ಅಮ್ಮ - ಕವನ ರಚನೆ : ಗಗನ.ಪಿ. ಆಚಾರ್ಯ, 10ನೇ ತರಗತಿ
Saturday, June 24, 2023
Edit
ಕವನ ರಚನೆ : ಗಗನ.ಪಿ.ಆಚಾರ್ಯ
10ನೇ ತರಗತಿ
ಕೆ.ಪಿ.ಎಸ್. ಕೆಯ್ಯೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ನೀ ನನಗೆ ಕೊಟ್ಟೆ ಜನ್ಮ
ನಿನ್ನ ಈ ಋಣವೇ ಹೇಗೆ ತೀರಿಸಲಮ್ಮ
ನನ್ನ ಜನ್ಮ ನಿನಗಾಗಿ ಮುಡಿಪಿಡುವೆನಮ್ಮ
ನಿನ್ನ ಆ ಲಾಲನೆ ಪಾಲನೆ
ನನ್ನಲ್ಲಿದೆ ಹಾಗೆ ಮೆಲ್ಲನೆ
ನಿನ್ನ ಪ್ರೀತಿಯೇ ನನಗೆ ರಕ್ಷಣೆಯಮ್ಮ
ನೀನಿಲ್ಲದೇ ನಾ ಇರಲಾರೆನಮ್ಮ...
ನನ್ನ ಇನ್ನೊಂದು ಜೀವ ನೀನೆ ಅಮ್ಮ
ನಿನ್ನ ನಾ ಮರೆಯಲಾರೆ ಅಮ್ಮ
ನನಗೆ ನಿನ್ನ ಹೊಟ್ಟೆಯಲ್ಲಿ ಕೊಟ್ಟೆ
ಒಂಭತ್ತು ತಿಂಗಳ ಜಾಗ
ನೀ ಎಷ್ಟು ಕಷ್ಟಪಟ್ಟೆಯೋ ಆಗ....!!
ನಿನ್ನ ಕಾಳಜಿಯೇ ನನಗೆ ಆಸರೆ
ನನ್ನ ಮೇಲೆ ಅದೆಷ್ಟು ನಿನಗೆ ಅಕ್ಕರೆ
ಶಾಲೆಗೆ ಹೋಗುವ ಮುಂಚೆ
ನನಗೆ ನೀನಾಗಿದ್ದೆ ಗುರು
ಇನ್ನೂ ನನ್ನ ಜೊತೆ ಹಾಗೆ ಇರು
ನಿನ್ನ ಆ ಸಣ್ಣ ನಗು
ಆ ನಗುವಿಗೆ ನಾನಾದೆ ಮಗು
ಅಮ್ಮ ನಿನಗಿದು ನಮನ
ನಿನಗಾಗಿ ನನ್ನ ಈ ಒಂದು ಕವನ....!
10ನೇ ತರಗತಿ
ಕೆ.ಪಿ.ಎಸ್. ಕೆಯ್ಯೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************