-->
ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022 : ತೀರ್ಪುಗಾರರ ಅನಿಸಿಕೆಗಳು

ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022 : ತೀರ್ಪುಗಾರರ ಅನಿಸಿಕೆಗಳು

ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022 : ತೀರ್ಪುಗಾರರ ಅನಿಸಿಕೆಗಳು

         ಆತ್ಮೀಯ ಜಗಲಿಯ ಎಲ್ಲಾ ಓದುಗರೆ.... ಮಕ್ಕಳ ಜಗಲಿ ಬಳಗದಿಂದ ಆಯೋಜಿಸಲಾಗಿರುವ ಎರಡನೇ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ದೇಶಾದ್ಯಂತ ಪ್ರೀತಿಯ ಸ್ಪಂದನೆ ಸಿಕ್ಕಿದೆ. ಸುಮಾರು 5,000 ದಷ್ಟು ಕಲಾಕೃತಿಗಳು ಸ್ಪರ್ಧೆಗೆ ಪಾಲು ಪಡೆದಿವೆ. ಕರ್ನಾಟಕದ ನಾನಾ ಜಿಲ್ಲೆಗಳಿಂದ ಹಾಗೂ ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯ. ಆತ್ಮೀಯ ಮಕ್ಕಳು ಎಲ್ಲಾ ಆಯಾಮಗಳನ್ನು ಸಂತೋಷವಾಗಿ ಸ್ವೀಕರಿಸುವಿರಿ ಎಂಬುದು ನಮ್ಮ ನಂಬಿಕೆ... ತಾರಾನಾಥ್ ಕೈರಂಗಳ

          ಮಕ್ಕಳ ಶಿಕ್ಷಣದಲ್ಲಿ ಚಿತ್ರಕಲೆಯ ಮಹತ್ವ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಚಿತ್ರಕಲೆ ಒಂದು ವಿಶ್ವ ಭಾಷೆಯಾಗಿದೆ. ವಿದ್ಯಾರ್ಥಿಗಳಿಗೆ ಚಿತ್ರಕಲೆ ಒಂದು ಉಪಯೋಗವಾಗುವ ಸಾಧನವಾಗಬೇಕು. 
    "ಬಲ್ಲವನೆ ಬಲ್ಲ ಬೆಲ್ಲದ ರುಚಿಯ" ಎನ್ನುವ ಗಾದೆ ಮಾತಿನ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೆ ಗೊತ್ತು. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಪೂರ್ವಾನುಭವಗಳ ಆಧಾರಗಳಿಂದ ಕಲೆಯ ಒಂದಂಶವನ್ನು ಸ್ಪರ್ಶಿಸಿ ಚಿತ್ರಕಲೆಯನ್ನು ಕಲಿಯುವ ಹವ್ಯಾಸವಾಗಿ ಬೆಳೆಸುವ ಪ್ರಯತ್ನವನ್ನು ಮಾಡಿದ್ದೀರಿ. ಇದು ತುಂಬಾ ಸಂತೋಷದ ವಿಷಯ. 
      ಪ್ರತಿಯೊಬ್ಬ ಮಗು ಒಬ್ಬ ಶ್ರೇಷ್ಠ ಕಲಾವಿದ. ಚಿತ್ರಗಳು ಮಕ್ಕಳ ಭಾಷೆ ಅನ್ನುವ ಹಾಗೆ ಈ ಚಿತ್ರಗಳನ್ನು ನೋಡಿದಾಗ ನನಗೆ ಅನಿಸಿತು , ಎಲ್ಲಾ ವಿದ್ಯಾರ್ಥಿಗಳು ರಚನಾ ಸಾಮರ್ಥ್ಯದ ಬೆಳವಣಿಗೆ, ಭಾವಾಭಿವ್ಯಕ್ತಿ, ಕಲ್ಪನಾ ಶಕ್ತಿ, ವರ್ಣಮಯ ಕ್ರಿಯೆಗಳನ್ನು ಬಳಸಿಕೊಂಡು ಭಾವನೆಗಳ ಸ್ವರೂಪವನ್ನು ಸೃಷ್ಟಿಸಿರುವ ಎಲ್ಲಾ ಚಿತ್ರಗಳು ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮಶಕ್ತಿ ಹೆಚ್ಚಿಸುವ ಶಕ್ತಿ ಈ ಚಿತ್ರಕಲೆಗಿದೆ. ಮಕ್ಕಳಲ್ಲಿ ಏನೆಲ್ಲ ಕ್ರಿಯಾಶೀಲತೆ ತುಂಬಬಹುದು ಎನ್ನುವುದಕ್ಕೆ ಇಲ್ಲಿ ರಚಿತವಾಗಿರುವ ಕಲಾಕೃತಿಗಳೇ ಸಾಕ್ಷಿ. ಎಲ್ಲಾ ಚಿತ್ರಗಳು ಅಮೂಲ್ಯವಾದದು ಮತ್ತು ಮಕ್ಕಳ ಪರಿಶುದ್ಧವಾದ ಚಿತ್ರಕಲೆ ಎನ್ನಬಹುದು.
       ನಮ್ಮ ಕಲೆ ಮತ್ತು ಸಾಮರ್ಥ್ಯಕ್ಕೆ ಪ್ರಶಸ್ತಿ ಗೌರವಗಳು ಪ್ರಮುಖ ಮಾನದಂಡವಲ್ಲ. ನಮ್ಮಲ್ಲಿ ಬದ್ಧತೆ, ಏಕಾಗ್ರತೆ, ಛಲವನ್ನು ಮೈಗೂಡಿಸಿಕೊಳ್ಳಬೇಕು. ಸಾಧಿಸುವ ಹಠವಿರಬೇಕು. ಎಲ್ಲರ ಹೊಗಳಿಕೆಯ ಮಾತುಗಳೇ ನಮಗೆ ಪ್ರಶಸ್ತಿ. 
....................................... ಕೆ ಟಿ ನಾಗರಾಜ್
PRINCIPAL 
MAHALASA COLLEGE OF VISUAL ARTS , MANGALORE 
Mob ; +91 99450 69973
*******************************************


