ಕವನ ರಚನೆ : ಲಾವಣ್ಯ , ಪ್ರಥಮ ಪಿಯುಸಿ
Tuesday, March 7, 2023
Edit
ಕವನ ರಚನೆ : ಲಾವಣ್ಯ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು
ಕುರ್ನಾಡು, ಮುಡಿಪು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಲಾವಣ್ಯ ಬರೆದಿರುವ ಕವನ......
ಹೇಗೆ ಪ್ರಜ್ವಲಿಸಲಿ ನಾನು ಅಸ್ಪೃಶ್ಯತೆಯ ನಾಡಿನಲ್ಲಿ..
ನೆರಳು ಸೋಕಿದರೆ ಸಾಕು ಅಶುದ್ಧವೆನ್ನುವರು
ಸೂತಕವೆನ್ನುವರು
ಯಾಕೀತರದ ಮನೋಭಾವ..
ನಾವೇನು ಮಾನವರಲ್ಲವೇ...
ನಾ ಮೇಲು ನೀ ಕೀಳು..
ನಾ ಮೇಲ್ವರ್ಗ ನೀ ಕೆಳವರ್ಗ..
ನೀ ವಿದ್ಯೆಕಲಿಯಬಾರದು..
ನಿನ್ನ ನೆರಳು ನಮಗೆ ಸೋಕಬಾರದು..
ಯಾವ ರೀತಿಯ ನ್ಯಾಯವಿದು??
ಬಹುಷಃ ಇದುವರೆಗೂ ನನಗರ್ಥವೇ
ಆಗಲಿಲ್ಲ...
ಅಶುದ್ಧ ತೆ ಇರುವುದು ಈ ಕೆಳವರ್ಗದ
ಜನರಲ್ಲಿಯೋ?
ಅಥವಾ ಮೇಲ್ವರ್ಗದ ಜನರ
ಮನೋಭಾವನೆಯಲ್ಲೋ?
ಉತ್ತರಿಸುವವರು ಮಾತ್ರ ಇಂದಿಗೂ ಮೌನಿ...
ಅಸ್ಪೃಶ್ಯತೆ ಪರಿಹಾರವಾದಂತೆ ಕಾಣಬಹುದು
ಆದರೆ ಮೇಲ್ನೋಟಕ್ಕೆ ಅದಿನ್ನೂ ಜೀವಂತ...
ಮಾನವತೆಯು ಇಂದು ಇದೆಯೋ
ಪ್ರಥಮ ಪಿಯುಸಿ
ಸರಕಾರಿ ಪದವಿಪೂರ್ವ ಕಾಲೇಜು
ಕುರ್ನಾಡು, ಮುಡಿಪು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************