ಪ್ರೀತಿಯ ಪುಸ್ತಕ : ಸಂಚಿಕೆ - 59
Friday, May 19, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 59
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಗಡಬಡ ಧಡ ಧಡ ರಿಕ್ಷಾ ಸವಾರಿ ಮಕ್ಕಳಿಗೆ ಇಷ್ಟವೇ ಅಲ್ಲವೇ..? ಈ ರಿಕ್ಷಣ್ಣಂದೂ ಒಂದು ಕಥೆ. ಅವನಿಗೂ ಆನೆಗೂ ಒಂದು ಆಕಸ್ಮಿಕ ಸ್ನೇಹ. ಅಬ್ಬಾ, ರಿಕ್ಷಾದಲ್ಲಿ ಒಂದು ಆನೆ ಕುಳಿತುಕೊಂಡರೆ ಹೇಗಿರಬಹುದು ಊಹಿಸಿ.. ಈ ಕಥೆಯಲ್ಲಿ ಅಂತಹುದೆಲ್ಲಾ ನಡೆಯುತ್ತದೆ. ಚಿತ್ರಗಳೂ ಬಹಳ ಮಜ ಮಜಾ ಅನಿಸುತ್ತವೆ. ಈ ರಿಕ್ಷಣ್ಣನ ಮುಖದ ಮೇಲಿನ ತರತರಹದ ಭಾವನೆಗಳನ್ನು ನೋಡಿದರೆ ನೀವೂ ಖುಶಿ ಪಡುತ್ತೀರಾ. ನೀವೂ ಕೂಡಾ ಹೀಗೆ ಜೀವ ಇಲ್ಲದ ವಸ್ತುಗಳಿಗೆ ಜೀವ ಕೊಟ್ಟು, ಮಾತು ಕೊಟ್ಟು ಕಥೆ ಬರೆಯಬಹುದು. ನಿಮ್ಮ ಸೈಕಲನ್ನೇ ಒಂದು ಕಥೆಯ ಪಾತ್ರ ಮಾಡಬಹುದು. ಏನಕ್ಕೂ, ರಿಕ್ಷಣ್ಣ ಆನೆಗೆ ಸಹಾಯ, ಆನೆಗಳು ರಿಕ್ಷಣ್ಣನಿಗೆ ಸಹಾಯ ಹೇಗೆ ಮಾಡಿದವು ಅಂತ ತಿಳಿದುಕೊಳ್ಳಲು ಈ ಪುಸ್ತಕ ನೀವು ಓದಲೇ ಬೇಕಲ್ಲಾ? ಓದಿದ ಮೇಲೆ ನೀವೂ ಏನಾದರೂ ಬರೆಯಿರಿ.
ಲೇಖಕರು: ಅನುಪಮಾ ಕೆ ಬೆಣಚಿನಮರಡಿ
ಚಿತ್ರಗಳು: ಸಂತೋಷ್ ಸಸಿಹಿತ್ಲು
ಪ್ರಕಾಶಕರು: ಹರಿವು ಬುಕ್ಸ್, ಮೊಬೈಲ್ ಸಂ. 8088822171
ಬೆಲೆ: ರೂ.90/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************