-->
ಸಂಚಾರಿಯ ಡೈರಿ : ಸಂಚಿಕೆ - 39

ಸಂಚಾರಿಯ ಡೈರಿ : ಸಂಚಿಕೆ - 39

ಸಂಚಾರಿಯ ಡೈರಿ : ಸಂಚಿಕೆ - 39

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
        
       ಪ್ರಪಂಚದ ಅತೀ ದೊಡ್ಡ ದೇವಾಲಯ ಅಂತಂದಾಗ ಅದು ಭಾರತದಲ್ಲಿಲ್ಲ‌ ! ಅದಿರೋದು ಕಾಂಬೋಡಿಯಾ ದೇಶದಲ್ಲಿ. ಆದರೆ ಭಾರತದ ಅತೀ ದೊಡ್ಡ ದೇವಾಲಯ ನಮ್ಮ ತಮಿಳುನಾಡಿನ ಶ್ರೀರಂಗಂ‌ ಶ್ರೀರಂಗನಾಥ ಸ್ವಾಮಿ ದೇವಾಲಯ. ಯುನೆಸ್ಕೋ ಪಟ್ಟಿಯಲ್ಲಿ‌ ಸಂರಕ್ಷಿತ ಕಟ್ಟಡವೂ ಹೌದು.....
                   
    ಈ ದೇವಾಲಯದ‌ ವಿಶಿಷ್ಟ ರಚನೆ ದೇಶ-ವಿದೇಶಗಳ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಆಳೆತ್ತರದ‌ ಗೋಪುರವಿದೆ. ಅಲ್ಲಿಂದ ಮುಂದೆ ಹೋದಾಗ ಆಳೆತ್ತರದ ಪ್ರವೇಶ ದ್ವಾರಗಳು. ವೈಕುಂಠಕ್ಕೆ ಹೇಗೆ ಏಳು ಬಾಗಿಲುಗಳೋ ಹಾಗೆಯೇ ಇಲ್ಲೂ ಅದೇ ಕಲ್ಪನೆಯಲ್ಲಿ ಕೆತ್ತಲಾಗಿದೆ. ಭೂಲೋಕ‌ ವೈಕುಂಠ ಎಂಬ ಹೆಸರೂ ಇಲ್ಲಿಗಿದೆ..
            
           ದೇವಸ್ಥಾನ ಸೂಕ್ಷ್ಮ ಕೆತ್ತನೆಗಳಿಗೆ ಹೆಸರಾಗಿವೆ.. ಒಳಗಿನ ಮಂಟಪದ‌‌ ಕಂಬಗಳಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕೆತ್ತನೆಗಳಿವೆ. ಚಿಕ್ಕ ಪುಟ್ಟ ತಮಿಳು, ಸಂಸ್ಕೃತ, ಕನ್ನಡ, ಒಡಿಯಾ, ತೆಲುಗು ಭಾಷೆಯಲ್ಲಿನ‌ ಶಾಸನಗಳಿವೆ. ಮೂಲದೇವರು ಶಯನ ಸ್ಥಿತ ವಿಷ್ಣು, ಆದರೆ ಕೆತ್ತನೆಗಳಲ್ಲಿ ವಿವಿಧ ದೇವರುಗಳನ್ನ ಕಾಣಬಹುದು..
     
      ದಕ್ಷಿಣ ಭಾರತದಲ್ಲಿ ವೈಷ್ಣವ ಪಂಥದ ಪ್ರಚಾರ ಆರಂಭವಾಗಿದ್ದು ಇಲ್ಲಿಂದಲೇ.... ರಾಮಾನುಜಾಚಾರ್ಯರು ಪ್ರೇರಣೆ ಪಡೆದಿದ್ದು‌‌ ಇದೇ ರಂಗನಾಥನ ಸನ್ನಿಧಿಯಲ್ಲಿ. ಮಹಾಪ್ರಭು ಚೈತನ್ಯರಿಗೂ ದಾರಿ ತೋರಿಸಿದ ಜಾಗ ಇದೇ. ಕಾವೇರಿ ನದಿಯ ತಟದಲ್ಲಿರೋ ಈ ದೇವಾಲಯ ಸಾಲು ಸಾಲು ಸುಂದರ ಗೋಪುರಗಳಿಂದಾಗಿ ಮೈಲು ದೂರಕ್ಕೂ ಕಾಣಿಸುತ್ತದೆ.
         ಚೋಳ‌, ವಿಜಯನಗರಾದಿ ರಾಜ ವಂಶಸ್ಥರು ಇಲ್ಲಿ ಕಾಣಿಕೆ‌ ಸಲ್ಲಿಸುತ್ತಿದ್ದರು. ಇತಿಹಾಸದ‌ ಪ್ರಕಾರ ಇಲ್ಲಿಯ ಸಂಪತ್ತನ್ನು ಕೊಳ್ಳೆ ಹೊಡೆಯಲು ಕೆಲವು ರಾಜರು‌‌ ಪ್ರಯತ್ನಪಟ್ಟಿದ್ದರು.
         ಶ್ರೀರಂಗಂ ತೆರಳಲು ಹತ್ತಿರದ ವಿಮಾನನಿಲ್ದಾಣ ತಿರುಚಿರಾಪಳ್ಳಿ ವಿಮಾನ ನಿಲ್ದಾಣ. ಶ್ರೀರಂಗಂ‌ ರೈಲು ನಿಲ್ದಾಣ ಹತ್ತಿರದಲ್ಲೇ ಇದೆ. ತಿರುಚಿರಾಪಳ್ಳಿಯಿಂದ ಬಸ್ ಸೌಲಭ್ಯವಿದೆ. ಹಾಗೇಯೇ ಭಕ್ತಾದಿಗಳಿಗೆ ಅನ್ನಪ್ರಸಾದವೂ ಉಚಿತವಾಗಿ ಲಭ್ಯವಿದೆ. ಪಕ್ಕದಲ್ಲೇ ಲಾಡ್ಜ್ ಸೌಲಭ್ಯವೂ ಇದೆ. ಅಂದಹಾಗೆ ಮುಂದಿನ‌ ಸಲ‌ ತಮಿಳುನಾಡಿಗೆ ಭೇಟಿ ಕೊಟ್ಟಾಗ ಭಾರತದ ಅತೀ ದೊಡ್ಡ ದೇವಾಲಯ ನೋಡೋದು ಮರಿಬೇಡಿ..
......................................... ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************



Ads on article

Advertise in articles 1

advertising articles 2

Advertise under the article