-->
ಪ್ರೀತಿಯ ಪುಸ್ತಕ : ಸಂಚಿಕೆ - 68

ಪ್ರೀತಿಯ ಪುಸ್ತಕ : ಸಂಚಿಕೆ - 68

ಪ್ರೀತಿಯ ಪುಸ್ತಕ
ಸಂಚಿಕೆ - 68
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 

                           
                                    ಸಹಬಾಳ್ವೆ  
      ಪ್ರೀತಿಯ ಮಕ್ಕಳೇ.... ಇದೊಂದು ಮೊಲ, ಹೆಸರು ಚೂಟಿ. ಸ್ನೇಹಿತರೊಂದಿಗೆ ಆಡುವುದು, ಕುಣಿಯುವುದು, ಹುಲ್ಲು, ತರಕಾರಿ ತಿನ್ನುವುದು ಅವನ ದಿನನಿತ್ಯದ ಕೆಲಸ. ಅಂದು ಚೂಟಿ ಊರು ಸುತ್ತುತ್ತಾ ಸುತ್ತುತ್ತಾ ಏನೇನೋ ಹೊಸ ಹೊಸ ವಿಷಯ ತಿಳಿದುಕೊಳ್ಳುತ್ತದೆ. ಹೇಗೆ ಪ್ರಾಣಿ, ಪಕ್ಷಿ ಮತ್ತು ಕೀಟಗಳು ಒಂದೊಕ್ಕೊಂದು ಸಹಕಾರ ನೀಡುತ್ತಾ ಆಸರೆಯಾಗುತ್ತವೆ ಎಂಬ ಅದ್ಭುತ ಕತೆಗಳನ್ನು ಕೇಳಿಸಿಕೊಳ್ಳುತ್ತದೆ. ದನಕ್ಕೆ ಹೇಗೆ ಬೆಳ್ಳಕ್ಕಿ ಸಹಾಯ ಮಾಡುತ್ತದೆ? ಜೇನು ನೊಣ ಮತ್ತು ಹೂವು ಪರಸ್ಪರ ಹೇಗೆ ಸಹಾಯ ಮಾಡುತ್ತದೆ ? ಇರುವೆಗಳು ಯಾಕೆ ಸಣ್ಣ ಸಣ್ಣ ಗಿಡ ಹೇನುಗಳನ್ನು ಹೊತ್ತುಕೊಂಡು ಹೋಗುತ್ತವೆ? – ಈ ಎಲ್ಲಾ ಪ್ರಶ್ನೆಗಳ ಹಿಂದೆಯೂ ಸಹಬಾಳ್ವೆಯ ಒಂದೊಂದು ಕತೆ ಇದೆ. ಪ್ರಕೃತಿಯ ಬೆಡಗು ಇದೆ. ಚಂದದ ಚಿತ್ರಗಳು ಇವೆ. ನೀವೂ ಪುಸ್ತಕ ಓದಿ ಈ ಅದ್ಭುತಗಳನ್ನು ತಿಳಿದುಕೊಳ್ಳಿ. ಓದುವುದು ಮಾತ್ರವಲ್ಲ ಪ್ರಕೃತಿಯ ಮಡಿಲಲ್ಲಿ ಯಾರಿಗೆ ಯಾರು ಆಸರೆಯೆಂದು ಹುಡುಕುತ್ತಾ ಹೋಗಿ. 
ಪ್ರಕಾಶಕರು: ನವಕರ್ನಾಟಕ ಪ್ರಕಾಶನ  
ಲೇಖಕರು: ವಿದ್ಯಾ ಶಂಕರ್
ಚಿತ್ರಗಳು: ಸಂತೋಷ್ ಸಸಿಹಿತ್ಲು
ಬೆಲೆ: ರೂ.60/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು.
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************




Ads on article

Advertise in articles 1

advertising articles 2

Advertise under the article