-->
ಕವನಗಳ ರಚನೆ : ಸೌಜನ್ಯ ರೈ , 9ನೇ ತರಗತಿ

ಕವನಗಳ ರಚನೆ : ಸೌಜನ್ಯ ರೈ , 9ನೇ ತರಗತಿ

ಕವನಗಳ ರಚನೆ : ಸೌಜನ್ಯ ರೈ  
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
             
 ಈ ಪ್ರಕೃತಿಯೇ ಸುಂದರವಾದ ಮಂದಿರ
ಈ ಅಪರ ವೇಳೆಯಲ್ಲಿ ನನ್ನನ್ನು
ಹಿಂಬಾಲಿಸುತ್ತಿರುವವರು‌ ಯಾರು?
ಕಾಂತಿಯುತವಾಗಿ ಹೊಳೆಯುತ್ತಿರುವ ಚಂದಿರ..!
       ನನ್ನೊಂದಿಗೆ ಸಲ್ಲಾಪಿಸಲು ನೆರೆದ 
       ಇವರೆಲ್ಲಾ ಯಾರು ?
       ಮಿನುಗುತ್ತಾ ಮುಗುಳ್ನಗುವ ನಕ್ಷತ್ರಗಳು...!
ನನ್ನ ಮನಸ್ಸನ್ನು ತಂಪುಗೊಳಿಸಲು 
ಗಾಳಿ ಬೀಸುತ್ತಿರುವ ಇವರೆಲ್ಲಾ ಯಾರು?
ಬೆಳೆಯುತ್ತಿರುವ ಗಿಡಮರಗಳು..!
       ಸುಶ್ರಾವ್ಯವಾದ ಸಂಗೀತವನ್ನು ನನಗಾಗಿ     
        ಹಾಡುತ್ತಿರುವವರು ಯಾರು?
        ಹಾರಡುತ್ತಾ ಚಿಲಿಪಿಲಿಗುಟ್ಟುವ ಹಕ್ಕಿಗಳು..!
ವರ್ಷಧಾರೆಯನ್ನು ಹೀರಿಕೊಂಡು 
ಸುವಾಸೀತರಾದ ಇವರು ಯಾರು?
ಸಕಲ ಜೀವರಾಶಿಗಳ ಆವಾಸ ಸ್ಥಾನ ಮಣ್ಣು..!
     ದಡದಲ್ಲಿ ನಿಂತಿರುವ
     ಮುಗುಳ್ನಗುತ್ತಿರುವವನಾರು? 
     ನೀರಿನಲ್ಲಿ ಸ್ವಚ್ಛಂದವಾಗಿ ಈಜಾಡುವ ಮೀನು
ಈ ಪ್ರಕೃತಿಯು ಸಂತೋಷದ ಕಣಜ 
ಇದನ್ನನುಭವಿಸದೆ ಮನುಜ 
ಕೊರಗುವುದು ಸಹಜ....!!
............................................... ಸೌಜನ್ಯ ರೈ  
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************


 ಸಂಗೀತ, ನಿನ್ನನಾಲಿಸಿದಾಗ 
ದೂರವಾಗುವುದು ವಾಸ್ತವ್ಯ
ನೀನುಕ್ಕಿಸುವೆ ನನ್ನಲ್ಲಿ ನವಚೈತನ್ಯ

ನಿನ್ನ ಒಂದೊಂದು ಮಾರ್ದನಿಯಲಿ
ಅಡಗಿದೆ ಮೋಡಿ 
ಪ್ರತಿಯೊಂದು ಕ್ಷಣದಲ್ಲಿಯೂ
ನೀ ಹರಿಸುವೆ ಆನಂದದ ಕೋಡಿ
ನನ್ನಂತರಾಳದಲ್ಲಿಯೂ....

ನಿನ್ನ ಮಧುರ ದನಿಗಳ
ಆಲಿಸುವುದೆನ್ನ ಕರ್ಣ 
ನೀ ಹೃದಯವನ್ನೇ 
ಚುಂಬಿಸುವಷ್ಟು ಭಾವಪೂರ್ಣ

ನೀನೇಕೆ ತಟ್ಟುವೆ ನನ್ನ ಮನವನ್ನು..?
ಅದೇನಡಗಿದೆ ನಿನ್ನಲ್ಲಿ..?
ನೀ ಬಂಧಿಸುವೆ ಹೃದಯಗಳನ್ನು 
ನಿನ್ನ ಈ ಮಧುರ ಪ್ರವಾಹದಲಿ
............................................... ಸೌಜನ್ಯ ರೈ  
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

             
ನೀನೆ ನಿಜವಾದ ಸ್ನೇಹಿತ
ಬವಣೆಗಳಲಿ ಬೆಂದು ಬಂದಾಗ  
ನೀನು ನಿಜಕ್ಕೂ ಅಮೃತ

ಸುಸ್ತಾಗಿ ಬಸವಳಿದು ಬಂದಾಗ
ನೀ ನನ್ನ ಅಪ್ಪಿಕೊಳ್ಳುವೆ 
ನಿನ್ನ ಮಡಿಲಿನಲ್ಲಿರುವಾಗ ನಾನು 
ಬಣ್ಣ ಬಣ್ಣದ ಕನಸುಗಳನ್ನು ಕಾಣುವೆ 

ನಿನ್ನ ಲೋಕವು ನಿಜಕ್ಕೂ ಅದ್ಭುತ 
ಆದರೆ ನಿನ್ನ ಸಾಮಿಪ್ಯವು ಬಹಳ ಮಿತ 

ನಿನ್ನೊಂದಿಗೆ ಕಾಲ ಕಳೆಯುವಾಗ 
ಸಮಯ ಸರಿಯುವುದು ತಿಳಿಯದು 

ನೀ ಹೊರಟು ಹೋಗುವಾಗ
ಕಲ್ಪನೆಗಳೆಲ್ಲವೂ ಜಾರುವುದು 

ನೀ ಬಂದರೂ ಬಾರದಿದ್ದರೂ 
ಕಣ್ಣಿನಲ್ಲೊತ್ತುವೆ ಮುದ್ರೆ 
ನೀನೆ ನನಗೆ ಬಹಳ ಪ್ರಿಯ
ನೀನೇ.... ನಿದ್ರೆ...!!
...................................................... ಸೌಜನ್ಯ ರೈ  
9ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



Ads on article

Advertise in articles 1

advertising articles 2

Advertise under the article