ಅಪ್ಪಿಯ ಆಕಾಶಯಾನ - ಕಥೆ ರಚನೆ : ಚಿರ ತನ್ಮಯಿ , 8ನೇ ತರಗತಿ
Monday, April 3, 2023
Edit
ಕಥೆ ರಚನೆ : ಚಿರ ತನ್ಮಯಿ
8ನೇ ತರಗತಿ
ಲಿಟ್ಲ್ ರಾಕ್ ಶಾಲೆ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
ಅಪರ್ಣಾ ಒಂಬತ್ತು ವರ್ಷದ ಮುದ್ದು, ಚೂಟಿ ಹುಡುಗಿ. ಮನೆಯಲ್ಲಿ ಎಲ್ಲರೂ ಆಕೆಯನ್ನ 'ಅಪ್ಪಿ' ಅಂತ ಕರೀತಿದ್ರು. ಅಪ್ಪಿಯ ಮನೆಯವರಿಗೆ ಸ್ವಲ್ಪ ಮಟ್ಟಿಗಿನ ಆರ್ಥಿಕ ಸಂಕಷ್ಟವಿತ್ತು ನಿಜ. ಆದರೆ, ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಛಾತಿಯನ್ನು ದೇವರು ಅವರಿಗೆ ಕೊಟ್ಟಿದ್ದರು. ಅಪ್ಪಿ, ಮನೆಯ ಸಮೀಪದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡ್ತಾ ಇದ್ದಳು. ಶಾಲೆಯಲ್ಲಿ ಎಲ್ಲರಿಗಿಂತ ಬುದ್ದಿವಂತೆಯೂ ಆಗಿದ್ದಳು. ಆದ್ರೆ ಆಕೆಗೆ ಒಂದೇ ಒಂದು ಬೇಜಾರಿತ್ತು. ಆಕೆಯ ನೆರೆ-ಹೊರೆಯವರು, "ಅಯ್ಯೋ! ಆ ಅಪ್ಪೀನ ನೋಡಿ! ನಮ್ಮ ಮಕ್ಳೆಲ್ಲ, ಇಂಗ್ಲಿಷ್ ಮೀಡಿಯಂ ಶಾಲೆಗೆ ಹೋಗ್ತಾ ಇದ್ರೆ, ಅವ್ಳು ಮಾತ್ರ ಆ ಸರ್ಕಾರಿ ಶಾಲೆಗೆ ಹೋಗೋದು!!" " ಪಾಪ! ಮನೇಲಿ ದುಡ್ಡಿಲ್ಲ ಅನ್ಸುತ್ತೆ, ಒಬ್ಳೇ ಹುಡ್ಗೀನ ಸರ್ಕಾರಿ ಶಾಲೆಗೆ ಕಳಿಸೋಕೆ ಅವ್ರಿಗೇನು ತಲೆ ಕೆಟ್ಟಿದ್ಯಾ?" ಅಂತ ಹೇಳುತ್ತಿದ್ರು. ಆಕೆಗೆ ಬಹಳ ದುಃಖವಾಗ್ತಾ ಇತ್ತು. ಸರ್ಕಾರಿ ಶಾಲೆಗೆ ಹೋಗೋ ಮಕ್ಕಳು, ಏನೇನೂ ಕಡಿಮೆ ಅಲ್ಲ ಅಂತ ತೋರಿಸ್ಬೇಕಿತ್ತು ಅವಳಿಗೆ. ಆಕೆ ಬೆಳೆದು ದೊಡ್ಡವಳಾದ ಮೇಲೆ ವಿಮಾನ ಚಾಲಕಿ ಆಗುವ ಕನಸು ಕಂಡಿದ್ದಳು.
ನಂತರದ ದಿನಗಳಲ್ಲಿ ಅಪ್ಪಿ ಭಾಷಣದ ಸ್ಪರ್ಧೆಯಲ್ಲಿ ಇಡೀ ತಾಲ್ಲೂಕಿಗೇ ಪ್ರಥಮಳಾಗಿದ್ದಳು. ಅದೇ ಖುಷಿಯಲ್ಲಿ ಮನೆಗೆ ಬಂದರೆ, ಬರಸಿಡಿಲಿನಂಥ ಸುದ್ದಿ ಬಂದಿತ್ತು! ಅಪ್ಪಿಯ ತಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅಪ್ಪಿ ತನಗೆ ಬಹುಮಾನವಾಗಿ ಬಂದಿದ್ದ ಹಣದಲ್ಲಿ, ತಂದೆಯ ಚಿಕಿತ್ಸೆಗೆ ಹಣ ಕಟ್ಟಿದ್ದಳು. ತಂದೆ ಗುಣಮುಖರಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಪ್ಪಿ ಬೆಂಗಳೂರಿಗೆ ಹೋದಳು. ಅಲ್ಲೂ ಆಕೆಯ ಶ್ರಮಕ್ಕೆ ಯಶಸ್ಸು ಸಿಕ್ಕಿತು. ಆಕೆ ಎಲ್ಲ ಪರೀಕ್ಷೆಗಳಲ್ಲೂ, ಒಳ್ಳೆಯ ಅಂಕ ಗಳಿಸಿದ್ದಳು. ತಂದೆ-ತಾಯಿಗೆ ಹೊರೆಯಾಗಬಾರದೆಂದು ಚಿಕ್ಕ-ಪುಟ್ಟ ಕೆಲಸ ಮಾಡಿ ಕಾಲೇಜಿನ ಶುಲ್ಕ ಪಾವತಿಸುತ್ತಿದ್ದಳು. ಅಪ್ಪಿ ಕಡೆಗೂ ತನ್ನ ಕನಸಿನ ವಿಮಾನವನ್ನು ಹಾರಿ ವಿಮಾನ ಚಾಲಕಿ ಆದಳು. ಅಪ್ಪಿಯ ಆಕಾಶಯಾನದ ಕನಸು ನನಸಾಯ್ತು.
8ನೇ ತರಗತಿ
ಲಿಟ್ಲ್ ರಾಕ್ ಶಾಲೆ
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
*******************************************