
ರಾಜುವಿನ ಬೆಕ್ಕು - ಕಥೆ
Monday, January 23, 2023
Edit
ಕಥೆ ರಚನೆ : ಆತ್ಮಿಕ ಪದ್ಯಾಣ
2ನೇ ತರಗತಿ
ದ.ಕ. ಜಿ.ಪಂ.ಹಿ. ಪ್ರಾಥಮಿಕ ಶಾಲೆ
ಚೆನ್ನೈತೋಡಿ ವಾಮದಪದವು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಒಂದು ಊರಿನಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ರಾಜು. ಅವನಿಗೆ ಬೆಕ್ಕು ಎಂದರೆ ಬಹಳ ಇಷ್ಟ. ಅದಕ್ಕೆ ಅವನಿಗೆ ಒಂದು ಬೆಕ್ಕು ಬೇಕು ಅಂತ ಆಸೆ ಆಗಿ ಅಜ್ಜನ ಮನೆಗೆ ಹೋದನು. ಅಜ್ಜನ ಬಳಿಗೆ ಹೋಗಿ ಅವನು, "ಬೆಕ್ಕು ಬೇಕು" ಎಂದು ಕೇಳಿದನು. ಇಲ್ಲಿ ಒಂದು ದೊಡ್ಡ ಬೆಕ್ಕು, ಇನ್ನೊಂದು ಚಿಕ್ಕ ಮರಿ ಬೆಕ್ಕು ಇದೆ ಎಂದು ಅಜ್ಜ ಹೇಳಿದರು.
ದೊಡ್ಡ ಬೆಕ್ಕಾದರೆ ಗೋಣಿ ಕಂಡಾಗ ಹೆದರುತ್ತದೆ. ಅದಕ್ಕೆ ಅದು ಗೋಣಿಯ ಬಳಿ ಬರಲಿಲ್ಲ. ಅದಕ್ಕೆ ಅವನು ಚಿಕ್ಕ ಬೆಕ್ಕನ್ನು ಗೋಣಿಗೆ ಹಾಕಿದನು. ಅಜ್ಜ ಬೆಕ್ಕಿಗೆ ಗಾಳಿ ಹೋಗಲೆಂದು ಗೋಣಿಗೆ ಚೂರಿಯಲ್ಲಿ ತೂತು ಮಾಡಿದರು. ನಂತರ ಅವನು ಖುಷಿಯಿಂದ ಬಳ್ಳಿ ಕಟ್ಟಿ ಕರೆದುಕೊಂಡು ಹೋದನು. ಅವನಿಗೆ ದಾರಿಯಲ್ಲಿ ಹೋಗುವಾಗ ಬೆಕ್ಕಿಗೆ ಹಸಿವಾಗಬಹುದೆಂದು ಚಿಂತೆಯಾಯಿತು. ಹುಡುಗನಿಗೆ ಅಳು ಬಂತು. ಅಂತೂ ಹುಡುಗ ಬೆಕ್ಕಿನೊಂದಿಗೆ ಮನೆ ತಲುಪಿದ. ಅವನು ಅದಕ್ಕೆ ತಿಂಡಿ ಹಾಗೂ ಹಾಲನ್ನು ಹಾಕಿ ಓಡಾಡಲೆಂದು ಅಂಗಳಕ್ಕೆ ಬಿಟ್ಟನು.
ಸಂಜೆಯ ಹೊತ್ತು ಬೆಕ್ಕು ಪೊದೆಯೊಳಗೆ ಓಡಿ ಹೋಗಿ ಕಾಣೆಯಾಯಿತು. ಹುಡುಗನಿಗೆ ಮತ್ತೆ ಅಳು ಬಂತು. ಮರುದಿನ ಬೆಳಗ್ಗೆ ಸುತ್ತಮುತ್ತಲಿನ ಮನೆಗಳಿಗೆ ಹೋಗಿ ಬೆಕ್ಕಿನ ಮರಿ ಬಂದಿದೆಯೇ ಎಂದು ಕೇಳಿದನು. ಆದರೆ ಎಲ್ಲಿಯೂ ಸಿಗಲಿಲ್ಲ. ಆ ಹೊತ್ತಿಗೆ ಹತ್ತಿರದ ಭಟ್ಟರ ಮನೆಯಲ್ಲಿ ಬೆಕ್ಕು ಬಂದಿದಾ ಎಂದು ಕೇಳವ ಅಂತ ಅವನ ಅಮ್ಮನಲ್ಲಿ ಹೇಳಿದನು. ಅದಕ್ಕೆ ಬೆಕ್ಕು ಬರಬಹುದು ಎಂದು ಅಮ್ಮ ಹೇಳಿದರು. ಸಂಜೆ ಹೊತ್ತಿಗೆ ಪುನಃ ಬೆಕ್ಕನ್ನು ಹುಡುಕಲೆಂದು ಹೊರಟಾಗ ಅದೇ ದಾರಿಯಲ್ಲಿ ಬೆಕ್ಕಿನ "ಮಿಯಾಂ ಮಿಯಾಂ" ಎಂಬ ಕೂಗು ಅವನ ಅಮ್ಮನಿಗೆ ಕೇಳಿತು. ಬೆಕ್ಕು ಅಲ್ಲಿ ಕುಳಿತು ಕೂಗುತ್ತಿದೆ ಎಂದು ಅಮ್ಮ ರಾಜುವಿನಲ್ಲಿ ಹೇಳಿದಾಗ ಅವನು ಆಶ್ಚರ್ಯದಿಂದ, ಖುಷಿಯಿಂದ ಪೊದೆಗಳ ನಡುವೆ ಇದ್ದ ಬೆಕ್ಕಿನ ಮರಿಯನ್ನು ಹಿಡಿದು ತಂದನು. ಬೆಕ್ಕನ್ನು ತರುವ ಅವಸರದಲ್ಲಿ ರಾಜುವಿನ ಕಾಲಿಗೆ ಗಾಯವಾಯಿತು. ಆದರೂ ಬೆಕ್ಕು ಸಿಕ್ಕಿದ ಖುಷಿಯಲ್ಲಿ ಗಾಯದ ನೋವು ಮರೆಯಾಯಿತು. ಆ ನಂತರ ಖುಷಿಯಿಂದ ಅವನು ಬೆಕ್ಕಿನೊಡನೆ ಆಟವಾಡಿದನು.
2ನೇ ತರಗತಿ
ದ.ಕ. ಜಿ.ಪಂ.ಹಿ. ಪ್ರಾಥಮಿಕ ಶಾಲೆ
ಚೆನ್ನೈತೋಡಿ ವಾಮದಪದವು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************