-->
ಚುಟುಕುಗಳ ರಚನೆ : ಕಾವ್ಯ, 10ನೇ ತರಗತಿ

ಚುಟುಕುಗಳ ರಚನೆ : ಕಾವ್ಯ, 10ನೇ ತರಗತಿ

ಚುಟುಕುಗಳ ರಚನೆ : ಕಾವ್ಯ
10 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ


             ಪುಸ್ತಕ
ಪುಸ್ತಕ ಪುಸ್ತಕ ನನ್ನಯ ಪುಸ್ತಕ 
ಮಕ್ಕಳಿಗೆ ಇಷ್ಟದ  ಕಥೆ ಪುಸ್ತಕ
ಎಲ್ಲರೂ ಓದುವ ಚೆಂದದ ಪುಸ್ತಕ 
ನನಗೆ ಇಷ್ಟ ದ ಅಂದದ ಪುಸ್ತಕ



             ಶಾಲೆ
ಶಾಲೆ ಶಾಲೆ ನನ್ನಯ ಶಾಲೆ 
ಪಾಠವ ಕಲಿಸುವ ನನ್ನಯ ಶಾಲೆ 
ಶಿಸ್ತನು ಕಲಿಸುವ ಮಂಚಿ ಶಾಲೆ
ಮಕ್ಕಳೆಲ್ಲ ಕಲಿಯುವ ಚೆಂದದ ಶಾಲೆ


             ಬಸ್ಸು
ಬಸ್ಸು ಬಂತು ಬಂತು ಬಸ್ಸು
ಎಲ್ಲರೂ ಓಡುವರು ಹತ್ತಲು ಬಸ್ಸು 
ಎಲ್ಲರೂ ಹತ್ತಿ ತುಂಬಿತು ಬಸ್ಸು
ಬಸ್ಸಿನ ತುಂಬಾ ರಶೊ ರಶು


        ನಮ್ಮ ಮನೆ
ಮನೆ ಮನೆ ನಮ್ಮ ಮನೆ 
ಅಜ್ಜ‌- ಅಜ್ಜಿ ಇರುವ ಮನೆ 
ಎಲ್ಲರೂ ಒಟ್ಟಾಗಿ ಇರುವ ಮನೆ 
ಸಂತೋಷವ ತುಂಬಿದ ನಮ್ಮ ಮನೆ


             ಮಳೆ
ಮಳೆ ಮಳೆ ಬಂತು ಮಳೆ 
ಪಿರಿಪಿರಿ ಸುರಿಸುವ ಚೆಂದದ ಮಳೆ 
ನದಿ-ಕೆರೆ ತುಂಬುವ ಮಳೆ
ಕೊಡೆ ಹಿಡಿಯಲು ಬಂತು ಮಳೆ


          ದೀಪಾವಳಿ ಹಬ್ಬ
ಬಂತು ಬಂತು ದೀಪಾವಳಿ ಹಬ್ಬ
ಎಣ್ಣೆಯ ಸ್ನಾನವ ಮಾಡುವ ಹಬ್ಬ
ಪಟಾಕಿ ಸಿಡಿಸುವ ದೀಪಾವಳಿ ಹಬ್ಬ
ಖುಷಿಯಲಿ ಆಚರಿಸುವ ದೀಪಾವಳಿ ಹಬ್ಬ




           ನನ್ನಯ ಅಪ್ಪ
ಅಪ್ಪ ಅಪ್ಪ  ನನ್ನಯ ಅಪ್ಪ
ಎಲ್ಲವ ಕೊಡಿಸುವ ಪ್ರೀತಿಯ ಅಪ್ಪ
ನನ್ನಯ ಕನಸು ಇಡೇರಿಸುವ ಅಪ್ಪ
ನನ್ನ ಜೊತೆಗಿರುವ ಮೆಚ್ಚಿನ ಅಪ್ಪ



                 ಕೋಗಿಲೆ 
ಕುಹೂ ಕುಹೂ ಕೂಗುವ ಕೋಗಿಲೆ 
ಚೆಂದದ ಧ್ವನಿಯಿಂದ ಹಾಡುವ ಕೋಗಿಲೆ
ಬೆಳ್ಳಂಬೆಳಗ್ಗೆ ಹಾಡುವ ಕೋಗಿಲೆ
ನಿತ್ಯವೂ ಹಾಡುವ ನನ್ನಯ ಕೋಗಿಲೆ


              ನನ್ನಯ ನವಿಲೇ
ನವಿಲೇ ನವಿಲೇ ನನ್ನಯ ನವಿಲೇ 
ಬಣ್ಣದ ಗರಿಯ ಚಂದದ ನವಿಲೇ 
ಗರಿ ಬಿಚ್ಚಿ ಕುಣಿಯುವ ಮೋಹಕ ನವಿಲೇ
ರಾಷ್ಟ್ರದ ಪಕ್ಷಿ ಇದು ಸುಂದರ ನವಿಲೇ



         ಮುದ್ದಿನ ಗೊಂಬೆ
ಗೊಂಬೆ ಗೊಂಬೆ ಚೆಂದದ ಗೊಂಬೆ
ಮಕ್ಕಳಿಗಿಷ್ಟದ ಒಲವಿನ ಗೊಂಬೆ
ಜಾತ್ರೆಯಲಿ ಕೊಂಡ ಮುದ್ದಿನ ಗೊಂಬೆ 
ಎಲ್ಲಾ ಮಕ್ಕಳು ಸೇರಿ ಆಡುವ ಗೊಂಬೆ



