ಸಮುದ್ರ ಕಲಿಸಿದ ಪಾಠ - ಲೇಖನ : ಧೃತಿ ಚೆಂಬಾರ್ಪು
Tuesday, July 4, 2023
Edit
ಲೇಖನ : ಧೃತಿ ಚೆಂಬಾರ್ಪು
5ನೇ ತರಗತಿ
ದೇವ್-ಇನ್ ನ್ಯಾಷನಲ್ ಶಾಲೆ
ಸಹಕಾರ ನಗರ, ಬೆಂಗಳೂರು
ಅಂದು ಬೇಸಿಗೆ ರಜೆ. ನಾನು ನನ್ನ ಅಮ್ಮನ ಜೊತೆ ಅಜ್ಜನ ಮನೆಗೆ ಹೋಗಿದ್ದೆ. ನಾನು, ನನ್ನ ಅಮ್ಮ, ನನ್ನ ಅತ್ತೆ ಹಾಗೂ ನನ್ನ ಅತ್ತಿಗೆ ಕಡಲ ತೀರಕ್ಕೆ ಹೋಗಿದ್ದೆವು. ಅದು ನಮ್ಮ ಮನೆಯ ಹತ್ತಿರವೇ ಇದ್ದ ಕಾರಣ ನಾವು ರಿಕ್ಷಾದಲ್ಲಿ ಹೋದೆವು. ನನ್ನ ಅತ್ತಿಗೆಗೆ ಮೂರು ವರ್ಷ ವಯಸ್ಸು. ನಾವೆಲ್ಲರೂ ಕಡಲ ತೀರದಲ್ಲಿ ಸಂತೋಷದಿಂದ ಆಟ ಆಡುತ್ತಾ ಕಾಲ ಕಳೆದೆವು. ನಾನು ಅತ್ತಿಗೆಯ ಜೊತೆ ಮರಳಿನಲ್ಲಿ ಕೂಡ ಆಟವಾಡಿದೆ.
ನಂತರ ನಾವು ನೀರಿನಲ್ಲಿ ಆಟ ಆಡುವಾಗ ಒಂದು ಭಯಂಕರವಾದ, ದೊಡ್ಡ ಅಲೆ ಬರುವುದು ನನಗೆ ಕಾಣಿಸಿತು. “ಅಮ್ಮ, ಅತ್ತೆ, ಬೇಗ ಮೇಲೆ ಓಡಿ, ಒಂದು ದೊಡ್ಡ ಅಲೆ ಬಂತು!” ಅಂತ ಕಿರುಚಿದೆ. ನಂತರ, ನಾನು ಮೇಲಕ್ಕೆ ಓಡಿದೆ. ಅಮ್ಮ, ಅತ್ತೆ ಕಡಲಿಗೆ ಬೆನ್ನು ಹಾಕಿ ನಿಂತಿದ್ದ ಕಾರಣ ಅವರಿಗೆ ಅಲೆ ಕಾಣಲಿಲ್ಲ. ನನ್ನ ಅಮ್ಮ ಹಾಗೂ ಅತ್ತೆಗೆ ಅರ್ಥವಾಗುವಷ್ಟರಲ್ಲಿ ಅಲೆ ಬಂದೇ ಬಿಟ್ಟಿತು!
ನಾನು ಮೇಲೆ ಇದ್ದರೂ ಅಲೆ ನನ್ನನ್ನು ತಲುಪಿತು. ಅತ್ತೆ ನನ್ನ ಅತ್ತಿಗೆಯನ್ನು ಎತ್ತಿ ಹಿಡಿದಳು. ಅಲೆಯು ಎಷ್ಟು ದೊಡ್ಡದಾಗಿತ್ತು ಎಂದರೆ, ಅದು ನನ್ನ ಅಮ್ಮ ಹಾಗೂ ಅತ್ತೆಯ ಸೊಂಟವನ್ನೇ ತಲುಪಿತ್ತು! ಏನಾಯಿತೆಂದು ಗೊತ್ತಾದಾಗ ಅವರಿಗೆ ತುಂಬಾ ಭಯವಾಯಿತು...!! ಅವರು ಕೂಡಲೇ ಮೇಲಕ್ಕೆ ಓಡಿ ನನ್ನ ಬಳಿ ಬಂದರು. ಅಲೆಯು ಹಿಂದೆ ಹೋದ ನಂತರ ನಾನು ಅಮ್ಮನನ್ನು ಕೇಳಿದೆ, “ನೀವು ಯಾಕೆ ಮೊದಲು ಓಡಲಿಲ್ಲ?” ಇದಕ್ಕೆ ಅಮ್ಮ ಹೇಳಿದಳು, ಅವರಿಗೆ ನಾನು ಕಿರುಚಿದ್ದು ಗೊತ್ತಾಗಲೇ ಇಲ್ಲವಂತೆ!
ಇದರಿಂದ ನಾವೆಲ್ಲರೂ ಒಂದು ಪಾಠ ಕಲಿತೆವು. ಕಡಲ ತೀರದಲ್ಲಿ ಸಮುದ್ರಕ್ಕೆ ಬೆನ್ನು ಹಾಕಿ ಯಾವತ್ತೂ ನಿಲ್ಲಬಾರದು!
5ನೇ ತರಗತಿ
ದೇವ್-ಇನ್ ನ್ಯಾಷನಲ್ ಶಾಲೆ
ಸಹಕಾರ ನಗರ, ಬೆಂಗಳೂರು
*******************************************