-->
ಆಟಿದ ಅಮಾವಾಸ್ಯೆ - ಲೇಖನ : ಶಾನ್ವಿ ವಿ  ಪ್ರಥಮ ಪಿಯುಸಿ

ಆಟಿದ ಅಮಾವಾಸ್ಯೆ - ಲೇಖನ : ಶಾನ್ವಿ ವಿ ಪ್ರಥಮ ಪಿಯುಸಿ

ಲೇಖನ : ಶಾನ್ವಿ ವಿ  
ಪ್ರಥಮ ಪಿಯುಸಿ 
ಸೈಂಟ್ ಅಲೋಸಿಯಸ್ ಪದವಿಪೂರ್ವ ಕಾಲೇಜು 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ.
 
                  
    ನಮ್ಮ ತುಳುನಾಡಿನಲ್ಲಿ ತಲ ತಲಾಂತರದಿಂದ ನಡೆದು ಬಂದಿರುವ ಒಂದು ವಿಶೇಷ ಆಚರಣೆ 'ಆಟಿದ ಅಮಾವಾಸ್ಯೆ'. ಆಟಿದ ಅಮಾವಾಸ್ಯೆಯಂದು ನನ್ನ‌ ಅಜ್ಜಿ ಮನೆಯಲ್ಲಿ ನಡೆಯುವ ಕೆಲವು ಹಾಸ್ಯದ ಕ್ಷಣಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
    ಅದೊಂದು ಸಂಭ್ರಮದ ದಿನ. ನಾವು ಎಲ್ಲರೂ ಸೇರಿ ಸುಮಾರು 5 ಮಂದಿ ಮಕ್ಕಳಿದ್ದೆವು. ಆ ದಿನ ಬೆಳಗ್ಗೆ ಬೇಗನೆ ಎದ್ದು ಶುಚಿಯಾಗಿ ಚಾವಡಿಗೆ ಬಂದು ಗುಂಪಾಗಿ ಕುಳಿತು ಮಾತನಾಡುತ್ತಿದ್ದೆವು. ಏಕೆಂದರೆ ನಾವು ಒಟ್ಟಾಗಿ ಸಿಗುವುದು ತುಂಬಾ ಕಡಿಮೆಯಾದ್ದರಿಂದ ನಮಗೆ ಮಾತನಾಡುವುದಕ್ಕೆ‌ ತುಂಬಾ‌ ವಿಷಯಗಳಿರುತ್ತಿತ್ತು. ನಮಗೆ ಎಷ್ಟು ಸಮಯ‌ ಕೊಟ್ಟರೂ ಮಾತುಕತೆ ಮುಗಿಯುತ್ತಿರಲಿಲ್ಲ‌...!! 
     ಹೀಗೆ ನಾವು ಹರಟೆ ಹೊಡೆಯುತ್ತಾ ಕುಳಿತಿರುವಾಗ ನಮ್ಮ ಅಜ್ಜಿ "ಮಕ್ಕಳೇ....... ಒಮ್ಮೆ ಎಲ್ಲರು ಬೇಗನೆ ಅಡುಗೆ ಮನೆಗೆ ಬನ್ನಿ" ಎಂದು ಕರೆದರು. ಆಗ ನಾವು ಬೆಳಗಿನ ತಿಂಡಿ ಕೊಡುತ್ತಾರೋ ಏನೋ ಎಂದು‌ ಓಡಿ ಓಡಿ ಹೋದೆವು. ಅಲ್ಲಿ ನೊಡುವಾಗ ಕಹಿಯಾದ ಒಂದು ಕಷಾಯ ತಯಾರಿಸಿ, ಅಜ್ಜಿ ನಾವು ಬರುವ ಕಡೆ ನೋಡುತ್ತಿದ್ದರು... ನಾವು ಆಶ್ಚರ್ಯವಾದ ಭಾವನೆಯನ್ನು ಮುಖದಲ್ಲಿ ತೋರಿಸಿ ಕಣ್ಣು ಬಾಯಿ ಬಿಟ್ಟು ಕಷಾಯದ ಕಡೆ ನೋಡಿದೆವು..!! ನಿಜವಾಗಿ ಹೇಳಬೇಕೆಂದರೆ ನಮಗೆ ಅಂದು ಆಟಿ‌ ಅಮವಾಸ್ಯೆ ಎಂದು ಗೊತ್ತಿರಲಿಲ್ಲ. ಅಜ್ಜಿ , "ಒಬ್ಬೊಬ್ಬರಾಗಿ ಬಂದು ಕಷಾಯ ತೆಗೆದು ಕುಡಿಯಿರಿ, ಕುಡಿದ ಮೇಲೆ ಬೆಲ್ಲ ಕೊಡುತ್ತೇನೆ" ಎಂದರು. ನಾವು