ಪ್ರೀತಿಯ ಪುಸ್ತಕ : ಸಂಚಿಕೆ - 55
Friday, April 21, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 55
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ... ಗೊರವಂಕಿ ಸಂಸಾರದ ಅದರ ಗೂಡಿನ ಪುಟ್ಟ ಕಥೆ ಇದು. ತನ್ನದೇ ಗೂಡು, ಗುಟುಕಿಗಾಗಿ ಬಾಯ್ತೆರೆದು ಕಾಯುತ್ತಿರುವ ತನ್ನ ಮರಿಗಳು, ಗುಟುಕು ನೀಡುತ್ತಿರುವ ತಾನು ಇರುವಂತಹ ದೊಡ್ಡ ಚಿತ್ರಪಟವೊಂದನ್ನು ಗೊರವಂಕಿ ಒಂದು ಕಡೆ ನೋಡುತ್ತದೆ. ಅದಕ್ಕೆ ‘ಇದು ಎಂಥಾ ಮಾಯಾಜಾಲ" ಅನಿಸಿಬಿಡುತ್ತದೆ. ನಂಬಲು ಸಾಧ್ಯವಾಗುತ್ತಿಲ್ಲ.. ಗೊರವಂಕಿಗೆ ಯಾಕೆ ಹೀಗಾಯಿತು? ಅದರ ಗೂಡು, ಮರಿಗಳ ಚಿತ್ರ ಹೇಗೆ ಅಲ್ಲಿಗೆ ಬಂತು? ಆ ಗೂಡಿನ ಚಿತ್ರಕ್ಕೆ ಬಹುಮಾನ ಹೇಗೆ ಬಂತು? ನಿಮಗೆ ಗೊತ್ತಾಯಿತೇ? ಹೇಗೆ ಬಂದಿರಬಹುದು ಎಂದು ಊಹೆ ಮಾಡಿ ನೋಡಿ. ಆಮೇಲೆ ಪುಸ್ತಕ ಓದಿ ನಿಮ್ಮ ಊಹೆ ಸರಿಯಾಗಿದೆಯೇ ನೋಡಿ. ನಿಮ್ಮ ಊಹೆ ಸರಿಯಾಗಿದ್ದರೆ ನಿಮಗೂ ಒಂದು ಬಹುಮಾನ ಸಿಗಬೇಕಲ್ಲವೇ? ಚಂದ ಚಂದ ಚಿತ್ರಗಳಿವೆ, ಓದಿ ಆನಂದಿಸಿ.
ಲೇಖಕರು: ನೀಲಾಂಬರಿ
ಚಿತ್ರಗಳು: ಕವಿತಾ ಸಿಂಗ್ ಕಾಳೆ
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.60/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************