-->
ಜ್ಞಾನಸಿರಿಯ ಬೀಡು ನಮ್ಮ ಕನ್ನಡ ನಾಡು : ಲೇಖನ - ಲಿಖಿತಾ, 9ನೇ ತರಗತಿ

ಜ್ಞಾನಸಿರಿಯ ಬೀಡು ನಮ್ಮ ಕನ್ನಡ ನಾಡು : ಲೇಖನ - ಲಿಖಿತಾ, 9ನೇ ತರಗತಿ

ಲೇಖನ : ಲಿಖಿತಾ 
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ   

        ಚಿನ್ನದ ತೊಟ್ಟಿಲು, ಭೋರ್ಗರೆಯುವ ಕಡಲು, ಕೈಬೀಸಿ ಕರೆವ ಗಿರಿಶೃಂಗಗಳು ಆಹಾ.. ಎಷ್ಟು ಸುಂದರ.. ನಮ್ಮ ಕನ್ನಡಮಾತೆಯ ನಲ್ಮೆಯ ಮಡಿಲು...!
     ಜ್ಞಾನದ ಭಂಡಾರವನ್ನೇ ಹೊಂದಿರೋ ಕನ್ನಡ ಸಾಹಿತ್ಯಗಳ ಕರ್ತರು, ಶೌರ್ಯ ಪರಾಕ್ರಮದಿ ಪತಾಕೆಯ ಹಿಡಿದ ರಾಜವಂಶಜರು.. ಕನ್ನಡ ರತ್ನಗಳು ಹುಟ್ಟಿರೋ ನಾಡು ನಮ್ಮದು. ನಿತ್ಯ ಹರಿದ್ವರ್ಣ ವನಗಳ ಹೊಂದಿರುವ ಪ್ರೇಮದ ಮಡಿಲು. ಕುತೂಹಲ ಕೆರಳಿಸುವ ಕನ್ನಡದ ಐತಿಹಾಸಿಕ ಸ್ಥಳಗಳು. ವಿಭಿನ್ನ ಕಲೆಗಳ ಒಡಲು ನಮ್ಮ ಕರುನಾಡು…
     ತಾಯ ಕೈ ಸ್ಪರ್ಶಕ್ಕೆ ಹರ್ಷಿಸುವ ಮಗುವಂತೆ.. ಕನ್ನಡ ಭಾಷೆಯಲ್ಲಿ ವ್ಯಕ್ತಪಡಿಸುವ ಪದಗಳ ಸೊಬಗು. 
'ಕ'- ಕಣ್ಮನಗಳಿಗೆ ತಂಪನ್ನೆರೆಯುತ್ತಾ
'ನ್ನ'- ನನ್ನ ಹೃದಯದಿ ನಾಡಿನ ನಾದಸ್ವರವ
      ಮಿಡಿಯುತ್ತಾ 
'ಡ' - ಡಿಂಡಿಮವ ಬಾರಿಸುತ ನಾಡಿನಲ್ಲಿ ನುಡಿ
       ಸೊಬಗ ಪಸರಿಸುತ್ತಾ 
'ಭಾ' - ಭಾರತಾಂಬೆಯ ತೊಟ್ಟಿಲಲ್ಲಿ ಜೀಕುವ
         ದೃಶ್ಯದ
'ಷೆ'- ಷರದಲ್ಲಿ ವಿಮರ್ಶಿಸುವಿಕೆಯನ್ನು ಹೊತ್ತು
      ಬರುತ್ತಿರುವ ತೇರು.
  ಈ ಹೆಮ್ಮೆಯ ಕನ್ನಡ ಭಾಷೆ. ಎರಡೂವರೆ ಸಹಸ್ರಮಾನಗಳ ಇತಿಹಾಸವ ಹೊಂದಿದೆ ನಮ್ಮ ಕನ್ನಡ ಭಾಷೆ.
      'ಚಾರಿಯೇಟ್ ಮೈಮ್' ಎರಡನೇ ಶತಮಾನದ ಗ್ರೀಕ್ ನಾಟಕ ಕನ್ನಡ ಸಾಲನ್ನು ಉಪಯೋಗಿಸಿದೆ ಎಂದರೆ ಎರಡು ಶತಮಾನದ ಹಿಂದೆಯೇ ಕನ್ನಡ ಭಾಷೆ ಗ್ರೀಕ್ ದೇಶದವರೆಗೂ ಲಗ್ಗೆ ಇಟ್ಟಿತ್ತು ಎನ್ನುವುದು ತಿಳಿಯುತ್ತದೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ತಾಳೆಗರಿ ಒಂದರಲ್ಲಿ 'ಕನ್ನಡದ ಊರಲ್ಲಿ' ಎಂಬ ಕನ್ನಡ ಪದ ಪತ್ತೆಯಾಗಿದೆ. ಕವಿರಾಜ ಮಾರ್ಗ ರಚಿಸುವಾಗ ಆಂಗ್ಲ ಭಾಷೆ ತೊಟ್ಟಿಲೊಳಗಿನ ಕೂಸಾಗಿತ್ತು. ಹಿಂದಿ ಹುಟ್ಟಿಲ್ಲದ ಕಾಲದಲ್ಲಿ ಕನ್ನಡ ಮುಗಿಲಲ್ಲಿತ್ತು.
ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ್ ಮತ್ತು ಕಾರಂತರ ನವೋದಯ ಕಾಲದ ದಿಗ್ಗಜರಿಂದ, ನವ್ಯ ಪರಂಪರೆಯ ಅಡಿಗ, ಕಂಬಾರ, ಬೈರಪ್ಪರಂತಹ ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯದ ಶ್ರೀಮಂತ ಪರಂಪರೆಯನ್ನು ಬೆಳೆಸಿ ಆಧುನಿಕ ಯುಗದಲ್ಲಿ ಅದಕ್ಕೊಂದು ಹೊಸ ಆಯಾಮವನ್ನು ಕಟ್ಟಿಕೊಟ್ಟರು. ಕ್ರಿಸ್ತಶಕ ಐದನೆಯ ಶತಮಾನದ ಹಲ್ಮಿಡಿ ಶಾಸನ, ಹಾಗೂ ಅದಕ್ಕೂ ಮೊದಲು ತಾರ್ಗತಿಯಲ್ಲಿ ಸಿಕ್ಕ ತಾಮ್ರಪಟ ಶಾಸನಗಳಲ್ಲಿ ನಾವು ಸ್ಪಷ್ಟವಾಗಿ ಕನ್ನಡ ಭಾಷೆಯನ್ನು ಕಾಣಬಹುದು. ಇಂತಹ ಚಾರಿತ್ರಿಕ ಹಿನ್ನಲೆಯ ಕರುನಾಡಲ್ಲಿ ಹುಟ್ಟಿದ್ದೇವೆ ಎನ್ನುವುದು ನಮಗೆ ಹೆಮ್ಮೆ. ಪ್ರಾಚೀನ ಹಿನ್ನೆಲೆ ಮತ್ತು ಭದ್ರ ನೆಲೆಗಟ್ಟಿನೊಂದಿಗೆ ಉದಯಿಸಿದ ಕನ್ನಡ ಭಾಷೆಗೆ ತನ್ನ ಹುಟ್ಟಿದ ನೆಲದಲ್ಲಿ ಇಂದು ಮಾನ್ಯತೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಇಂದಿನ ಮಕ್ಕಳ ಕಲಿಕೆಯಲ್ಲಿ ಕನ್ನಡ ಕಸ್ತೂರಿಯ ಸುವಾಸನೆ ಕಣ್ಮರೆಯಾಗುತ್ತಿದೆ. ಭಾಷೆ ಸೊರಗುತ್ತಿರುವಾಗ ಕನ್ನಡ ಸಾಹಿತ್ಯ, ಕನ್ನಡ ಪರಂಪರೆ, ಸಂಪ್ರದಾಯಗಳು ನಮ್ಮಿಂದ ದೂರವಾದಂತೆ ಕಾಣುತ್ತಿದೆ...!!
     ಕನ್ನಡತನವ ಉಳಿಸಿ, ಕನ್ನಡವ ಬೆಳೆಸಿ,     
     ಕನ್ನಡವೇ ಬಯಸಿ, ಕನ್ನಡಕ್ಕಾಗಿ ಭಜಿಸಿ,
ನಮ್ಮ ಹೆಮ್ಮೆಯ ಕರುನಾಡಿನ ಬಗ್ಗೆ ಇನ್ನಷ್ಟು ಮಾಹಿತಿಗಳೊಂದಿಗೆ ಮತ್ತೊಮ್ಮೆ ಸಿಗುತ್ತೇನೆ.
       ಕನ್ನಡವೇ ಅನನ್ಯ.. 
       ಕನ್ನಡವೇ ಸೌಜನ್ಯ. 
       ಕನ್ನಡವೇ ನಮ್ಮಮ್ಮ.
................................................ ಲಿಖಿತಾ 
9ನೇ ತರಗತಿ
ಸರಕಾರಿ ಪದವಿಪೂರ್ವ ಕಾಲೇಜು 
(ಪ್ರೌಢಶಾಲಾ ವಿಭಾಗ) ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************     



       

Ads on article

Advertise in articles 1

advertising articles 2

Advertise under the article