ಕವನಗಳ ರಚನೆ : ಸ್ನೇಹ , 9ನೇ ತರಗತಿ
Tuesday, May 23, 2023
Edit
ಕವನಗಳ ರಚನೆ : ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
ಇವರ ನಂಬಿ ಕೆಟ್ಟ ಹಾದಿ ಹಿಡಿದವರಿಲ್ಲ
ಶಿಷ್ಯರ ಸಾಧನೆಯೇ ಗುರುವಿನ ಗುರಿ
ಮಕ್ಕಳ ಭವಿಷ್ಯ ಬರೆಯುವ ಗರಿ
ಗುರು ಎಂದರೆ ದೇವರು ಕೊಟ್ಟ ವರದಂತೆ
ಶಿಷ್ಯರನ್ನು ಬೆಳೆಸಿದರು ಆಲದ ಮರದಂತೆ...
ನೋವ ನುಂಗಿ ನಗುವ ಹಂಚುವ ನಟರಿವರು
ಕಾಯಕದಲ್ಲಿ ಕೈಲಾಸ ಕಾಣುತ ಬದುಕುವವರು
ಕ್ಷಣ ಸಮಯ ಹಾನಿ ಮಾಡಬೇಡಿ
ಮತ್ತೊಬ್ಬರ ಸಮಯ ಬಳಸಿಕೊಳ್ಳಬೇಡಿ...
ನಿಜವಾಗಿಯೂ ನಿಮ್ಮ ಒಂದೊಂದು ವಚನ
ನಮ್ಮ ಜೀವನದ ಆಭರಣ...
ಗುರುಗಳ ಮನಸ್ಸು ಹಾಲಿನಂತೆ
ಶಿಷ್ಯರ ಮನವನ್ನು ಮಾಡಿದರು ಜೇನಿನಂತೆ...
ಅವರ ನಿಸ್ವಾರ್ಥದ ಬೋಧನೆ
ಮಕ್ಕಳ ಭವಿಷ್ಯದ ಬಗ್ಗೆ ಮಾಡಿದೆ ಚಿಂತನೆ...
ಗುರು ವೆಂದರೆ ಗುರುವೇ
ಅದು ದೇವರ ವರವೇ
....................................................... ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************
ಒಂಬತ್ತು ತಿಂಗಳು ಹೊತ್ತಿತು ಈ ನಿನ್ನ ಒಡಲು...
ಒಲವಿಗೆ ಆಸರೆಯಾಯಿತು ಆ ನಿನ್ನ ಮಡಿಲು
ಬದುಕಿಗೆ ನೆರಳಾಯಿತು ಈ ನಿನ್ನ ಮಮತೆಯು...
ಎಂದಿಗೂ ಕಣ್ಣೀರಿಗೆ ನೆಪವಾಗಲಿಲ್ಲ
ಇಂದಿಗೂ ಸುಖದಲ್ಲಿ ಪಾಲಾಗಲಿಲ್ಲ...
ಗೆದ್ದಾಗ ಹೊತ್ತು ಸಾರಿತು ಈ ನಿನ್ನ ಹೆಗಲು
ಬಿದ್ದಾಗ ಭರವಸೆಯ ನೋಟ ಬೀರಿತು ಆ ನಿನ್ನ
ಕಂಗಳು...
ಮೊದಲ ಗುರುವಾಗಿ ಅಕ್ಷರ ಕಲಿಸಿದೆ
ಮಮತೆಯ ತೋರುತ್ತಾ...
ಬದುಕಿನ ಚಿತ್ರ ಕೆತ್ತಿಸಿದೆ
ಶಿಲ್ಪಿ ಎನ್ನುತ್ತಾ...
ಆ ನಿನ್ನ ಮಮತೆಯು
ಈ ನನ್ನ ಕವಿತೆಯು...
ನಾ ವಸೂಲಿ ಮಾಡಿದ ಈ ಪ್ರೀತಿಯು
ಹಿಂದಿರುಗಿಸುವುದಕ್ಕೆ ಬಹಳ ಪಜೀತಿಯು...
....................................................... ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************
ನಂಬಿಕೆಯಿಟ್ಟ ಗುರುಗಳಿಗಾಗಿ ನೀ ಸಾಧಿಸು...
ಜೀವನದ ಮೌಲ್ಯಗಳನ್ನು ಪ್ರೀತಿಸುತ್ತಾ
ಛಲ ತೊಟ್ಟು ನೀ ಸಾಧಿಸು...
ಅಪಮಾನಿಸಿದವರಾರು ನಿನಗೆ ಹಿತವರಲ್ಲ
ಕೆಟ್ಟವರ ಸಹವಾಸ ಬಿಡುತಾ ಬಾ ಮೆಲ್ಲ...
ಯಥಾರ್ಥವು ಬೆನ್ನತ್ತಿ ಬಂದರೆ ಬೇಡ ಯೋಚನೆ
ಮಿಥ್ಯಥೆಯು ಕಣ್ತಪ್ಪಿಸಿ ಬಂದರೂ ಬೇಡ
ಯಾಚನೆ...
ನ್ಯಾಯವು ಸಾಸಿವೆಯಂತಿದ್ದರು ಇರಲಿ ನಿನಗೆ ಭಕ್ತಿ
ಅನ್ಯಾಯದ ಸಾಗರದಿಂದ ಪಡೆ ನೀ ಮುಕ್ತಿ...
ಕೀಳಾಗಿ ಕಂಡರೂ ಕೊಡಬೇಡ ಜಾಗ ಸ್ವಾರ್ಥದಲ್ಲಿ
ಎಲ್ಲವನ್ನೂ ಶಾಂತಿಯಿಂದ ಸ್ವೀಕರಿಸು ನಿಸ್ವಾರ್ಥದಲ್ಲಿ...
