-->
ಕವನ ರಚನೆ : ಅನ್ಶಿಕಾ ಅಶ್ವಥ್ ಹೆಗಡೆ, 5ನೇ ತರಗತಿ

ಕವನ ರಚನೆ : ಅನ್ಶಿಕಾ ಅಶ್ವಥ್ ಹೆಗಡೆ, 5ನೇ ತರಗತಿ

ಕವನ ರಚನೆ : ಅನ್ಶಿಕಾ ಅಶ್ವಥ್ ಹೆಗಡೆ 
5 ನೇ ತರಗತಿ
ಲಯನ್ಸ್ ಶಾಲೆ , ಲಯನ್ಸ್ ನಗರ 
ಶಿರಸಿ, ಉತ್ತರ ಕನ್ನಡ 
              
ಅಪ್ಪ ಅಪ್ಪ ನನ್ನಯ ಮುದ್ದಿನ ಅಪ್ಪ
ಸುಂದರ ಜಗಕೆ ಕರೆತಂದೆ ನನ್ನನು ನನ್ನಪ್ಪ  
ಮುದ್ದು ಮಾಡುತ ಕಣ್ಣೀರನು ಒರೆಸುವೆ
ನೀ ಜೊತೆಗಿರಲು ನಾನು ಜಗವನೆ ಗೆಲ್ಲುವೆ//
     ಆಟಿಕೆ ಕೊಡಿಸುವೆ ಬಟ್ಟೆಯ ಹೊಲಿಸುವೆ  
     ವಿದ್ಯೆಯ ಕಲಿಯಲು ಪ್ರೇರಣೆ ನೀನಾಗಿರುವೆ
     ಏಳು ಬೀಳಿನ ಪಾಠವ ಅರ್ಥ ಮಾಡಿಸುತ  
     ಬಾಳಲಿ ಮುಂದೆ ಸಾಗುವುದ ತೋರುತ//
ದಣಿದು ಬಂದರು ಮುಖದಲಿ ನಗುವಿದೆ  
ನಿನ್ನ ಬೆವರ ಹನಿಗಳಿಗೆ ನಾ ಶರಣಾದೆ
ಶಿಸ್ತನು ಕಲಿಸುವೆ ಛಲವ ಬೆಳೆಸುವೆ  
ಸೋತಾಗ ಬೆನ್ತಟ್ಟಿ ಸಾಧನೆ ಮಾರ್ಗ ತೋರುವೆ//
    ನನ್ನಪ್ಪ ಅಂದರೆ ನನಗೆ ತುಂಬಾ ಇಷ್ಟ
    ಸಂಸ್ಕಾರ ಮೌಲ್ಯಗಳ ಕಲಿಸಿರುವೆ ಸಾಕಷ್ಟ
    ಕಣ್ಣೆದುರಿರುವ ದೇವರು ನಮಗೆ ನೀನಪ್ಪ
  ಒಂದು ಜನ್ಮ ನಿನ್ನ ಋಣ ತೀರಿಸಲು ಸಾಲದಪ್ಪ//          .............................. ಅನ್ಶಿಕಾ ಅಶ್ವಥ್ ಹೆಗಡೆ 
5ನೇ ತರಗತಿ
ಲಯನ್ಸ್ ಶಾಲೆ , ಲಯನ್ಸ್ ನಗರ 
ಶಿರಸಿ, ಉತ್ತರ ಕನ್ನಡ 
*******************************************

Ads on article

Advertise in articles 1

advertising articles 2

Advertise under the article