ಪ್ರೀತಿಯ ಪುಸ್ತಕ : ಸಂಚಿಕೆ - 47
Friday, February 24, 2023
Edit
ಪ್ರೀತಿಯ ಪುಸ್ತಕ
ಸಂಚಿಕೆ - 47
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... ಈ ಪುಸ್ತಕದಲ್ಲಿ ಓದಿಗಿಂತಲೂ ಹೆಚ್ಚು ಚಿತ್ರಗಳು ಇವೆ. ಕಣ್ಣು ತುಂಬಾ ಚಿತ್ರಗಳನ್ನು ನೋಡಿಯೂ ಆನಂದಿಸಬಹುದು. ಆಮೇಲೆ ನಿಧಾನವಾಗಿ ಓದಿಕೊಳ್ಳಬಹುದು. ಹಕ್ಕಿ ಪ್ರಪಂಚದ ಒಂದು ಸಣ್ಣ ಚಿತ್ರಣವನ್ನು ಇದರಲ್ಲಿ ಕಾಣಬಹುದು. ಹೆಣ್ಣು ಗಂಡು ಪಕ್ಷಿಗಳು ಹೇಗೆ ಜೊತೆ ಸೇರಿ ಕೆಲಸ ಮಾಡುತ್ತವೆ ಎಂಬುದನ್ನೂ ಗಮನಿಸಬಹುದು. ಈ ಪುಸ್ತಕದ ಹೆಸರು ಹೇಳುವಂತೆಯೇ, ಮಂಗಟ್ಟೆ ಹಕ್ಕಿ ಹೇಗೆ ಹಾರಲು ಕಲಿಯಿತು ಎಂಬುದನ್ನು ನೋಡಬಹುದು. ಮರಿ ಮಂಗಟ್ಟೆ ಹಕ್ಕಿಯ ಸಾಹಸ ಆಸಕ್ತಿದಾಯಕವಾಗಿದೆ. ಹೊಸ ಹೊಸ ಕೆಲಸ ಕಲಿಯುವುದು ಮಕ್ಕಳಿಗೂ ಖುಶಿ ಅಲ್ಲವೇ? ಇಂತಹ ಪುಸ್ತಕಗಳನ್ನು ಓದುವಾಗ, ನೀವು ಕೂಡಾ ಚಿತ್ರಕಥೆಗಳನ್ನು ಬರೆಯುವ ಪ್ರಯತ್ನ ಮಾಡಬಹುದು. ಓದಿ ನೋಡುವಿರಲ್ಲವೇ?
ಲೇಖಕರು: ದಿಲೀಪ್ ಕುಮಾರ್ ಬರುವಾ
ಅನುವಾದ: ಶಿರಗಾನ ಹಳ್ಳಿ ಶಾಂತ ನಾಯ್ಕ
ಚಿತ್ರಗಳು: ಪಾರ್ಥ ಸೆನ್ ಗುಪ್ತಾ
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ (ಈ ಪ್ರಕಾಶಕರ ಪುಸ್ತಕಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕಿಸಬಹುದು – ಮೋಹನ – 9980181718)
ಬೆಲೆ: ರೂ = 30.00
ಮೂರು, ನಾಲ್ಕನೆಯ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************