ಪ್ರೀತಿಯ ಪುಸ್ತಕ : ಸಂಚಿಕೆ - 67
Friday, July 14, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 67
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಮದುವೆ ಯಾವ ವಯಸ್ಸಿನಲ್ಲಿ ಆಗುವುದು ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇಂದಿನ ದಿನಗಳಲ್ಲೂ ಪುಟ್ಟ ಮಕ್ಕಳಿಗೆ ಮದುವೆ ಮಾಡುವುದು ನಡೀತಾನೇ ಇದೆ. ಈ ವಿಚಾರವಾಗಿಯೇ ಮುನ್ನಿಗೆ ಮದುವೆ ಪುಸ್ತಕದಲ್ಲಿ ಚಿಕ್ಕದೊಂದು ಕತೆ ಇದೆ. ಮುನ್ನಿ ಜಾಣೆ, ಶಾಲೆಯಲ್ಲಿ ಆಟ ಪಾಠ ಎಲ್ಲದರಲ್ಲೂ ಲೀಡರು. ಹನ್ನೆರಡು ವರುಷ ದಾಟಿದೆಯಷ್ಟೇ. ದೊಡ್ಡವಳಾಗಿದ್ದಾಳೆ. ಅವಳಿಗೆ ಅವಳ ಮನೆಯವರು ಮದುವೆ ನಿರ್ಧಾರ ಮಾಡಿಬಿಟ್ಟಿದ್ದಾರೆ. ಈ ವಿಷಯ ಶಾಲೆಯಲ್ಲಿ ಅವಳ ಸಹಪಾಠಿಗಳಿಗೆ ಗೊತ್ತಾಗಿಬಿಡುತ್ತದೆ. ಏನಾದರೂ ಮಾಡೋಣವೆಂದರೆ ಮುನ್ನಿಯ ತಂದೆ (ಊರವರಿಗೆಲ್ಲಾ ಮೀಸೆ ಕಾಕಾ) ಬಗ್ಗೆ ವಿಪರೀತ ಭಯ. ಮುನ್ನಿಯೂ ಕಂಗಾಲಾಗಿಬಿಡುತ್ತಾಳೆ, ಅವಳ ಸಹಪಾಠಿಗಳೂ ದಾರಿ ಕಾಣದೆ ಒದ್ದಾಡುತ್ತಿರುತ್ತಾರೆ. ಆದರೂ ಸುಮ್ಮನೆ ಕೂರುವುದಿಲ್ಲ. ಏನು ಮಾಡಿದರು? ಹೇಗೆ ಮಾಡಿದರು? ಅಂತ ತಿಳಿದುಕೊಳ್ಳಲು ಪುಸ್ತಕ ಓದಿ. ಕಥೆಗೆ ತಕ್ಕಂತೆಯೇ ಚಿತ್ರಗಳೂ ಇವೆ.
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
ಲೇಖಕರು: ಡಾ. ಕೆ.ಎಸ್.ಚೈತ್ರಾ
ಚಿತ್ರಗಳು: ಮುರಳೀಧರ ಎಜ್.ಜಿ.
ಬೆಲೆ: ರೂ.60/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಇದನ್ನು ಓದಿ ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************