-->
ಕವನಗಳ ರಚನೆ : ಪ್ರೇಮಾ ಶಿವಪ್ಪ ಶಿರಹಟ್ಟಿ , 10ನೇ ತರಗತಿ

ಕವನಗಳ ರಚನೆ : ಪ್ರೇಮಾ ಶಿವಪ್ಪ ಶಿರಹಟ್ಟಿ , 10ನೇ ತರಗತಿ

ಕವನಗಳ ರಚನೆ : ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ, ಜಿಲ್ಲಾ ಗದಗ

ಓದು ಮಗು ನೀ ಓದು
ನಿನ್ನ ಜೀವನಕ್ಕಾಗಿ ನೀ ಓದು
ನೀ ಸೋತರೆ ಬೆನ್ನ ಹಿಂದೆ 
ಆಡಿಕೊಳ್ಳುವರು....!
ನೀ ಗೆದ್ದರೆ ಸೊಕ್ಕು ಎಂದು
ಹೇಳುವರು...!
ಯಾವುದಕ್ಕೂ ಒಪ್ಪಲ್ಲ 
ಈ ಸ್ವಾರ್ಥ ಮನುಜರು....!
ಸೋತರೆ ಅಳಿಸುವರು 
ಈ ಮೂರ್ಖ ಮನುಜರು...!!
ನಮಗಾಗಿ ಯಾರೂ ಇಲ್ಲ ಇಂದು
ಅದಕ್ಕಾಗಿ ಓದು ನೀ ಎಂದೆಂದೂ...!!
ಆಗಬೇಕು ನೀ ಎಲ್ಲರಿಗೂ 
ಜೀವನ ಆದರ್ಶ ...
ಆಗ ನಿನಗೆ ನೋಡು ಹರುಷ
ಒಮ್ಮಿಗೆದ್ದು ನೋಡು ಒಂದು ನಿಮಿಷ
ಎಲ್ಲರೂ ಕೈ ಮುಗಿದು ನೋಡುವ ಸಂತಸ 
ಬೆಳೆದು ನೋಡು ಆಗ ವಿಶೇಷ 
ಗೌರವ ತುಂಬಿತು ನಿತ್ಯ ಕನಸ.....!!
........................... ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
********************************************    ಈ ಸುಂದರ ಪ್ರಕೃತಿಯ
ನಿನ್ನ ಮಡಿಲಿನಲಿ
ಮಲಗುವಾಸೆ 
ನನ್ನ ಮನದಲ್ಲಿ
ಕಷ್ಟದ ಸಮಯದಿ
ನಗಿಸುವ ಮನಸಿದೆ
ಕಣ್ಣೀರನ್ನೊರೆಸುವ ಕೈಗಳು ಇವೆ
ಯಾರಿಗೂ ನೋವನ್ನು ಕೊಡದ ಮನಸು
ಎಲ್ಲರಿಗೂ ನೀ ಹರಸು
ನೀ ನನ್ನ ಉಸಿರು
ಉಳಿಸುವೆ ನಿನ್ನ ಹೆಸರು
ಈ ಉಸಿರಿಗೆ ನೀ ಹಸಿರು
ಐ ಲವ್ ಯು ಅಮ್ಮ
........................... ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
********************************************

ನೊಂದಿದೆ ಮನಸ್ಸು ನೊಂದಿದೆ
ಕಾಡಿದೆ ಕನಸು ಕಾಡಿದೆ
ಇನ್ಯಾರಿಗೆ ಬೇಕಾಗಿದೆ
ಈ ಜೀವನ ಸಾಕಾಗಿದೆ
     ಕತ್ತಲು ಹಾರಾಡಿದೆ
     ಬೆಳಕು ಮರೆಯಾಗಿದೆ
     ಮನಸು ಮಗು ಆಗಿದೆ
     ಈ ಜೀವನ ಸಾಕಾಗಿದೆ
ಕಣ್ಣೀರು ಮಳೆ ಸುರಿಸುತ್ತಿದೆ
ಭಾವನೆ ಮರೆಮಾಚುತಿದೆ
ನಗಿಸುವ ಕನಸುಗಳು ಒಡೆಯುತಿದೆ
     ಮಾತನಾಡದೆ ಮಾತು ಮೌನವಾಗಿದೆ
     ಕಾಣದಾಗಿದೆ ಕಣ್ಣು ಮುಚ್ಚಿಕೊಂಡಿದೆ
     ಈಗ ಏಕೆ ಹೀಗಾಗಿದೆ..?
     ಈ ಜೀವನ ಸಾಕಾಗಿದೆ....!!
........................... ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
********************************************     
ಈ ನಾಡು ಕನ್ನಡ ನಾಡು
ರಕ್ಷಿಸುವ ಪ್ರೀತಿಯ ಕನ್ನಡ ನಾಡು
ಹೆಮ್ಮೆ ಪಡುವ ನಾಡು
ನಮ್ಮ ಮೆಚ್ಚಿನ ಈ ಕರುನಾಡು
     ದೇವಾಲಯಗಳಿಗೆ ಹೆಸರಾದ ನಾಡು
     ಕವಿಗಳು ಜನಿಸಿದ ನಮ್ಮ ನಾಡು
     ಹೊಗಳಿ ಹಾಡಿದರೂ ಮುಗಿಯದು 
     ನಮ್ಮ ಸುಂದರ ಬೀಡು
ಹಸಿರಿಗೂ ಹೆಸರಾದ ನಾಡು
ಉಸಿರಾಡಲು ಆನಂದ ಪಡು
ಇಲ್ಲಿ ಹರಿಯುವ ನೀರಿನ ಶಬ್ದ ಕೂಡ
ಹಾಡಿದೆ ಕನ್ನಡ ಹಾಡು
     ಇಲ್ಲಿ ಒಮ್ಮೆ ಬೆಳೆದು ನೋಡು
     ಸ್ವರವಾಗುವುದು ನಿನ್ನ ಗುಣದ ಹಾಡು
     ಬಗೆ ಬಗೆ ಧರ್ಮಿಯರ ಕರುನಾಡು
     ಏಕೆಂದರೆ ಇದು ನಮ್ಮಯ ನಾಡು
     ಜೈ ಕನ್ನಡಾಂಬೆ 
........................... ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
********************************************

