
ಯಾರೆಷ್ಟೇ ತುಳಿದರು ಚಿಗುರೊಡೆಯುತ್ತಿರಲಿ
ಇರುವೆನು ನಾ ಇರುವತನಕ ಜೊತೆಯಲಿ
................................ ರೇಣುಕಾ ಸಂಗಪ್ಪನವರ
ದ್ವಿತೀಯ ಪಿ.ಯು.ಸಿ
ಕರ್ನಾಟಕ ಮಹಾವಿದ್ಯಾಲಯ ಧಾರವಾಡ
ಧಾರವಾಡ ಜಿಲ್ಲೆ ********************************************    





Ads on article

Advertise in articles 1

advertising articles 2

Advertise under the article