-->
ಕವನ ರಚನೆ : ಕಾವ್ಯ, 8ನೇ ತರಗತಿ

ಕವನ ರಚನೆ : ಕಾವ್ಯ, 8ನೇ ತರಗತಿ

ಕವನ ರಚನೆ : ಕಾವ್ಯ 
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಳಲಿ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


            
ನೀರಿನಿಂದ ಗಿಡ ಮರ 
ಅವುಗಳಿಂದಲೇ ನಾವು 
ಪೋಲು ಮಾಡಬೇಡಿ ಮನುಜರೇ 
ನೀರನ್ನು ನೀವು
ಒಂದು ದಿನ ಬರಬಹುದು 
ನೀರಿನ ದಾಹದಿಂದ ಸಾವು
ನೀರನ್ನು ಆಂಗ್ಲ ಭಾಷೆಯಲ್ಲಿ 
ಕರೆಯುವರು ವಾಟರ್
ನೀರನ್ನು ಪೋಲು ಮಾಡುವುದರಲ್ಲಿ 
ನೀವೆಂದಿಗೂ ಆಗಬೇಡಿ ಮಾಸ್ಟರ್
ನೀರನ್ನು ಮಿತವಾಗಿ ಬಳಸಿ 
ನಾಳೆಗೆ ನೆಮ್ಮದಿಯ ಬದುಕು ಉಳಿಸಿ
................................................... ಕಾವ್ಯ
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಳಲಿ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



 ಅಪ್ಪನೆಂದರೆ ಮಕ್ಕಳಿಗೆ 
ದೇವರು ಕೊಟ್ಟ ವರ
ಅವರೇ ನಮ್ಮನ್ನು ಆಕಾಶದೆತ್ತರಕ್ಕೆ 
ಬೆಳೆಸುವ ಮರ.
ಆಕಾಶದಷ್ಟು ವಿಶಾಲ 
ಅಪ್ಪನ ಪ್ರೀತಿ
ಎಂದಿಗೂ ನೀವು ಮರೆಯಬೇಡಿ 
ಅಪ್ಪನ ನೀತಿ.
ಅಪ್ಪ ಕಲಿಸುವರು ನಮಗೆ 
ಮುಂದಿನ ಜೀವನ
ನಿಮ್ಮ ಮನದಲ್ಲಿ ಕೊಡಿ 
ಅವರಿಗೆ ಎತ್ತರದ ಸ್ಥಾನ.
ಅಪ್ಪನೆಂದರೆ ದೇವರ 
ಇನ್ನೊಂದು ರೂಪ
ಬರಿಸಬೇಡಿ ಅಪ್ಪನಿಗೆ 
ಎಂದಿಗೂ ಕೋಪ.
ಕಷ್ಟಪಟ್ಟು ಸಾಕುವರು 
ಅಪ್ಪ ನಮ್ಮನ್ನು
ತರಿಸಬೇಡಿ ಎಂದಿಗೂ ನೀವು 
ಅವರ ಕಣ್ಣಲ್ಲಿ ಕಣ್ಣೀರನ್ನು.
ನಮ್ಮ ಒಳಿತಿಗಾಗಿ ಬಯ್ಯುವವರು ಅಪ್ಪ
ಅಪ್ಪ ನಮಗೆ ಒಳಿತನ್ನು ಬಯಸುವುದು ತಪ್ಪ?
ಹುಟ್ಟಿದಾಗಲೇ ತನ್ನ ಮಕ್ಕಳಲ್ಲಿ ಕನಸನ್ನು
ಬಿತ್ತಿದವರು ತಂದೆ
ನೀವು ಎಂದಿಗೂ ಮೋಸ ಮಾಡದಿರಿ 
ಅವರಿಗೆ ಮುಂದೆ.
ಸಾಗದಿರಿ ನೀವು ಜೀವನದಲ್ಲಿ 
ಎಂದಿಗೂ ಹಿಂದೆ
ಅಪ್ಪನ ಕನಸನ್ನು ತೆಗೆದು ಹಾಕಬೇಡಿ 
ಅವರ ಕಣ್ಣ ಮುಂದೆ.
ನೀವು ಎಂದಿಗೂ ನೋಯಿಸದಿರಿ ಅಪ್ಪನ ಮನ.
ಇನ್ನೂ ಬರೆಯಲು ಪ್ರಯತ್ನಿಸುವೆ ಕವನ
................................................... ಕಾವ್ಯ
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಳಲಿ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


