-->
ಪ್ರೀತಿಯ ಪುಸ್ತಕ : ಸಂಚಿಕೆ - 63

ಪ್ರೀತಿಯ ಪುಸ್ತಕ : ಸಂಚಿಕೆ - 63

ಪ್ರೀತಿಯ ಪುಸ್ತಕ
ಸಂಚಿಕೆ - 63
ಲೇಖಕರು : ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ


       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ 


                                ಜೈ ಭೀಮ್ 
     ಪ್ರೀತಿಯ ಮಕ್ಕಳೇ..... ಜೈ ಭೀಮ್ ಪುಸ್ತಕ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನೆನಪಿಸುವ ಒಂದು ವಿಶೇಷ ಪ್ರಯತ್ನ. ಭೂಮಿ ಮೇಲೆ, ಮಕ್ಕಳ ಮೇಲೆ, ಜನರ ಮೇಲೆ ಯಾವುದೇ ರೀತಿಯ ಅನ್ಯಾಯ ಜರಗಿದರೆ ಆಗಸದಿಂದ ‘ವಿ ದ ಪೀಪಲ್ ಆಫ್ ಇಂಡಿಯಾ’ ಅನ್ನುವ ಸದ್ದು ಕೇಳಿ ಬರುತ್ತದೆ. ಕೆಂಪು ಸೂರ್ಯನ ನಡುವಿನಿಂದ ಪಕ್ಷಿಯೊಂದು ಹಾರುತ್ತಾ ಕೆಳಗೆ ಇಳಿಯುತ್ತದೆ. ಆ ಪಕ್ಷಿ ಮನುಷ್ಯನನ್ನು ಹೋಲುತ್ತದೆ. ಆತನ ರೆಕ್ಕೆಗಳು ದೊಡ್ಡ ಪುಸ್ತಕದಂತಿವೆ, ಅದರ ಮೇಲೆ ಭಾರತದ ಸಂವಿಧಾನ ಎಂದು ಬರೆದಿದೆ. ಸೊಂಟದಲ್ಲಿ ದೊಡ್ಡ ಲೇಖನಿಯನ್ನು ಕತ್ತಿಯಂತೆ ಸಿಕ್ಕಿಸಿಕೊಳ್ಳಲಾಗಿದೆ. ಎದೆಯ ಮೇಲೆ ಅಶೋಕ ಚಕ್ರವಿದೆ.. ಯಾರಪ್ಪಾ ಇದು? ಈ ವೇಷದಲ್ಲಿ? ಒಳ್ಳೆ ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್ ತರಹ ಸಾಹಸಿಯ ಹಾಗೆ ಬಲಿಷ್ಠರ ಹಾಗೆ ಬಂದಿರುವುದು. ಸ್ವಾತಂತ್ರ್ಯ, ಸಮಾನತೆ, ಬಂಧುತ್ವಕ್ಕಾಗಿ ದುಡಿದ ಮಹಾನಾಯಕ ಅಂಬೇಡ್ಕರ್ ಅವರು. ನಿಜವಾಗಿಯೂ ಅವರ ಬಲ ಇರುವುದು ಅವರು ಬರೆದಿರುವ ಸಂವಿಧಾನದ ಆಶಯಗಳಲ್ಲಿ. ಇವರು ಒಬ್ಬ ಬೇರೇ ರೀತಿಯ ಸೂಪರ್ ಮ್ಯಾನ್ ಅನ್ನಬಹುದು. ಓದಿ ನೋಡಿ. ಚಿತ್ರಗಳೂ ವಿಭಿನ್ನವಾಗಿವೆ. ಓದಿ ನೋಡಿ. 
ಪ್ರಕಾಶಕರು: ನವಕನಾ೵ಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್
ಲೇಖಕರು: ವಿಕಾಸ ಆರ್ ಮೌರ್ಯ
ಚಿತ್ರಗಳು: ಸುರೇಶ್ ಆರ್.ಅಕ೵ಸಾಲಿ 
ಬೆಲೆ: ರೂ.60/- 
ಏಳು ಎಂಟನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
..................................... ವಾಣಿ ಪೆರಿಯೋಡಿ
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
********************************************



Ads on article

Advertise in articles 1

advertising articles 2

Advertise under the article