         ಏನಾಗಲಿ ಮುಂದೆ ಸಾಗು ನೀ
      ಕಂಡ ಕನಸು ನನಸಾಗಲಿ
       ಓ ಓ. ಓ
ನನ್ನಾಣೆ ನನ್ನ ಕನಸು ಸೈನಿಕನೇ
ಓಹೋ ಓಹೋ
ಏನಾಗಲಿ ಮುಂದೆ ಸಾಗು ನೀ
ಕಂಡ ಕನಸು ನನಸಾಗಲಿ
ನನ್ನಾಣೆ ನನ್ನ ಕನಸು ಸೈನಿಕನೇ
     ಹಾಡು ಮಾತುಗಳ ಕಾಣೊ ಕನಸುಗಳ
     ಮರೆಯಬೇಡ ನೀ ತುಂಬಿಕೋ ಮನದಲ್ಲಿ
     ಹಾಡೋ ಮಾತುಗಳ ಕಾಣೊ ಕನಸುಗಳ
     ಮರೆಯಬೇಡ ನೀ ತುಂಬಿಕೋ ಮನದಲಿ
ಇಂದಿಗೂ ನಾಳೆಗೂ ಮುಂದೆ ನಾ ಬಾಳಲಿ
ಸೈನಿಕನೇ ನಾ ಎಂದು ಹೇಳುವೆ
      ಕರುಣೆಗೆ ಬೆಲೆ ಇದೆ ಪುಣ್ಯಕ್ಕೆ ಫಲವಿದೆ
      ದೇಶದ ಸೇವೆಯ ಮಾಡುವ ಆಸೆ ಇದೆ
ಸಾವಿನಲ್ಲೂ ನೋವಿನಲ್ಲೂ ದೇಶವೇ ನನ್ನುಸಿರು
      ಏನಾಗಲಿ ಮುಂದೆ ಸಾಗು ನೀ
      ದೇಶಕ್ಕಾಗಿ ಬದುಕು ಬಾಳಲಿ
      ದೇಶಕ್ಕಾಗಿ ಬದುಕು ಬಾಳಲಿ
      ಓ. ಓ. ಓ
........................... ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
********************************************

ಈ ಸುಂದರ ಬೆಳದಿಂಗಳಲಿ
ಈ ತಂಪಿನ ಅಂಗಳದಲ್ಲಿ
ಅಮ್ಮ ನಿನ್ನ ಮಡಿಲಿನಲಿ
ಮಲಗುವಾಸೆ ಅಮ್ಮ
     ಈ ಸುಂದರ ಬೆಳದಿಂಗಳಲಿ
     ತಂಪಿನ ಅಂಗಳದಲ್ಲಿ
     ನಿನ್ನ ಹಾಡು ಕೇಳುತ್ತಲಿ
     ಆನಂದಿಸುವೆ ಕನಸುಗಳಲ್ಲಿ
ದಿನ ದಿನ ಕ್ಷಣ ಕ್ಷಣ
ಅಮ್ಮ ನನ್ನ ನಿನ್ನ ಹಾಡಲ್ಲಿ
ಕುಣಿಸಿರುವೆ
ಮನ ಮನದುತ್ತರ ಕಣ್ಣಂಚಲಿ ನಗಿಸಿರುವೆ
       ನನ್ನ ಮನಸ್ಸಿನಲ್ಲಿ ಸ್ವರ 
       ನುಡಿಸುವ ಕೈಗಳು ನಿನ್ನದು
       ನಿನ್ನ ಕೈಗಳ ಜೊತೆ ಕೈ ಸೇರಿಸಿ 
       ಜಗಕೊಳ್ಳೋ ಮನಸು ನನ್ನದು
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲ್ಲಿ
ಅಮ್ಮ ನಿನ್ನ ಮಡಿಲಿನಲಿ
ಮಲಗುವಾಸೆ...!!
     ನಿನ್ನ ನೆರಳಿನ ಸನಿ ಸನಿಹಕೆ
     ನನ್ನ ಕರುಳಿನ ಧ್ವನಿಹರಿಸಿ ಹರಿಸಿ
     ನಿನ್ನ ಕನಸಿಗೆ ಹೊಸ ಹೆಸರು ಬರೆಸಿ          
     ಮೆರೆಸಿ ರಮಿಸುವೆ
ಈ ಸುಂದರ ಬೆಳದಿಂಗಳ
ಈ ತಂಪಿನ ಅಂಗಳದಲ್ಲಿ
ನಿನ್ನ ಹಾಡು ಕೇಳುತ್ತಲಿ
ಆನಂದಿಸುವ ಆಸೆ
........................... ಪ್ರೇಮಾ ಶಿವಪ್ಪ ಶಿರಹಟ್ಟಿ
10 ನೇ ತರಗತಿ
ಎಸ್ ಡಿ ಎನ್ ವೈ ಸರಕಾರಿ ಪ್ರೌಢ ಶಾಲೆ ಯಲಿಶಿರೂರ
ತಾಲೂಕು ಗದಗ , ಜಿಲ್ಲಾ ಗದಗ
********************************************

Ads on article

Advertise in articles 1

advertising articles 2

Advertise under the article