-->
ಲೇಖನ : ನಮ್ಮ ಶಾಲಾ ಚುನಾವಣೆ - ರಚನೆ: ಚೈತ್ರ ಯು

ಲೇಖನ : ನಮ್ಮ ಶಾಲಾ ಚುನಾವಣೆ - ರಚನೆ: ಚೈತ್ರ ಯು

ಲೇಖನ : ನಮ್ಮ ಶಾಲಾ ಚುನಾವಣೆ
ರಚನೆ: ಚೈತ್ರ ಯು
10ನೇ ತರಗತಿ 
ಸರಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ
                            

        ಮತದಾನದ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಮತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಚುನಾವಣೆಯಾಗಿದೆ. ನಮ್ಮ ಭಾರತದಲ್ಲಿ ಪ್ರತಿಯೊಬ್ಬರಿಗೂ ಮತವನ್ನು ಚಲಾಯಿಸುವ ಹಕ್ಕು ಇದೆ. ಚುನಾವಣೆಗಳನ್ನು ಪ್ರಜಾಪ್ರಭುತ್ವದ ತಳಹದಿ ಎಂದು ಕರೆಯುತ್ತಾರೆ. ಏಕೆಂದರೆ ಚುನಾವಣೆಯ ಮೂಲಕ ಆಯ್ಕೆಯಾದ ಸರ್ಕಾರವು ಪ್ರಜೆಗಳಿಂದ ಮತ್ತು ಪ್ರಜೆಗಳಿಗಾಗಿ ಎಂದು ಖಚಿತಪಡಿಸುತ್ತದೆ.
      ಮತ ಚಲಾಯಿಸಲು ಮನವರಿಕೆ ಮಾಡಲು ಚುನಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ?. ಎಂದು ತಿಳಿಯಲು ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ನಮ್ಮ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಸಿದರು. ನಮ್ಮ ಗುರುಗಳು ಮಕ್ಕಳಿಗೆ ಚುನಾವಣೆಯ ಬಗ್ಗೆ ತಿಳಿದುಕೊಳ್ಳೋ ಮನೋಭಾವನೆ ಬೆಳೆಸಿದರು. ನಾವು ರಾಜಕೀಯ ವ್ಯಕ್ತಿಗಳಾದರೆ ಯಾವ ರೀತಿ ಸರ್ಕಾರವನ್ನು ನಿಭಾಯಿಸಬೇಕು ಮತ್ತು ಯಾವ ರೀತಿ ಸರ್ಕಾರವನ್ನು ಕಾಪಾಡಬೇಕು ಎಂಬ ಅರಿವು ಮೂಡಿಸಲು ನಮ್ಮ ಶಾಲೆಯಲ್ಲಿ ನಡೆದ ಶಾಲಾ ಸಂಸತ್ತು ಚುನಾವಣೆ ಕಾರಣವಾಯಿತು. 
    ನನಗೆ ಶಾಲಾ ಸಂಸತ್ತು ಚುನಾವಣೆಯಿಂದ ಬಹಳ ಖುಷಿಯಾಯಿತು. ಏಕೆಂದರೆ ಶಾಲಾ ಸಂಸತ್ತು ಚುನಾವಣೆಯಲ್ಲಿ ನಾನು ಕೂಡ ಒಂದು ಪಕ್ಷದ ಮುಖಂಡೆಯಾಗಿ ಆಯ್ಕೆಯಾಗಿದ್ದೆ. ನಮ್ಮ ಶಾಲೆಯಲ್ಲಿ ಒಟ್ಟು ನಾಲ್ಕು ಪಕ್ಷಗಳು ಆಯ್ಕೆಯಾಗಿದ್ದವು. ಅದರಲ್ಲಿ ನನ್ನ ಪಕ್ಷದ ಹೆಸರು ಹುಲಿ. ಉಳಿದವುಗಳು ಕಮಲ್ ಮಹಲ್, ಮಾವಿನ ಹಣ್ಣು, ತಾಜ್ ಮಹಲ್ ಎಂಬ ಮೂರು ಪಕ್ಷಗಳು.  