ಮತ್ತೊಬ್ಬರು ದೂಡಿಕೊಂಡು "ನೀನು ಮೊದಲು ಕುಡಿ, ನೀನು ಮೊದಲು ಕುಡಿ" ಎಂದು ಹೇಳಿ ಅಡುಗೆ ಮನೆ ಸುತ್ತಲೂ ಓಡಲು ಶುರು ಮಾಡಿದೆವು. ಈ ನಾಟಕ ಕಹಿಯಾದ ಕಷಾಯ ಕುಡಿಯುವುದರಿಂದ ತಪ್ಪಿಸಿಕೊಳ್ಳಲು ಮಾತ್ರ. ಆದರೂ ಕೂಡ ಅದನ್ನು ಕುಡಿಯಲೇ ಬೇಕಾಗಿತ್ತು. ನಾವೆಲ್ಲರು ಬಹಳ ಕಷ್ಟ ಪಟ್ಟು ಒಂದು ಕೈಯಿಂದ ಮೂಗನ್ನು ಹಿಡಿದುಕೊಂಡು ಮತ್ತೊಂದರಲ್ಲಿ ಕಷಾಯ ಇರುವ ಲೋಟವನ್ನು ಒಂದೇ ಸತಿ 'ಗುಟ್ಟುಕ್' ಎಂದು ಮೇಲೆ ಎತ್ತಿ ಕುಡಿದೆವು. ತುಂಬಾ ಕಹಿಯಾಗಿತ್ತು. ಕಷಾಯ ಕುಡಿದ ನಂತರ ಒಂದು ದೊಡ್ಡ ಬೆಲ್ಲದ ತುಂಡನ್ನು ಕೊಡುತ್ತಿದ್ದರು, ಮೊದಲು ಕುಡಿದವರ ಮುಖದಲ್ಲಿ ಕಹಿಯಾದ ಭಾವನೆಯನ್ನು ಕಂಡು ಮಿಕ್ಕೆಲ್ಲರು ಹೆದರಿದ್ದರು. ಆದರೂ ಕೂಡ ಕುಡಿಯಲೇ ಬೇಕಾದ ಸಂದರ್ಭ. ಎಲ್ಲರೂ ಕುಡಿದು ಹಾಲ್ ಗೆ ಬಂದು ಕುಳಿತೆವು. ಚಟ್ ಫಟ್ ಎಂದು ಮಾತನಾಡುವ ಮನೋಭಾವ ನಮ್ಮೆಲ್ಲರದು. ಆದರೆ ಆಗ ಎಲ್ಲರು ಮೌನದಿಂದ ಆ ಕಹಿ ರುಚಿಯನ್ನು ಅರಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. 
     ಸ್ವಲ್ಪ ಸಮಯದ ನಂತರ ನಮ್ಮ ಅಜ್ಜಿ ಬಂದು‌ ಕಹಿಯಾದ ಕಷಾಯ ಕುಡಿಯುವ ಲಾಭಗಳಾವುವು ಎಂದು ಇಂಚು ಇಂಚಾಗಿ ವಿವರಿಸಿ ನಮಗೆ ಮನವರಿಕೆ ಮಾಡಿ ಕೊಟ್ಟರು. ಅದಾದ ಮೇಲೆ ವರುಷಕ್ಕೆ ಒಂದು ಸಲ ಬರುವ ಆಟಿ (ತುಳು ನಾಡಿನ ತಿಂಗಳ ಹೆಸರು) ಅಮವಾಸ್ಯೆಯಂದು ಕಹಿ ಕಷಾಯ‌ ಕುಡಿಯುವುದು ಏಕೆ‌..? ಎಂದು ಅರಿತುಕೊಂಡೆವು. ಆದರು ಕೂಡ ಆ ಕಹಿ ರುಚಿಯನ್ನು ಮರೆಯಬೇಕು ಎಂದು ‌ಎಷ್ಟು ಪ್ರಯತ್ನಸಿದರೂ. ನೆನಪಾಗಿ ಮತ್ತೆ ಬಾಯೆಲ್ಲಾ ಕಹಿಯಾಗುತ್ತದೆ. 
ಮತ್ತೆ ಬಂದಿದೆ ಇಂದು ಆಟಿ ಅಮಾವಾಸ್ಯೆ......
.................................................... ಶಾನ್ವಿ ವಿ  
ಪ್ರಥಮ ಪಿಯುಸಿ 
ಸೈಂಟ್ ಅಲೋಸಿಯಸ್ ಪದವಿಪೂರ್ವ ಕಾಲೇಜು 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article