-->
ಕವನಗಳ ರಚನೆ : ದೀಪ್ತಿ ಕೆ.ಸಿ , 10ನೇ ತರಗತಿ

ಕವನಗಳ ರಚನೆ : ದೀಪ್ತಿ ಕೆ.ಸಿ , 10ನೇ ತರಗತಿ

ಕವನಗಳ ರಚನೆ : ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
   
           
              

ಅದೆಂಥಾ ಸೊಗಸು ನಮ್ಮ ಹಳ್ಳಿಯ ಪರಿಸರ
ಸುತ್ತಲೂ ಕಂಗೊಳಿಸುತ್ತಿವೆ ಹಸಿ ಹಸಿರಾದ ಗಿಡಮರ...!
    ಚಿಲಿಪಿಲಿ ಎನ್ನುತ ಹಕ್ಕಿಗಳ ಹಾರಾಟ
    ಬಾನಲ್ಲಿ ಹಾರುತಿದೆ ಮಕ್ಕಳ ಗಾಳಿಪಟ.....!
ಬೆಳಗಾದರೆ ಹೊಲಕ್ಕೆ ಹೋಗಿ ದುಡಿಯುವ ರೈತ
ಕತ್ತಲಾದರೆ ಖುಷಿಪಡುವನು ಮಕ್ಕಳ ಜೊತೆ ಸಮಯ ಕಳೆಯುತ...!
    ಪ್ರಕೃತಿಯ ಸೊಬಗನ್ನು ಸವಿಯಲು ಬರುವ 
    ದುಂಬಿಗಳ ಸಮೂಹ
    ಅದನ್ನು ಕಂಡು ನನಗಾಯ್ತು ಸೌಂದರ್ಯ 
    ಮೋಹ..!
ಕಾರ್ಮೋಡಗಳಿಂದ ಮರೆಯಾಗುವ ಸೂರ್ಯ
ಮಳೆಹನಿಗಳು ಬರುವವು ಮಾಡಿಹೋಗಲು ತಮ್ಮ ಕಾರ್ಯ
     ಸೊಂಪಾಗಿ ಬೆಳೆಯುವ ಫಸಲು
     ಅದನ್ನು ಕಂಡು ಆನಂದದಿಂದ ತುಂಬುವವು      
     ರೈತನ ಕಂಗಳು...!
................................................. ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************    


           
ಕವನ ಬರೆಯಬೇಕೆಂಬಾಸೆ ನನ್ನಲ್ಲಿ ಮೂಡಿದೆ
ಯಾವುದರ ಬಗ್ಗೆ ಬರೆಯಲಿ ಎಂಬ ಪ್ರಶ್ನೆ 
ಕಾಡಿದೆ.....!
      ಆಗಸದಲ್ಲಿ ಹಾದುಹೋಗುವ 
      ಮೋಡಗಳ ಕಂಡು ನಾ
      ಬೆರಗಾಗಿ ಬರೆದೆ ಒಂದು ಕವನ.....!
ಬಿಳಿಯ ಮೋಡದ ಸೌಂದರ್ಯಕ್ಕೆ ನಾಚಿತು ಗಗನ
ಆದರೆ ಮಳೆ ಬರಲು ಬೇಕು ಕರಿಮೋಡದ ಆಗಮನ
  ಮೋಡಗಳ ಸೊಬಗನ್ನು ಕಣ್ತುಂಬಿಕೊಂಡೆ ನಾನು
  ಅವುಗಳ ಮೇಲೆ ಸವಾರಿ ಮಾಡುವ ಆಸೆ 
  ಈಡೇರಬಹುದೇನು....?
ಸೂರ್ಯನನ್ನೂ ಮರೆಮಾಡುವ ಶಕ್ತಿಯಿದೆ ಮೋಡಗಳಲ್ಲಿ
ಈ ವಿಸ್ಮಯವ ಕಂಡೆ ನಾ ಬಾನಲ್ಲಿ
  ನಿಧಾನವಾಗಿ ಭೂಮಿಗೆ ಇಳಿಯುತಿದೆ ಮಳೆಹನಿ
  ಅಲ್ಲೆಲ್ಲೋ ಕೇಳುತಿದೆ ಕೋಗಿಲೆಯ 
  ಸುಮಧುರ ಧ್ವನಿ
ಜಿನುಗುತಿರುವ ಮಳೆಹನಿಗಳಲ್ಲಿ ಅದೆಂಥಾ ಸೊಗಸು
ಅದನ್ನು ನೋಡುತ್ತಾ ಕಳೆದುಹೋಯ್ತು ನನ್ನೀ ಮನಸ್ಸು.....!
.............................................. ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************    



