ಚಿತ್ರಕಥೆ : ಸಂಚಿಕೆ - 12 : ಕೋಳಿ ಕಳ್ಳರು ಮತ್ತು ಕೋಳಿ ಸಾಕುವವ
Saturday, April 1, 2023
Edit
ಚಿತ್ರಕಥೆ : ಸಂಚಿಕೆ - 12
ನಿನಾದ್ ಕೈರಂಗಳ
5ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಒಂದು ಚಿಕ್ಕ ಹಳ್ಳಿಯಲ್ಲಿ ಕೋಳಿ ಸಾಕುವವ ಇದ್ದ. ಅವನ ಹತ್ತಿರ ಸುಮಾರು ಕೋಳಿಗಳು ಇದ್ದವು. ಅವನು ಕೋಳಿಗಳನ್ನು ಚೆನ್ನಾಗಿ ಸಾಕುತ್ತಿದ್ದನು. ಒಂದು ದಿವಸ ರಾತ್ರಿ ಕೋಳಿ ಕಳ್ಳರು ಬಂದು 10 ಕೋಳಿಗಳನ್ನು ಕದ್ದುಕೊಂಡು ಹೋದರು. ಕೋಳಿ ಸಾಕುವವನಿಗೆ ಕೋಳಿಗಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಸಂಶಯ ಬಂತು.
ಮರುದಿನ ರಾತ್ರಿ ಕೋಳಿ ಸಾಕುವವ ಕೋಳಿಯ ಗೂಡಿನ ಹತ್ತಿರ ಬಿಸ್ಕೆಟ್ ಗಳನ್ನು ಇಟ್ಟು ಅದಕ್ಕೆ ನಿದ್ದೆ ಬರುವ ಹುಡಿ ಹಾಕಿ ಹೋದನು. ರಾತ್ರಿ ಕೋಳಿ ಕಳ್ಳರು ಬಂದು ಕೋಳಿಗಳನ್ನು ಕದ್ದುಕೊಂಡು ಹೋಗುವಾಗ ಬಿಸ್ಕೆಟ್ ನೋಡಿದರು. ಅವರಿಗೆ ಜೋರು ಹಸಿವಾಗಿತ್ತು. ಅವರು ಆ ಬಿಸ್ಕೆಟ್ ಗಳನ್ನು ತಿಂದರು. ಬಿಸ್ಕೇಟ್ ತಿಂದಾಗ ಅವರಿಗೆ ಜೋರು ನಿದ್ದೆ ಬಂದು ಅಲ್ಲೇ ಮಲಗಿದರು. ಮರುದಿವಸ ಕೋಳಿ ಸಾಕುವವ ಬಂದು ನೋಡಿದಾಗ ಕಳ್ಳರು ನಿದ್ದೆ ಮಾಡುತ್ತಿದ್ದರು. ಕೋಳಿಸಾಕುವವ ಪೋಲಿಸರಿಗೆ ಫೋನ್ ಮಾಡಿದನು. ಪೋಲಿಸರು ಬಂದು ಕಳ್ಳರನ್ನು ಕೇಳಿದರು. "ಕೋಳಿಗಳನ್ನು ಎಲ್ಲಿ ಬಚ್ಚಿಟ್ಟಿದ್ದಿರಾ...?". ಕಳ್ಳರು ಕೋಳಿ ಸಾಕುವವನಿಗೆ ಎಲ್ಲಾ ಕೋಳಿಗಳನ್ನು ತಂದುಕೊಟ್ಟರು. ಕೋಳಿ ಸಾಕುವವ ಪೋಲಿಸರಿಗೆ, "ಅವರನ್ನು ಜೈಲಿಗೆ ಹಾಕಬೇಡಿ" ಎಂದು ಹೇಳಿದನು. ಪೋಲಿಸರು , "ಆಯಿತು" ಅಂತ ಹೇಳಿ ಹೋದರು.
ಕೋಳಿ ಕಳ್ಳರು ಕೋಳಿ ಸಾಕುವವನಿಗೆ, "ಇನ್ನು ಮುಂದೆ ಕಳ್ಳತನ ಮಾಡುವುದಿಲ್ಲ ನಾವಿನ್ನು ದುಡಿದು ಸಂಪಾದನೆ ಮಾಡುತ್ತೇವೆ" ಎಂದು ಮಾತು ಕೊಟ್ಟು ಧನ್ಯವಾದ ಹೇಳಿ ಹೋದರು.
5ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************