-->
ಕೌಶೀಲ, 10ನೇ ತರಗತಿ - ಬರೆದಿರುವ ಕವನಗಳು

ಕೌಶೀಲ, 10ನೇ ತರಗತಿ - ಬರೆದಿರುವ ಕವನಗಳು

ಕವನ ರಚನೆ : ಕೌಶೀಲ
10ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರ್ಶಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                        
ಜಾತಿ ಮತದ ಭೇದ ಬೇಡ 
ಗೊಂದಲಗಳ ಗೂಡು ಬೇಡ 
ಕಲಹ ಕೊಲೆಯ ಮಾತು ಬೇಡ 
ನಾವು ಮಾನವೀಯರು.  
      ಅವನ ಬಡಿದು ಇವನ ಹೊಡೆದು 
      ಬದುಕೋ ಬದುಕು ನಮಗೆ ಬೇಡ
      ದ್ವೇಷದಿಂದ ಸೊರಗಬೇಡ
      ನಾವು ಮಾನವೀಯರು.  
ಬುರ್ಖಾ ಬೇಡ ತುರ್ಕ ಬೇಡ 
ದಾಡಿ ಬೇಡ ನಾಮ ಬೇಡ 
ಎಂಬ ರೋಷದ ಮಾತು ಬೇಡ 
ನಾವು ಮಾನವೀಯರು.  
      ಮೂರು ದಿನದ ಬದುಕಿನಲ್ಲಿ  
      ನಲಿದು ನಲಿದು ಬಾಳೋಣ
      ನನಗೆ ನೀನು ನಿನಗೆ ನಾನು 
      ಕೂಡಿ ಬದುಕಲು ಕಲಿಯೋಣ  
ದ್ವೇಷವನ್ನು ಅಳಿಸಿ ನಾವು 
ಶಾಂತಿಯ ತೋಟ ಬೆಳೆಸೋಣ 
ಜೊತೆಗೆ ಕೂಡಿ ಬೆಳೆದು ನಾವು 
ಪ್ರೀತಿಯ ದೇಶವ ಕಟ್ಟೋಣ... 
.............................................. ಕೌಶೀಲ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ನಾರ್ಶಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
      

ಎಷ್ಟು ಚಂದ ಅರಳಿತ್ತು
ಹುಲುಸಾಗಿ ಬೆಳೆದು ನಳನಳಿಸಿತ್ತು
ಶಾಲೆಯಂಗಳದ ಚೆರ್ರಿ ಮರ
     ಕಲ್ಲೆಸದವರಿಗೆ ಹಣ್ಣು
     ಬಳಿ ಬಂದವರಿಗೆ ನೆರಳು ನೀಡಿತ್ತು
     ಬಿರು ಬೇಸಗೆಯ ಬಿಸಿಲನ್ನು
     ತಂಪು ಮಾಡುವ ಕಲೆ     
     ಸಿದ್ದಿಸಿಕೊಂಡಿತ್ತು
     ಶಾಲೆಯಂಗಳದ ಚೆರ್ರಿ ಮರ
ನೋಡುಗರ ಕಣ್ಣಿಗೆ ಹಬ್ಬ
ಹಸಿರ ಗೋಪುರದಂತೆ ಹಬ್ಬಿತ್ತು
ಎಲ್ಲರ ಹೃದಯವನ್ನು ಹತ್ತಿರ ಮಾಡಿಕೊಳ್ಳುವ ಶಕ್ತಿ
ನೂರಾರು ಪಕ್ಷಿ ಸಂಕುಲಗಳ ಮುದ್ದಿಸಿಕೊಂಡಿತ್ತು ಶಾಲೆಯಂಗಳದ ಚೆರ್ರಿ ಮರ
     ಅದೇ ಜಾಗದಲ್ಲಿ ಈಗ
     ಬೋಳು ಆಕಾಶ
     ಉರುಳಿದ ಮರದ ಶೂನ್ಯ ಭಾವ
     ಮತ್ತೆ ಮತ್ತೆ ಕಾಡುತ್ತಿದೆ
     ಶಾಲೆಯಂಗಳದ ಚೆರ್ರಿ ಮರ
.............................................. ಕೌಶೀಲ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ನಾರ್ಶಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article