ಕಲಿಕಾ ಹಬ್ಬ : ಮಕ್ಕಳ ಅನಿಸಿಕೆ - 4
Saturday, February 11, 2023
Edit
ಕಲಿಕಾ ಹಬ್ಬ : ಮಕ್ಕಳ ಅನಿಸಿಕೆ - 4
ರಾಜ್ಯದ ಎಲ್ಲಾ ಕ್ಲಸ್ಟರ್ ಗಳಲ್ಲಿ 'ಕಲಿಕಾ ಹಬ್ಬ' ದ ಸಂಭ್ರಮ ನಡೀತಾ ಇದೆ.... ಇಲ್ಲಿ ಭಾಗವಹಿಸಿರುವ ಶ್ರುತಿಕಾ, 6ನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ....
ದಿನಾಂಕ 24/1/2023ರಂದು ಸೂರ್ಯ ಪ್ರೌಡಶಾಲೆ ಯಲ್ಲಿ ನಡೆದ ಕಲಿಕಾ ಹಬ್ಬವು ನನಗೆ ಖುಷಿ ನೀಡಿದೆ. ಅಂತಹ ಖುಷಿ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ನಮ್ಮ ಓಜಾಲ ಶಾಲೆಯಿಂದ ಕಲಿಕಾ ಹಬ್ಬಕ್ಕೆ 18 ವಿದ್ಯಾರ್ಥಿಗಳು ಹೊರಟೆವು. ನಮಗೆಲ್ಲರಿಗೂ ಕಲಿಕಾ ಹಬ್ಬಕ್ಕೆ ಹೋಗುತ್ತಿದ್ದೇವೆ ಎಂದು ಬಹಳ ಸಂಭ್ರಮ. ನಮ್ಮ ಶಾಲಾ ವಾಹನದಲ್ಲೇ ಹೋದೆವು. ಅಂತೂ ಇಂತೂ ಸೂರ್ಯ ಶಾಲೆಗೆ ತಲುಪಿದೆವು. ನಾವು ಅಲ್ಲಿಗೆ ತಲುಪುವುದು ನಮ್ಮ ಶಿಕ್ಷಕಿಯಾದ ಜೆಸಿಂತಾ ಟೀಚರ್ ಅಲ್ಲಿಗೆ ತಲುಪ್ಪಿದ್ದು ಒಂದೇ ಸಮಯ. ನಂತರ ಅಲ್ಲಿ ನಮಗೆ ವಿಲ್ಮಾ ಟೀಚರ್ ಕೂಡ ಸಿಕ್ಕಿದರು. ಆ ನಂತರ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಲ್ನಲ್ಲಿ ಸೇರಿದೆವು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಲಿಕಾ ಹಬ್ಬದ ಹಾಡು ಹಾಡಿದ ನಂತರ ನಮಗೆ ಟೋಪಿ ಮಾಡುವುದನ್ನು ಕಲಿಸಿದರು. ಸುಂದರವಾದ ಟೋಪಿ ತಯಾರಾದ ನಂತರ ನಾವು ಉಪಹಾರ ಸೇವಿಸಲು ಹೋದೆವು. ಉಪಹಾರ ಸೇವಿಸದ ನಂತರ ಮತ್ತೆ ಹಾಲ್ನಲ್ಲಿ ಸೇರಿದೆವು. ಅಲ್ಲಿ ನಮ್ಮನ್ನು 2 ತಂಡಗಳಾಗಿ ವಿಂಗಡಿಸಿದರು. ನಮ್ಮದು 2ನೆಯ ತಂಡವಾದ ಪ್ರಜ್ಞೆ. ಮೊದಲನೆಯ ತಂಡವು ಕತ್ತರಿ ಕಾಗದ ಕಾರ್ನಾರ್ಗೆ ಹಾಗೆಯೇ ನಮ್ಮ ತಂಡ ಮಾಡು -ಆಡು ಕಾರ್ನರ್ಗೆ ಹೋದೆವು. ನಮಗೆ ಅಲ್ಲಿ ತುಂಬಾ ವಿಧದ ಕ್ರಾಫ್ಟ್ ಗಳನ್ನು ಕಲಿಸಿಕೊಟ್ಟರು.
ಮಧ್ಯಾಹ್ನ ರುಚಿಯಾದ ಭೋಜನದ ನಂತರ ಮತ್ತೆ ಹಾಲ್ನಲ್ಲಿ ಸೇರಿ ಕೆಲವೊಂದು ಹಾಡುಗಳನ್ನು ಹಾಡಿ ಹಾಡು - ಆಡು ಕಾರ್ನರ್ ಗೆ ಹೋದೆವು. ಅಲ್ಲಿ ತುಂಬಾ ಬಗೆಯ ಆಟಗಳನ್ನು ಆಡಿದ ನಂತರ ಮನೆಗೆ ಮರಳಿದೆವು. ಮರುದಿನ ಮತ್ತೆ ಸೂರ್ಯ ಶಾಲೆಗೆ ಬಂದೆವು. ಹಿಂದಿನ ದಿನದ ಹಾಗೆ ಹಾಲ್ನಲ್ಲಿ ಸೇರಿ ಹಾಡುಗಳನ್ನು ಹಾಡಿದ ನಂತರ ಉಪಹಾರ ಸೇವಿಸಿದೆವು.
ಹಿಂದಿನ ದಿನದ ತಂಡದಲ್ಲೇ ಊರು ತಿಳಿಯೋಣ ಕಾರ್ನರ್ ಗೆ ಹೋದೆವು. ಅಲ್ಲಿ ಪೆಟ್ರೋಲ್ ಪಂಪ್ ಅಕೌಂಟೆಂಟ್ ಅವರ ಸಂದರ್ಶನ ಪಡೆದು ಚಾರ್ಟ್ ತಯಾರಿಸಿದೆವು. ಮಧ್ಯಾಹ್ನದ ಭೋಜನದ ನಂತರ ಕತ್ತರಿ ಕಾಗದ ಕಾರ್ನರ್ ಗೆ ಹೋದೆವು. ಅಲ್ಲಿ ಕೆಲವೊಂದು ಕ್ರಾಫ್ಟ್ ಗಳನ್ನು ಕಲಿತೆವು. ನಾವು ಮಾಡಿದ ಒಂದೊಂದು ಕ್ರಾಫ್ಟ್ ಗಳನ್ನು ಹಿಡಿದು ಒಟ್ಟಿಗೆ ಫೋಟೋ ಕ್ಲಿಕ್ಕಿಸಿದೆವು. ನಂತರ ಶಿಕ್ಷಕರು ಎಲ್ಲರಿಗೂ ಶುಭ ಹಾರೈಸಿದರು. ಅಲ್ಲಿಗೆ ಕಲಿಕಾ ಹಬ್ಬವು ಮುಕ್ತಾಯಗೊಂಡಿತು. ನಮ್ಮ ಪಯಣ ಶಾಲೆಯ ಕಡೆಗೆ ಸಾಗಿತು.
6 ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಓಜಾಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************