      ನಮ್ಮ ಶಾಲೆಯ ಮತದಾನ ದಿನದಂದು PRO, APRO, P1, P2, P3 ಮತದಾನ ಕೇಂದ್ರದಲ್ಲಿದ್ದರು. ಒಟ್ಟು 20 ಚುನಾವಣಾ ಕ್ಷೇತ್ರಗಳನ್ನಾಗಿ ಮಾಡಿ ಸುಮಾರು 30 ಟೇಬಲ್ ಗಳಲ್ಲಿ ಬ್ಯಾಲೆಟ್ ಮಿಷನ್ ಮತ್ತು ಕಂಟ್ರೋಲ್ ಯೂನಿಟ್ ಗಳನ್ನು ಇಟ್ಟು ಮತ ಯಂತ್ರದ ಮೂಲಕ ಚುನಾವಣೆಯನ್ನು ನಡೆಸಲಾಯಿತು. ಶಾಲಾ ಸಂಸತ್ತಿನ 20 ಸದಸ್ಯರ ಆಯ್ಕೆ ಮಾಡಲು ಶಾಲೆಯ ಮುಖ್ಯ ಶಿಕ್ಷಕರು ಚುನಾವಣಾ ಆಯುಕ್ತರಾಗಿ , ತರಗತಿ ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಎಲ್ಲಾ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಭಾಗಿಯಾಗಿ ಮಾದರಿ ಚುನಾವಣೆಗೆ ಸಾಕ್ಷಿಯಾಯಿತು.
     ಇದರಿಂದ ನನಗೆ ಬಹಳ ಖುಷಿಯಾಯಿತು. ಹುಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಚೈತ್ರ ಯು ವಹಿಸಿಕೊಂಡಿದ್ದರು. ಕಮಲ್ ಮಹಲ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಂಜಯ್ ದತ್ ವಹಿಸಿಕೊಂಡಿದ್ದರು. ಮಾವಿನ ಹಣ್ಣು ಪಕ್ಷದ ಅಧ್ಯಕ್ಷ ಸ್ಥಾನವನ್ನು ಸೃಷ್ಟಿ ವಹಿಸಿಕೊಂಡಿದ್ದರು. ತಾಜ್ ಮಹಲ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ಭರತ್ ಕುಮಾರ್ ವಹಿಸಿಕೊಂಡಿದ್ದರು.  
     ಮತ ಎಣಿಕೆ ಮಾಡಲಾಯಿತು. ಇದರಲ್ಲಿ ಹುಲಿ ಪಕ್ಷ ಜಯಶಾಲಿಯಾಯಿತು. ವಿರೋಧ ಪಕ್ಷವಾಗಿ ಕಮಲ್ ಮಹಲ್ ಪಕ್ಷ ಜಯಶಾಲಿಯಾಯಿತು.
       ಈ ಶಾಲಾ ಸಂಸತ್ತು ಚುನಾವಣೆ ತುಂಬಾ ಯಶಸ್ವಿಯಾಗಿ ನಡೆಯಿತು. ಇದೆಲ್ಲ ಯಶಸ್ವಿಯಾಗಿ ನಡೆಯಲು ನಮ್ಮ ಗುರುಗಳೇ ಕಾರಣ. ಇವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಮುಖ್ಯ ಗುರುಗಳಾದ ಶ್ರೀಮತಿ ಅನಿಸ್ ಫಾತಿಮಾ, ಶಾಂತಲಾ, ಸಾವಿತ್ರಿ, ಸ್ನೇಹಲತಾ, ಶಶಿಕಲಾ, ವೀರಣ್ಣ, ದೊಡ್ಡ ಬಸವ ಎ, ಯರ್ರಿ ಸ್ವಾಮಿ, ವಿಜಯ್ ಕುಮಾರ್, ಜಬಿವುಲ್ಲಾ, ಸುಹಾಸ್, ಇವರೆಲ್ಲ ನನ್ನ ನೆಚ್ಚಿನ ಗುರುಗಳು. ಇವರೆಲ್ಲರಿಗೂ ನನ್ನ ನಮನಗಳು. 
........................................... ಚೈತ್ರ ಯು
10ನೇ ತರಗತಿ 
ಸರಕಾರಿ ಪ್ರೌಢಶಾಲೆ ತೋರಣಗಲ್ಲು 
ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆ
*******************************************Ads on article

Advertise in articles 1

advertising articles 2

Advertise under the article