      "ಮಕ್ಕಳ ಜಗಲಿ" ಮಕ್ಕಳಿಗಾಗಿ ಮೀಸಲಾದ ಈ ಪತ್ರಿಕೆ ಯನ್ನು ಪ್ರಾರಂಭಿಸಿ ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನ ನಡೆಸುತ್ತಿರುವ ಕಲಾವಿದರು, ಚಿತ್ರಕಲಾ ಶಿಕ್ಷಕರು ಆಗಿರುವ ಶ್ರೀ ತಾರಾನಾಥ್ ಕೈರಂಗಳ್ ಇವರ ಕೆಲಸ ಶ್ಲಾಘನೀಯ,
    ಮಕ್ಕಳಲ್ಲಿ ಇರುವ ಸೃಜನಶೀಲತೆ, ಕಲಾ ಕೌಶಲ್ಯ ವನ್ನು ಬೆಳೆಸಲು ಮಕ್ಕಳ ಜಗಲಿ ಆನ್ ಲೈನ್ ಪತ್ರಿಕೆ ಒಂದು ಒಳ್ಳೆಯ ವೇದಿಕೆಯಾಗಿದೆ.
     ಚಿತ್ರಕಲಾ ಸ್ಪರ್ಧೆ: ಮಕ್ಕಳ ಜಗಲಿಯ ಮೂಲಕ ಏರ್ಪಡಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದು ನನಗೆ ಸಂತೋಷದ ವಿಷಯವಾಗಿದೆ. ಕಾರಣ ಇಷ್ಟೇ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಿಂದ ವಿದ್ಯಾರ್ಥಿಗಳು ಸ್ಪರ್ಧೆಗಾಗಿ ಕಲಾಕೃತಿ ಕಳಿಸುವ ಮೂಲಕ ಭಾಗವಹಿಸಿ ಅವರ ಕಲಾಸಕ್ತಿ ಯನ್ನು ಮೆರೆದಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕಾರ ನೀಡುತ್ತಿರುವ ಪೋಷಕರ ಪಾತ್ರವೂ ಇಲ್ಲಿ ಕಾಣುತ್ತದೆ. ಅವರಿಗೆ ನನ್ನ ಧನ್ಯವಾದಗಳು.
............................ ಬಿ ಪಿ ಮೋಹನ್ ಕುಮಾರ್
H O D : APPLIED ART 
MAHALASA COLLEGE OF VISUAL ARTS , MANGALORE 
Mob ; +91 81473 39778
*******************************************



