ಪ್ರೀತಿಯ ಪುಸ್ತಕ : ಸಂಚಿಕೆ - 66
Friday, July 7, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 66
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಮಳೆ ಜೋರಾಗಿ ಬರುತ್ತಿದೆ, ಮನೆಯೆದುರು ಪ್ರವಾಹವಾಗಿ ಹರಿಯುತ್ತಿದೆ.. ಆಗ ಮಕ್ಕಳು ಮಾಡುವ ಒಂದು ಖುಶಿಯ ಕೆಲಸ ಏನು? ಕಾಗದದ ದೋಣಿ ಮಾಡಿ ನೀರಿನಲ್ಲಿ ಬಿಟ್ಟು ಅದು ತೇಲುತ್ತಾ, ಬೀಳುತ್ತಾ, ಏಳುತ್ತಾ, ಅಲ್ಲಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾ ಚಲಿಸುವುದನ್ಜು ನೋಡುವುದು, ಕುಣಿದಾಡುವುದು. ಹಾಗೇನೇ ಈ ಕಥೆಯಲ್ಲಿ ಕಿಟ್ಟುಗೆ ಮಳೆ ಬರುವಾಗ ಮೊದಲಿಗೆ ಏನೇನೋ ಚಿಂತೆ ಆಗುತ್ತದೆ. ಮನೆ ಸುತ್ತಮುತ್ತ ಹರಿಯುತ್ತಿರುವ ನೀರಿನಲ್ಲಿ, ಅಜ್ಜ ಅಂಗಡಿಗೆ ಹೋಗಿ ಅಜ್ಜಿ ಹೇಳಿದ ಸಾಮಾನಗಳನ್ನು ತರುವುದು ಹೇಗಪ್ಪಾ ಅನ್ನವುದೇ ಅವನ ಚಿಂತೆ. ಅದಕ್ಕಾಗಿ ಅವನು ಏನು ಮಾಡಿರಬಹುದು? ನೀವು ಈಗಾಗಲೇ ಊಹಿಸಿರುತ್ತೀರಿ? ಆದರೆ ಹೇಗೆ ಮಾಡಿದ? ಅಜ್ಜ, ಅಜ್ಜಿ ಏನು ಮಾಡಿದರು ಓದಿ ನೋಡುತ್ತೀರಾ? ಸುಂದರವಾದ ಚಿತ್ರಗಳೂ ಇವೆ. ಆನಂದಿಸಿ.
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಲೇಖಕರು: ಪಲ್ಲವಿ ರಾವ್
ಚಿತ್ರಗಳು: ರಘುಪತಿ ಶೃಂಗೇರಿ
ಬೆಲೆ: ರೂ.60/-
ನಾಲ್ಕನೇ ಐದನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************