ಜಂಬೂನೇರಳೆ ಹಣ್ಣಿನ ಮರ - ಲೇಖನ : ತೃಪ್ತಿ , 7ನೇ ತರಗತಿ
Wednesday, July 5, 2023
Edit
ಲೇಖನ : ತೃಪ್ತಿ
7ನೇ ತರಗತಿ
ಶ್ರೀ ರಾಮ ಹಿ. ಪ್ರಾ. ಶಾಲೆ
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಮನೆಯಲ್ಲಿ ನಾನು ಹುಟ್ಟುವ ಮೊದಲು ನನ್ನ ಅಜ್ಜಿ ನೆಟ್ಟ ಹುಳಿ - ಸಿಹಿ ಯಾದ ಜಂಬೂನೇರಳೆ ಹಣ್ಣಿನ ಮರ. ಈಗ ಮರ ದೊಡ್ಡದಾಗಿದೆ. ಈ ಮರದಲ್ಲಿ ಕಾಯಿ ಬಿಟ್ಟಾಗ ಬಿಳಿಯಾಗಿರುತ್ತದೆ. ಹಣ್ಣು ಆಗುವಾಗ ಕೆಂಪು ಬಣ್ಣಕ್ಕೆ ತಿರುಗತ್ತದೆ. ಈ ಹಣ್ಣು ರುಚಿಯಾಗಿದ್ದು ಸ್ವಲ್ಪ ಸಿಹಿ , ಸ್ವಲ್ಪ ಹುಳಿಯಾಗಿರುತ್ತದೆ.
ದಿನಾಲು ಶಾಲೆಯಿಂದ ಬಂದ ನಂತರ ನಾನು ಮತ್ತು ನನ್ನ ತಮ್ಮ ಮರದಲ್ಲಿದ್ದ ಹಣ್ಣನ್ನು ಕೊಯ್ದು ಜಗಳ ಮಾಡಿಕೊಂಡು ಹಂಚಿಕೊಂಡು ತಿನ್ನುತ್ತೇವೆ. ಹೀಗೆ ಒಂದು ದಿನ ಮರದಲ್ಲಿ ನೋಡಿದಾಗ ಹಣ್ಣು ಅವಳಿ ಜವಳಿಯಾಗಿ ಸಿಕ್ಕಿತು.
ಮಳೆಗಾಲದಲ್ಲಿ ಜಾಸ್ತಿ ಹಣ್ಣು ಸಿಗುತ್ತದೆ. ಆದರೆ ನೀರು ಹೀರಿಕೊಂಡಿರುವುದರಿಂದ ತಿನ್ನಲು ಯೋಗ್ಯವಾಗಿ ಇರುವುದಿಲ್ಲ. ಹಕ್ಕಿಗಳಿಗೂ ಆಹಾರ ವಾಗುತ್ತದೆ ಈ ಹಣ್ಣುಗಳು. ಕರಿಮೆಣಸಿನ ಬಳ್ಳಿಗೂ ಈ ಮರ ಆಶ್ರಯವಾಗಿದೆ. ಧನ್ಯವಾದಗಳು
7ನೇ ತರಗತಿ
ಶ್ರೀ ರಾಮ ಹಿ. ಪ್ರಾ. ಶಾಲೆ
ಹನುಮಾನ್ ನಗರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************