ಪ್ಲೀಸ್...!! ನನ್ನ ಮಾತು ಕೇಳಿ - ಲೇಖನ : ಫಾತಿಮತ್ ಸೈದ ,7ನೇ ತರಗತಿ
Saturday, June 10, 2023
Edit
ಲೇಖನ : ಫಾತಿಮತ್ ಸೈದ
7ನೇ ತರಗತಿ
ಅಕ್ಷರ ಭಾರತಿ ವಿದ್ಯಾಲಯ ಆಲದಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ನಾನು ಇಂದು ನಿಮ್ಮೆಲ್ಲರಿಗೂ ಒಂದು ಲೇಖನ ಬರೆಯಲು ಕಾರಣ ಇದೆ. ಕುರುಕುರೆ, ಲೇಸ್ ನಂತಹ ಆಹಾರದ ಬಗ್ಗೆ ಮಾಹಿತಿ ನೀಡಬೇಕೆಂದಿದ್ದೇನೆ.
ನನಗೆ ನನ್ನ ತಂದೆ ತಾಯಿ ಎಷ್ಟು ಸಲ ಹೇಳಿದರೂ ಅವರ ಮಾತು ಕೇಳದೆ ಅಂಗಡಿ ಪ್ಯಾಕೆಟ್ ತಿಂಡಿ ತಿನ್ನುತ್ತಿದ್ದೆ. ಕುರುಕುರೆ, ಲೇಸ್ ನಂತಹ ಅನಾರೋಗ್ಯಕರವಾದ ತಿಂಡಿ ತಿನಿಸುಗಳು. ನಾನು ಅದನ್ನು ತಿಂದು ವಾಂತಿ, ಭೇದಿಯಾಗಿ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದೆ. ಸೂಜಿ, ಕಹಿ ಮಾತ್ರೆಗಳ ನೋವನ್ನು ಪಡೆದೆ. ಅದೇ ತಂದೆ ತಾಯಿ ಮಾತು ಕೇಳಿದ್ದರೆ ಈ ರೋಗ ಬರುತ್ತಿರಲಿಲ್ಲ. ಚುಚ್ಚು ಮದ್ದು ತೆಗೆದುಕೊಳ್ಳ ಬೇಕಾಗಿರಲಿಲ್ಲ.
ಆದ್ದರಿಂದ ನನ್ನ ಎಲ್ಲಾ ಜಗಲಿ ಮಿತ್ರರಲ್ಲಿ ಹೇಳುತ್ತಿದ್ದೇನೆ.... ನೀವು ಹೀಗೆ ನೋವು ಪಡಬಾರದು ಎಂದಾದರೆ.... ನೀವು ಇಂತಹ ಜಂಕ್ ಫುಡ್, ಪ್ಯಾಕೆಟ್ ಆಹಾರ ತಿನ್ನುವ ಅಭ್ಯಾಸ ಬಿಟ್ಟುಬಿಡಿ ಪ್ಲೀಸ್...!! ಧನ್ಯವಾದಗಳೊಂದಿಗೆ.
7ನೇ ತರಗತಿ
ಅಕ್ಷರ ಭಾರತಿ ವಿದ್ಯಾಲಯ ಆಲದಪದವು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************