                       
ಆಕಾಶದ ತುಂಬೆಲ್ಲಾ ಮುತ್ತಿಟ್ಟಿರುವ 
ಅಗಣಿತ ತಾರೆ ಚುಕ್ಕಿಗಳೇ 
ನಿಮ್ಮಿಂದಲೇ ಚಂದಿರನಿಗೆ ಬಂದಿದೆ 
ಅದ್ಭುತ ಕಳೆ
    ಆಕಾಶಕ್ಕೆ ಏರಿ ನಿಮ್ಮನ್ನು ನೆಟ್ಟವರಾರು?
    ಮನಕೆ ಮುದ ನೀಡುವ ಬೆಳಕನ್ನು 
    ನಿಮ್ಮಲ್ಲಿ ಚೆಲ್ಲಿದವರಾರು.....!
ಅದೆಂಥಾ ಮಾಯೆ ಇದೆ ಈ ತಾರೆಗಳಲ್ಲಿ
ಬೆಳಗಾದರೆ ಅವುಗಳನ್ನು ನಾನೆಲ್ಲಿ ಕಾಣಲಿ..!
   ಚಂದ್ರನೆಂದರೆ ಅಷ್ಟೊಂದು ಇಷ್ಟವೇ ನಿಮಗೆ...!
   ಸೂರ್ಯನ ಕಂಡರೆ ಮತ್ತೇಕೆ ಹಗೆ?
ಒಂದಿಷ್ಟು ಕಾರಣವನ್ನಾದರೂ ಹೇಳಿ ಹೋಗಿ
ಅದನ್ನು ಕೇಳುತ್ತಾ ನಿದ್ರಿಸುವೆನು ನೆಮ್ಮದಿಯಾಗಿ..!
.............................................. ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************    


                      
ಎಷ್ಟೊಂದು ವೇಗವಾಗಿ ಓಡುವೆ ನೀನು
ನಿನ್ನನ್ನು ಹಿಡಿಯಲು ಸಾಧ್ಯವೇನು?
    ನೀನಿಲ್ಲದೆ ನಡೆಯದು ಮನುಷ್ಯ ಜೀವನ
    ನಿನ್ನಿಂದಲೇ ಸಾಗುತಿಹುದು 
    ಈ ಜಗವು ಅನುದಿನ
ನಾವು ಖುಷಿಯಾಗಿರುವಾಗ ಬೇಗ 
ಹೋಗುವಂತೆ ಭಾಸವಾಗುವೆ
ಅದೇ ದುಃಖದಲ್ಲಿದ್ದಾಗ ನಿಧಾನವಾಗುವೆ
    ಪ್ರತೀಕ್ಷಣವು ಚಲಿಸುತ್ತಲೇ ಇರುವೆ ನೀನು
    ಅದೇಕೆ?ನಿನಗೆ ಆಯಾಸವಾಗುವುದಿಲ್ಲವೇನು.!
ನಿನ್ನ ಹೆಸರೇ ಮೂರಕ್ಷರದ ಪದ "ಸಮಯ"
ಆದರೆ ನಿನ್ನ ಬೆಲೆಯು ಅತೀ ಅಮೂಲ್ಯ
.............................................. ದೀಪ್ತಿ ಕೆ.ಸಿ
10ನೇ ತರಗತಿ
ಕೆ.ಪಿ.ಎಸ್ ಕೆಯ್ಯೂರು
ಪುತ್ತೂರು ತಾಲೂಕು, ದಕ್ಷಿಣಕನ್ನಡ ಜಿಲ್ಲೆ
********************************************    

Ads on article

Advertise in articles 1

advertising articles 2

Advertise under the article