ಮಹಾಪಂಡಿತ - ಕಥೆ ರಚನೆ : ಆಧ್ಯ ಎನ್ ನಾಯಕ್, 6ನೇ ತರಗತಿ
Monday, June 12, 2023
Edit
ಕಥೆ ರಚನೆ : ಆಧ್ಯ ಎನ್ ನಾಯಕ್
6ನೇ ತರಗತಿ
ಶ್ರೀ ರವಿಶಂಕರ ವಿದ್ಯಾ ಮಂದಿರ ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಒಂದಾನೊಂದು ಕಾಲದಲ್ಲಿ ಇಬ್ಬರು ವಿದ್ಯಾರ್ಥಿಗಳು ಇದ್ದರು. ಇಬ್ಬರೂ ಗುರುಗಳ ಬಳಿ ವಿದ್ಯೆ ಕಲಿಯಲು ಹೋದರು. ಅದರಲ್ಲಿ ಒಬ್ಬ ಬಹಳ ಬುದ್ಧಿವಂತ. ಹೀಗಾಗಿ ಗುರುಗಳು ಕಲಿಸಿದ ಎಲ್ಲಾ ವಿದ್ಯೆಯನ್ನು ಬಹಳ ಬೇಗ ಕಲಿತನು. ಮತ್ತೊಬ್ಬನು ಬಹಳ ದಡ್ಡ. ಅವನು ಏನನ್ನೂ ಕಲಿಯಲಿಲ್ಲ. ಅವನ ಹೆಸರು ಬೋಪದೇವ. ಕೊನೆಗೆ ಗುರುಗಳಿಗೆ ಬೇಸರವಾಗಿ ಅವನನ್ನು ಆಶ್ರಮದಿಂದ ಕಳಿಸಿಬಿಟ್ಟರು. ದಾರಿಯಲ್ಲಿ ನಡೆಯುವಾಗ ಬೋಪದೇವನು ನೀರು ಕುಡಿಯಲು ಬಾವಿಯ ಹತ್ತಿರ ಬಂದನು. ಬಾವಿಯ ಸುತ್ತ ಇದ್ದ ಕಲ್ಲಿನಲ್ಲಿ ಹಳ್ಳದಂತ ಗುರುತುಗಳನ್ನು ನೋಡಿದ. ನೀರು ತುಂಬಿದ ಕೊಡಗಳನ್ನು ಇಟ್ಟು ಇಟ್ಟೂ ಆ ಗುರುತುಗಳು ಆಗಿದ್ದವು. ಬೋಪದೇವ ಯೋಚನೆ ಮಾಡಿದ ಕೇವಲ ಕೊಡಗಳು ಕಲ್ಲಿನಲ್ಲಿಯೂ ಹಳ್ಳವನ್ನು ಮಾಡಿವೆ. ಹಾಗಾದರೆ ನಾನು ಕಲ್ಲಿಗಿಂತಲೂ ಗಟ್ಟಿಯೇ....? ನನ್ನಲ್ಲಿ ವಿದ್ಯೆ ಕಲಿಯಲು ಸಾಧ್ಯವಿಲ್ಲವೇ....? ಎಂದು ಕೂಡಲೇ ಗುರುಗಳ ಬಳಿಗೆ ಹಿಂತಿರುಗಿ ಬಂದನು.
ಗುರುಗಳ ಬಳಿ ಕ್ಷಮೆ ಕೇಳಿ ಶ್ರದ್ಧೆಯಿಂದ ಅಭ್ಯಾಸ ಮಾಡತೊಡಗಿದನು. ಸ್ವಲ್ಪ ಕಾಲದಲ್ಲಿಯೇ ಅವನು ದೊಡ್ಡ ಪಂಡಿತನಾಗಿ ಅನೇಕ ಗ್ರಂಥಗಳನ್ನು ಬರೆದನು.
6ನೇ ತರಗತಿ
ಶ್ರೀ ರವಿಶಂಕರ ವಿದ್ಯಾ ಮಂದಿರ ಕಾರ್ಕಳ
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
*******************************************