         ನನ್ನಯ ಪೆನ್ನು
ಪೆನ್ನು ಪೆನ್ನು ನನ್ನಯ ಪೆನ್ನು 
ಎಲ್ಲರೂ ಬರೆಯುವ ಚೆಂದದ ಪೆನ್ನು
ದುಂಡಾಗಿ ಬರೆಯುವ ಮೆಚ್ಚಿನ ಪೆನ್ನು
ಎಲ್ಲರಿಗೂ ಮುಖ್ಯವೀ ಸುಂದರ ಪೆನ್ನು


         ಚೆಂದದ ಗುಲಾಬಿ 
ಗುಲಾಬಿ ಗುಲಾಬಿ ಚೆಂದದ ಗುಲಾಬಿ 
ಮುಳ್ಳಿನ ಗಿಡದಲಿ ಅರಳಿದ ಗುಲಾಬಿ 
ನಾನು ಮುಡಿಯುವ ಇಷ್ಟದ ಗುಲಾಬಿ
ಎಲ್ಲರಿಗೂ ಬೇಕು ಬಣ್ಣ ಬಣ್ಣದ ಗುಲಾಬಿ



              ಬೆಕ್ಕು
ಬೆಕ್ಕು ಬೆಕ್ಕು ನನ್ನಯ ಬೆಕ್ಕು 
ಹಾಲನು ಕದಿಯುವ ಕಳ್ಳ ಬೆಕ್ಕು
ಮುದ್ದಾಗಿ ಕಾಣುವ ಬಿಳಿ ಬಿಳಿ ಬೆಕ್ಕು
ಎಲ್ಲರಿಗೂ ಇಷ್ಟ ಈ ಗುಂಡು ಬೆಕ್ಕು


            ಗೆಜ್ಜೆ
ಗೆಜ್ಜೆ ಗೆಜ್ಜೆ ಚೆಂದದ ಗೆಜ್ಜೆ
ಹೆಣ್ಣು ಮಕ್ಕಳ ಕಾಲಲಿ ಬೆಳ್ಳಿಯ ಗೆಜ್ಜೆ
ಗಿಜಿ - ಗಿಜಿ ಸದ್ದನು ಮಾಡುವ ಗೆಜ್ಜೆ 
ಪಾದಕೆ ಸುಂದರ ಅಂದದ ಗೆಜ್ಜೆ



                 ಮರ
ಮರ ಮರ ಹಚ್ಚ ಹಸುರಿನ ಮರ
ಸಿಹಿಯಾದ ಹಣ್ಣುಗಳನ್ನು ಕೊಡುವ ಮರ
ತಂಪಾದ ನೆರಳು ಕೊಡುವ ಮರ
ಜೋಕಾಲಿ ಆಡುವ ನೆಚ್ಚಿನ ಮರ



             ನೀರು
ನೀರು ನೀರು ಕುಡಿಯುವ ನೀರು
ಎಲ್ಲರಿಗೂ ಅವಶ್ಯಕ ಶುದ್ಧದ ನೀರು
ಎಲ್ಲಿಯೂ ಪೋಲಾಗದಂತೆ ನೊಡೋಣ ನೀರು
ನಾವೆಲ್ಲ ಸಂರಕ್ಷಿಸೋಣ ಶುದ್ಧವಾದ ನೀರು




                   ನಮ್ಮ ದೇಶ
ನಮ್ಮ ದೇಶವೆಂಬ ರಾಷ್ಟ್ರಪ್ರೇಮವಿರಲಿ
ಹೊಡೆದು ಬಡಿದು ಸಾಯಬೇಡಿ ಈ ಮಣ್ಣಲಿ
ನಾವೆಲ್ಲ ಒಂದೇ ಎಂದೂ ಬಾಳಿ ಈ ದೇಶದಲಿ
ನಾವೆಲ್ಲರೂ ದೇಶ ಕಟ್ಟೋಣ ಒಂದಾಗಿ ಬಾಳಿ  



                 ಅಮ್ಮ
ಅಮ್ಮ ಅಮ್ಮ ನನ್ನಯ ಅಮ್ಮ
ಹೆತ್ತು‌ ಹೊತ್ತು ಸಾಕಿದ ನನ್ನಮ್ಮ
ತಪ್ಪು ಮಾಡಿದರೆ ಕ್ಷಮಿಸುವ ಅಮ್ಮ
ದೇವರ ಸಮಾನ ನನಗೆ ನೀನಮ್ಮ 


                   ಕೊಡೆ
ಕೊಡೆ ಕೊಡೆ ನನ್ನಯ ಕೊಡೆಯದು 
ಮಳೆಗಾಲ ಬಂದರೆ ಬೇಕಾಗುವುದು
ನೀನು ಇಲ್ಲದೆ ಒದ್ದೆಯಾಗುವುದು
ಮಳೆಗಾಲ ಹೋದರೆ ಬೇಡವಾಗುವುದು



                ಇರುವೆ
ಇರುವೆ ಇರುವೆ ಸಣ್ಣದಾಗಿರುವೆ
ಶಿಸ್ತಿನಲಿ ನಿತ್ಯ ಸಾಲಾಗಿ ಹೋಗುವೆ
ಒಟ್ಟಾಗಿ ಆಹಾರ ಸಂಗ್ರಹ ಮಾಡುವೆ
ಸಹಬಾಳ್ವೆಯಿಂದ ಸದಾ ಒಟ್ಟಾಗಿರುವೆ
...................................................... ಕಾವ್ಯ
10 ನೇ ತರಗತಿ
ಸರಕಾರಿ ಪ್ರೌಢ ಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು,  ದಕ್ಷಿಣ ಕನ್ನಡ ಜಿಲ್ಲೆ
********************************************

Ads on article

Advertise in articles 1

advertising articles 2

Advertise under the article