-->
ಸಂಚಾರಿಯ ಡೈರಿ : ಸಂಚಿಕೆ - 36

ಸಂಚಾರಿಯ ಡೈರಿ : ಸಂಚಿಕೆ - 36

ಸಂಚಾರಿಯ ಡೈರಿ : ಸಂಚಿಕೆ - 36

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

         
               ತಾಜ್‌ಮಹಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಮೊಘಲರು ಕಟ್ಟಿಸಿದ ಪ್ರೇಮ ದ್ಯೋತಕ ಬಿಳಿ ಬಣ್ಣದ ಈ ಸ್ಮಾರಕವನ್ನ ನೋಡೋದಿಕ್ಕೆ ವರ್ಷಂಪ್ರತಿ ಲಕ್ಷಾಂತರ ಜನರು ಬರುತ್ತಿರುತ್ತಾರೆ. ಆದರೆ ಭಾರತದ ದೇಶದಲ್ಲಿ ತಾಜ್‌ಮಹಲ್‌ ಅನ್ನೇ ಹೋಲುವ ಒಂದು ಸ್ಮಾರಕ ಅದೂ ಸಹ ಮೊಘಲರೇ ಕಟ್ಟಿಸಿದ್ದು ಎಂದರೆ ನಂಬಲೇಬೇಕು. ಜಗದ್ವಿಖ್ಯಾತ ತಾಜ್‌ಮಹಲ್‌ನಿಂದ 1000 ಕಿಲೋಮೀಟರ್ ದೂರದಲ್ಲಿರುವ ಔರಂಗಾಬಾದ್‌ನಲ್ಲಿ (ಈಗ ಸಂಭಾಜಿನಗರ್‌) ಇದರ ಹೆಸರು ಬೀಬಿ-ಕಾ-ಮಕ್ಬರಾ. 1660 ರಲ್ಲಿ ಔರಂಗಜೇಬ್ ತನ್ನ ಪತ್ನಿ ದಿಲ್‌ರಾಸ್‌ಗಾಗಿ ಆರಂಭಿಸಿದ ಈ ಸ್ಮಾರಕ‌ ಆತನ ಮಗ ಅಝಿಮ್ ಶಾ ಮುಂದುವರಿಸಿದ.
      ಮೊಘಲ್ ರಾಜ ಔರಂಗಜೇಬ್‌ನ ತಾಯಿಯಾದ ಮುಮ್ತಾಝ್‌ಳ ಸ್ಮಾರಕವಾದ ತಾಜ್‌ಮಹಲ್‌ ಅತ್ಯದ್ಭುತ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದರೆ, ಬೀಬಿ ಮಕ್ಬರಾ ಮಾಡೋವಾಗ ಔರಂಗಜೇಬ್ ಅಂತಹ ಗೋಜಿಗೆ ಹೋಗಿರಲಿಲ್ಲ. ಅದಾಗ್ಯೂ ಕೆಲವು ತಾಜ್‌ಮಹಲ್‌ನಂತೆ ಕೆತ್ತನೆಗಳಲ್ಲಿ ಸೂಕ್ಷ್ಮ ಜಾಲರಿಗಳು, ಗುಮ್ಮಟ, ಮಸೀದಿಗಳಿವೆ. ದೂರದಿಂದ‌ ಕಂಡಾಗ ಸಣಕಲು ತಾಜ್‌ಮಹಲ್ನಂತೆ ಕಾಣಿಸುತ್ತದೆ.
   ಬೀಬಿ ಕಾ‌ ಮಕ್ಬರಾ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿದೆ. ಇಲ್ಲಿಂದ ೨೫ ಕಿಮೀ ದೂರದಲ್ಲಿ‌ ಎಲ್ಲೋರಾ ಗುಹಾಂತರ ದೇವಾಲಯವಿದೆ. ತಾಜ್‌ಮಹಲ್ ತರಾನೇ ಇರೋ ಬೀಬಿ ಕಾ ಮಕ್ಬರಾಕ್ಕೆ ಹೋಗಿ, ಗೆಳೆಯರಿಗೆ ನಾನು ತಾಜ್ ಮಹಲ್ ಹೋಗಿದ್ದೀನಿ ಕಣೋ ಅಂತಾ ಒಂದು ಸಣ್ಣ ಚಮಕ್ ಕೊಡಿ..
......................................... ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************


Ads on article

Advertise in articles 1

advertising articles 2

Advertise under the article