ಚಿರಕಾಲ ಅಭಿಮಾನವಿರಲಿ ಬದ್ಧತೆಗೆ
ಸಾಧನೆಯ ಸಾಗರಕ್ಕೆ ಆಗಮವಿಲ್ಲ ಅಬದ್ಧತೆಗೆ..
ಇಂದು ಹೊತ್ತಗಗೆ ತಲೆ ಬಾಗು ಸೇವಕನಾಗಿ
ನಾಳೆ ತಲೆ ಬಾಗದಂತೆ ಬಾಳು ಬದುಕಿನ
ಸಾರ್ಥಕನಾಗಿ...
....................................................... ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************
ರಾಮಕೃಷ್ಣ ಪರಮಹಂಸರ ಶಿಷ್ಯರಾಗಿ...
ನಾಡಿನ ಯುವಕರಿಗೆ ದೈವವಾಗಿ
ಇಳಿದ ಧರೆಗೆ ಬೆಳಗುವ ಪ್ರಣತೆಯಾಗಿ...
ಯುವಕರಲ್ಲಿ ಹುರುಪು-ಹುಮ್ಮಸ್ಸನ್ನು ತುಂಬುತ್ತಾ
ಅವರ ಸರ್ವೋನ್ನತಿಗೆ ಹೊಸ ಭಾಷ್ಯವನ್ನೇ ಬರೆಯುತ್ತಾ...
ಎಲ್ಲೆಡೆ ಶಕ್ತಿ, ಸಾಮರ್ಥ್ಯವನ್ನು ಹೆಚ್ಚಿಸುತ್ತಾ
ಮಾತೃಭೂಮಿಯಲ್ಲಿ ತೋರಿದ ಯುವಕರ ಸೃಜನಶೀಲತೆಯನ್ನ...
ಜನರ ಭಾವಗಳನ್ನು ಸಾರುವ ತತ್ವಜ್ಞಾನಿ
ಯುವಕರ ವೇದಾಂತವನ್ನು ತಿಳಿಸುವ ಲೋಕಜ್ಞಾನಿ...
"ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯಚ"
"ಸರ್ವ ಮನವೋಳ್ ಪಡೆದೆ ಗುರುದ್ವಾರಾಯಚ"
....................................................... ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************
ನೀನೇ ನನ್ನ ಮೊದಲ ದೇವತೆ...
ನೀನೇ ನನ್ನ ಬಾಳ ಪ್ರಣತೆ
ಸದಾ ನನ್ನೊಂದಿಗಿರುವ ಸ್ನೇಹಿತೆ...
ನಾ ಗೆದ್ದರಂತು ಹೊತ್ತುಕೊಂಡು ಸಾರಿದೆ
ಬಿದ್ದರಂತು ಎತ್ತಿಕೊಂಡು ರಮಿಸಿ ನಗಿಸಿದೆ...
ನಿನ್ನ ಬಗ್ಗೆ ಹೊಗಳಲು ಪದಗಳಿಲ್ಲ
ಆದರೆ ನಿನ್ನ ಬಗ್ಗೆ ಹೊಗಳದೇ ಇರುವ
ಕ್ಷಣಗಳಿಲ್ಲ...
ನೀ ಇರುವಾಗ ಇಲ್ಲ ನನಗೆ ಸಮಸ್ಯೆ
ನನಗಾಗಿ ದುಡಿದೆ ಹಗಲಿರುಳೆನ್ನದೆ...
ನೀನೇ ನನ್ನ ಜೀವ
ನೀನೇ ನನ್ನ ದೈವ...
ನೀ ಕಾಣದ ಒಂದು ಕ್ಷಣ
ಇಲ್ಲ ಅಮ್ಮ ಈ ಜೀವ...
....................................................... ಸ್ನೇಹ
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************
ಕರುನಾಡವೆಂಬ ಸ್ವರ್ಗ ಸದಾ ನಮ್ಮದಾಗಿರಲಿ...
ಕನ್ನಡ ಮಾತೆಯ ಮಡಿಲಿನಲ್ಲಿ
ಕನ್ನಡದ ಕಂದರು ರಾರಾಜಿಸಲಿ ...
ಅಮ್ಮಾ ಎಂದು ಕೂಗುತಿಹೆವು
ಕನ್ನಡವೆಂಬ ತೊಟ್ಟಿಲೊಳಗೆ...
ಕನ್ನಡವೆಂಬ ತೊಟ್ಟಿಲಿಡಿದು
ಜೋಗುಳವಾಡುತಿಹಳು ಕನ್ನಡದ ಮಾತೆ...
ಕನ್ನಡಿಗನೆಂದು ಎದೆ ತಟ್ಟಿ
ಹೇಳು ಭಯವಿಲ್ಲದೆ...
ಇರುವಳು ಕನ್ನಡ ಮಾತೆ
ಸದಾ ಮರೆಯಾಗದೆ...
ಪರಭಾಷಗಳಿಗೆ ನಮ್ಮಲಿ ಸ್ನೇಹವಿರಲಿ
ಕನ್ನಡವು ನಮ್ಮೆದೆಯಲ್ಲಿ ಚಿರಕಾಲವಿರಲಿ...
ನುಡಿಯಲ್ಲೂ ಕನ್ನಡ
ನಡೆಯಲ್ಲೂ ಕನ್ನಡ...
ಮನದಲ್ಲೂ ಕನ್ನಡ
ಬದುಕೆಲ್ಲಾ ಕನ್ನಡಾ
ಕನ್ನಡಾ ಕನ್ನಡಾ...
9ನೇ ತರಗತಿ
ಸರಕಾರಿ ಪ್ರೌಢಶಾಲೆ ತೋರಣಗಲ್ಲು
ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ
********************************************