ಪ್ರೀತಿಯ ಪುಸ್ತಕ : ಸಂಚಿಕೆ - 60
Friday, May 26, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 60
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ನನಗೆ ಅಮ್ಮನ ಹಳೆಯ ಸೀರೆ ಹೊದ್ದುಕೊಂಡು ಮಲಗುವುದೆಂದರೆ ಬಹಳ ಇಷ್ಟ ಇತ್ತು. ಅದರಲ್ಲೂ ಹಳೆಯ ಸೀರೆಗಳನ್ನು ಜೋಡಿಸಿ ಹೊಲಿದರೆ ಅದೊಂದು ಬೆಚ್ಚಗಿನ ಅನುಭವ. ಹಾಗೆ ಹೊಲಿದ ಬಟ್ಟೆಯನ್ನು ರಜಾಯಿ, ಕೌದಿ ಎಂದೆಲ್ಲಾ ಹೇಳುತ್ತಾರೆ. ಬಣ್ಣ ಬಣ್ಣದ ಬಟ್ಟೆ ತುಂಡುಗಳನ್ನು ಜೋಡಿಸಿ ಹೊಲಿವ ಕೌದಿ ನೋಡಲು ಬಲು ಚಂದ. ಈ ಕಥೆಯ ಚಿನ್ನಿ ಎಂಬ ಹುಡುಗಿಗೆ, ದಾವಣಗೆರೆಯಲ್ಲಿ ಅಜ್ಜಿ ಮನೆಗೆ ಬಂದಾಗ, ಕೌದಿ ಬಗ್ಗೆ ತಿಳಿಯಿತು. ಕೌದಿ ಹೊಲಿವ ನೀಲಮ್ಮಜ್ಜಿ ಮನೆ ತನಕ ಬಂದು ಹಳೆ ಸೀರೆ ತೆಗೆದುಕೊಂಡು ಕೌದಿ ಹೊಲಿಯುತ್ತಾಳೆ. ಚಿನ್ನಿಗೆ ಒಂದು ಪುಟ್ಟ ಕೌದಿಯೂ ತಯಾರಾಗುತ್ತದೆ. ಚಿನ್ನಿಗೆ ಖುಶಿಯೋ ಖುಶಿ. ಮುಖ ತುಂಬಾ ನಗು ಇರುವ ಮುದ್ದು ಮುದ್ದು ಅಜ್ಜಿಯಂದಿರ ಚಿತ್ರಗಳಿದ್ದು ನೋಡುವುದಕ್ಕೆ ಚೆನ್ನಾಗಿದೆ. ಈ ಪುಸ್ತಕ ನೋಡಿದರೆ, ನಿಮಗೂ ಕೌದಿ ಹೊಲಿಯುವ ಯೋಚನೆ ಬಂದೀತು. ಓದಿ ನೋಡಿ, ಚಿತ್ರ ನೋಡಿ, ಹಳೆ ಬಟ್ಟೆ ತುಂಡುಗಳನ್ನು ಎತ್ತಿಕೊಳ್ಳಿ. ಸೂಜಿಗೆ ದಾರ ಪೋಣಿಸಿ ಹೊಲಿಯಲು ಶುರು ಮಾಡಿಯೇ ಬಿಡಿ.
ಲೇಖಕರು: ಯಶಸ್ವಿನಿ ಎಸ್.ಎನ್
ಚಿತ್ರಗಳು: ಅರುಣ್ ಪ್ರಕಾಶ್
ಪ್ರಕಾಶಕರು: ಹರಿವು ಬುಕ್ಸ್, ಮೊಬೈಲ್ ಸಂ. 8088822171
ಬೆಲೆ: ರೂ 85/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************