              
ತ್ಯಜಿಸಿ ಇಂದೇ 
ತಂಬಾಕು ಸಿಗರೇಟುಗಳನ್ನು
ಹಾಳು ಮಾಡಿದಿರಿ 
ನೀವೇ ನಿಮ್ಮ ಆರೋಗ್ಯವನ್ನು..
ಬಲಿಯಾಗಬೇಡಿ 
ತಂಬಾಕು ಸಿಗರೇಟುಗಳಿಗೆ
ಪ್ರಾಶಸ್ತ್ಯ ನೀಡಬೇಡಿ 
ಮಾದಕ ವಸ್ತುಗಳಿಗೆ
ಕಷ್ಟಪಟ್ಟು ಸಾಕುತ್ತೀರಿ 
ನಿಮ್ಮ ಕುಟುಂಬದವರನ್ನು.
ತಂಬಾಕು ಸೇವಿಸಿ ತಂದುಕೊಳ್ಳಬೇಡಿ 
ನಿಮ್ಮ ಜೀವಕ್ಕೆ ಹಾನಿಯನ್ನು...!!
ಮಾದಕ ವಸ್ತುಗಳನ್ನು ಸೇವಿಸಿದರೆ 
ಬರುತ್ತದೆ ರೋಗ
ನೀವು ಬಲಿಯಾಗಬೇಡಿ 
ರೋಗಕ್ಕೆ ಇಷ್ಟು ಬೇಗ...!!
ತಂಬಾಕು ಬರಿಸುತ್ತದೆ 
ಕ್ಯಾನ್ಸರ್ ಎಂಬ ಮಹಾ ರೋಗ
ಒಂದು ದಿನ ನೋಡಬೇಕಾಗುತ್ತದೆ 
ನಿಮ್ಮ ಕುಟುಂಬದವರ ಕಣ್ಣೀರ ರಾಗ....!!
ತಂಬಾಕು ಎಂಬ ವಿಷಪ್ರಾಶನ ನಮ್ಮ ದೇಹಕ್ಕೆ
ಕರೆದೊಯ್ಯುತ್ತದೆ ಅದು 
ನಮ್ಮನ್ನು ಸರ್ವನಾಶಕ್ಕೆ....!!
ತ್ಯಜಿಸಿ ಮನುಜರೇ ಇಂದೇ
ತಂಬಾಕು ಸಿಗರೇಟುಗಳನ್ನು
ಹಾಳು ಮಾಡದಿರಿ ನೀವೇ 
ನಿಮ್ಮ ಆರೋಗ್ಯವನ್ನು...!!
................................................... ಕಾವ್ಯ
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಳಲಿ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************


  
ಮರವನ್ನು ನೀ ಕಡಿಯದಿರು ಮನುಜ
ಕಡಿದರೆ ಆಮ್ಲಜನಕ ಇಲ್ಲದೆ 
ಬಳಲುವುದು ಈ ಸಮಾಜ....!
ತೊರೆದು ಬಿಡು ನಿನ್ನ ಸ್ವಾರ್ಥವ 
ಪ್ರೀತಿಸು ಸುತ್ತಲಿನ ಮರಗಿಡವ
ನಿನಗೆ ನೆರಳು ನೀಡುವ ಮರಗಳಿಗೆ
ಕೊಡುವೆಯಾ ಏಟು ಅದರೆದೆಗೆ
ಪಕ್ಷಿಗಳ ವಾಸ ಮರದಲ್ಲಿ 
ಕಡಿದರೆ ಅವು ಹೋಗುವುದು ಎಲ್ಲಿ?
ಎಲ್ಲೆಂದರಲ್ಲಿ ಕಾರ್ಖಾನೆಯ ಹೊಗೆಯ
ಮರಗಳೇ ಹೊತ್ತಿವೆ ನಿನ್ನ ರಕ್ಷಣೆಯ 
ಮನುಜ ಪರಿವಾರವೇ....
ಗಿಡ ಮರಗಳ ಪ್ರೀತಿಸಿ ನೋಡು
ಪ್ರತಿದಿನ ಆರೋಗದ ಹಾಡು
ಕಡಿಯಬೇಡ ಮರಗಳ ಓ ಮನುಜ 
ಕಡಿದರೆ ಆಮ್ಲಜನಕ ಇಲ್ಲದೆ 
ಬಳಲುವುದು ಈ ಸಮಾಜ
................................................... ಕಾವ್ಯ
8ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಳಲಿ 
ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article