![ಪ್ರೀತಿಯ ಪುಸ್ತಕ : ಸಂಚಿಕೆ - 53 ಪ್ರೀತಿಯ ಪುಸ್ತಕ : ಸಂಚಿಕೆ - 53](https://blogger.googleusercontent.com/img/b/R29vZ2xl/AVvXsEiWYF_9N0OkcQ4gyhJs01Ci2gFKwoNqjZJlHgtM5cmoZCn63tVXjPNrtxgdw1Fva30TeZj41sjbePXzW9npQk4tAmpbAIL_G3FWNH6o0vZ72-GYKYQ1k_NgM9ekkSTq0tNDddtdktqo7LM/s1600/1680916184122742-0.png)
ಪ್ರೀತಿಯ ಪುಸ್ತಕ : ಸಂಚಿಕೆ - 53
Friday, April 7, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 53
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಮುಂಜಾನೆ ಬೇಗ ಏಳುವ ಅಭ್ಯಾಸ ಯಾರಿಗೆ ಇದೆ? ಮುಂಜಾನೆ ಎದ್ದರೆ, ನೀವು ಪ್ರಕೃತಿಯ ಸೊಬಗನ್ನು ಸವಿಯಬಹುದು. ಈ ಕಥೆಯ ಪುಟ್ಟಿಗೆ ಮುಂಜಾನೆ ಬೇಗ ಎದ್ದು ಅಂಗಳ ತುಂಬಾ ಅಡ್ಡಾಡುವುದು ಬಹಳ ಖುಶಿ. ಪ್ರಕೃತಿಯಲ್ಲಿ ನಡೆವ ಏನೇನೋ ಅಂಶಗಳನ್ನು ಕಣ್ಣು ಬಿಟ್ಟು ನೋಡುತ್ತಾಳೆ; ಕೆಂಪಗೆ ಮೂಡುವ ಸೂರ್ಯ, ಮಂಜು ಮುಸುಕಿದ ಗುಡ್ಡಗಳು ಮರಗಳು.. ಎಲ್ಲವನ್ನೂ ನೋಡಿ ಖುಶಿ ಪಡುತ್ತಾಳೆ. ಜೇಡ ಬಲೆ ಹೆಣೆಯುವುದನ್ನು ನೋಡಿ ಅಚ್ಚರಿಪಡುತ್ತಾಳೆ. ನೋಡುತ್ತಿದ್ದ ಹಾಗೆಯೇ ಜೇಡರ ಬಲೆಯೊಳಗೆ ಒಂದು ಪುಟ್ಟ ಚಿಟ್ಟೆ ಸಿಕ್ಕಿ ಹಾಕಿಕೊಳ್ಳುತ್ತದೆ. ಪುಟ್ಟಿಗೆ ಈಗ ಚಿಂತೆ. ಚಿಟ್ಟೆಯನ್ನು ಜೇಡನಿಂದ ರಕ್ಷಿಸುವುದು ಹೇಗೆ, ಅಂತ. ಕಥೆಯೊಂದಿಗೆ ಹೆಣೆದುಕೊಂಡ ಸುಂದರವಾದ ಚಿತ್ರಗಳಿವೆ. ಬೇಗ ಓದಿ, ಮುಂಜಾನೆಯ ಸೊಬಗನ್ನು ಗಮನಿಸಿ. ಹಾಗೆಯೇ ಮುಂಜಾವಿನಲ್ಲಿ ಎದ್ದು ನಿಮ್ಮ ಅನುಭವಗಳನ್ನೇ ಚಿತ್ರ ಬಿಡಿಸಿ, ಕಥೆ ಬರೆಯಿರಿ.
ಲೇಖಕರು: ತಮ್ಮಣ್ಣ ಬೀಗಾರ
ಚಿತ್ರಗಳು: ನ್ಯಾನ್ಸಿ ರಾಜ್
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಬೆಲೆ: ರೂ.50/-
ಐದನೇ ಆರನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. ದೊಡ್ಡವರು ಚಿತ್ರ ತೋರಿಸುತ್ತಾ ಚಿಕ್ಕ ಮಕ್ಕಳಿಗೂ ಓದಿ ಇದನ್ನು ಹೇಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************