-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 7

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 7

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 7
ಲೇಖಕರು : ಪ್ರತಿಮಾ ಜಿ.ಕೆ.
ಸಹಾಯಕ ಅಧ್ಯಾಪಕಿ
ತುಂಬೆ ಆಂಗ್ಲ ಮಾಧ್ಯಮ ಶಾಲೆ, ತುಂಬೆ.
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
     
              
ವಿದ್ಯಾರ್ಥಿಗಳೆಂದರೆ........
ಚಿಗುರೆಲೆಗಳು.....
ಉತ್ಸಾಹದ ಚಿಲುಮೆಗಳು.....
ನಿಷ್ಕಲ್ಮಶ ಹೃದಯಗಳು....
ಬಣ್ಣ ಬಣ್ಣದ ಮನಸ್ಸುಗಳು.....
         ವಿದ್ಯಾರ್ಥಿಗಳೊಡನಿರುವ ಒಡನಾಟ ನಿಜವಾಗಿಯೂ ನನಗಂತೂ ಅದೊಂದು ಜೀವನದಲ್ಲಿ ಅಪೂರ್ವ ಅನುಭವ. 'ನನ್ನ ಜೀವನವೇ ಈ ವಿದ್ಯಾರ್ಥಿಗಳು' ಎನ್ನುವಷ್ಟರ ಮಟ್ಟಿಗೆ ನಾವು ಶಾಲೆಗೂ, ವಿದ್ಯಾರ್ಥಿಗಳಿಗೂ ನಮ್ಮ ಜೀವನದ ಬಹುಪಾಲು ಸಮಯವನ್ನು ವ್ಯಯಿಸಲು ಸದಾ ಸಿದ್ದರಾಗಿರುತ್ತೇವೆ. ವಿದ್ಯಾರ್ಥಿಗಳೊಂದಿಗಿನ ಕೆಲವೊಂದು ಒಡನಾಟಗಳು ಬಹಳ ಸಂತೋಷವನ್ನು, ಉತ್ಸಾಹವನ್ನು ಶಿಕ್ಷಕರಿಗೆ ನೀಡುವುದು ಸುಳ್ಳಲ್ಲ... ನಾನು 5ನೇ ತರಗತಿಯ ಅಧ್ಯಾಪಕಿ. ನನ್ನ ವಿದ್ಯಾರ್ಥಿಗಳಿಂದ ಬಹಳಷ್ಟು ಮಮತೆಯನ್ನು ಪಡೆದಿರುವೆ. ಅವರ ನಂಬಿಕೆ, ಪ್ರೀತಿ, ಮರೆಯಲಾಗದ್ದು. ಶಿಕ್ಷಕರ ದಿನದಂದು ಅವರು ಪ್ರೀತಿಯಿಂದ ತಂದುಕೊಟ್ಟ ಉಡುಗೊರೆಗಳು ಮಕ್ಕಳ ಮುಗ್ಧ ಮನಸ್ಸಿನ ಪ್ರೀತಿಯನ್ನು ಬಿಂಬಿಸುತ್ತಿದ್ದವು. ನಾನು ಯಾವಾಗಲೂ ಯೋಚಿಸುತ್ತಿರುತ್ತೇನೆ... ಮಕ್ಕಳಿಗೆ ಏತಕೆ ಗದರಿಸಬೇಕು...? ಏತಕೆ ಹೊಡೆಯಬೇಕು..?
ಅವರು ಯಂತ್ರಗಳಲ್ಲವಲ್ಲ....!! ಶಾಲೆಯು ಕಾರ್ಖಾನೆ ಅಲ್ಲವಲ್ಲ...!! ಭಾವನಾತ್ಮಕವಾದ ಬೆಸುಗೆಯು ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ತುಂಬಾ ಸಹಾಯಕವಾಗಬಲ್ಲುದು ಎಂದು ನನಗೆ ಅನಿಸುತ್ತಿತ್ತು. ಅಪ್ಪಿ ತಪ್ಪಿ ಗದರಿಸಿದಾಗ ಮಕ್ಕಳು ಅದನ್ನೆಲ್ಲಾ ಮರೆತು ಪ್ರೀತಿಯಿಂದ ಮಾತನಾಡಿಸುತ್ತಿದ್ದದ್ದು ಸೋಜಿಗವೆನಿಸುತ್ತಿತ್ತು....!
      ನಮ್ಮ ಶಾಲೆಯಲ್ಲಿ ನಮ್ಮ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರ ಸಹಕಾರದಿಂದ ಮೂಡಬಿದ್ರೆಯಲ್ಲಿ ನಡೆದ ಜಾಂಬೂರಿ ಸಾಂಸ್ಕೃತಿಕ ಉತ್ಸವಕ್ಕೆ ನನ್ನ ಹದಿಮೂರು ವಿದ್ಯಾರ್ಥಿಗಳ ತಂಡದೊಂದಿಗೆ ಭಾಗವಹಿಸಿದ್ದು ಈ ವರ್ಷದಲ್ಲಿ ನಾನು ಮರೆಯಲಾಗದ ಒಂದು ಘಟನೆಯಾಗಿತ್ತು. ಭಾರತೀಯ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಚಟುವಟಿಕೆಗಳು, ಜೀವನದಲ್ಲಿ ಎಂದೂ ನಡೆಯದೇ ಇರುವಷ್ಟು ನಡಿಗೆ, ನನ್ನ ವಿದ್ಯಾರ್ಥಿಗಳು ಕೊಟ್ಟ ಸಹಕಾರ, ಎಂದೂ ಮರೆಯಲಾಗದ ನೆನಪುಗಳು....
      ವಿದ್ಯಾರ್ಥಿಗಳು ನಿಜವಾಗಿಯೂ ದೇವರ ಸ್ವರೂಪ. ಹಸಿ ಮಣ್ಣಿನ ಪ್ರತಿಮೆಗಳು. ಇಲ್ಲಿ ರೂಪ ಕೊಡುವ ಜವಾಬ್ದಾರಿ ನನ್ನ ಪಾತ್ರ ಮಾತ್ರ ಮಹತ್ವದ್ದಾಗಿದೆ.
........................................... ಪ್ರತಿಮಾ ಜಿ.ಕೆ.
ಸಹಾಯಕ ಅಧ್ಯಾಪಕಿ,
ತುಂಬೆ ಆಂಗ್ಲ ಮಾಧ್ಯಮ ಶಾಲೆ, ತುಂಬೆ.
ಬಂಟ್ಟಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article