      ಮಕ್ಕಳು ಮುಗ್ಧತೆಯ ಪ್ರತೀಕ ಎನ್ನುತ್ತಾರೆ. ಆದರೆ ಅವರಲ್ಲಿ ಅಗಾಧವಾದ ಕ್ರಿಯಾಶೀಲತೆ, ಸೃಜನಾತ್ಮಕತೆ , ಜ್ಞಾನ ಭಂಡಾರವೇ ಅಡಗಿದೆ. ಅವರಲ್ಲೂ ಅದ್ಭುತ ಕಲಾಕೃತಿ ಸೃಷ್ಟಿಸುವ ಪ್ರೌಢಿಮೆ ಇದೆ ಎಂಬುದು ನಮಗೆ ಅರಿವಾಗುವುದು 'ಮಕ್ಕಳ ಜಗಲಿ' ಯಂತಹ ವಿಶೇಷ ವೇದಿಕೆಯಲ್ಲಿ ಮಾತ್ರ. ನನಗೂ ಇಂತಹ ಅನುಭವವಾಗಿದ್ದು ಈ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತೀರ್ಪುಗಾರನಾಗಿ ಮಕ್ಕಳು ರಚಿಸಿದ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದಾಗ. ಇಂದಿನ ಮಕ್ಕಳು ಬೌದ್ಧಿಕವಾಗಿ, ಮಾನಸಿಕವಾಗಿ, ತಾಂತ್ರಿಕವಾಗಿ ಹಿರಿಯರನ್ನೂ ಮೀರಿ, ಅಚ್ಚರಿ ಎನ್ನುವಷ್ಟು ಬೆಳೆಯುತ್ತಿದ್ದಾರೆ. ಮುಂದುವರಿದ ತಾಂತ್ರಿಕತೆ, ಸಾಮಾಜಿಕ ಜಾಲತಾಣಗಳು ಹಾಗೂ ವಿದ್ಯಾವಂತ, ಪ್ರೋತ್ಸಾಹಿಸುವ ಹೆತ್ತವರೂ ಇದಕ್ಕೆ ಕಾರಣ ಎಂದು ಹೇಳಬಹುದು.
    ಕಳೆದೆರಡು ವರ್ಷಗಳಿಂದ ಜಾಗತಿಕ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಸಿಲುಕಿ ನಲುಗುತ್ತಿದ್ದ ಯುವ ಪೀಳಿಗೆಗೆ ಆಶಾ ಕಿರಣವಾಗಿ ಅವರ ಪ್ರತಿಭೆಗೆ ಪೋಷಣೆ ನೀಡಲು ಹುಟ್ಟಿಕೊಂಡ ವಿನೂತನ 'ಮಕ್ಕಳ ಜಗಲಿ' ಯು ನಿಜಕ್ಕೂ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಯಶಸ್ವಿಯಾಗಿ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಇದರ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಇನ್ನು ಪ್ರಸ್ತುತ ಚಿತ್ರಕಲಾ ಸ್ಪರ್ಧೆಯ ಬಗ್ಗೆ ಹೇಳಬೇಕೆಂದರೆ ಮಕ್ಕಳ ಪ್ರತಿಭೆಯ ಅನಾವರಣ ಒಂದಕ್ಕಿಂತ ಒಂದು ಅದ್ಭುತ ವಾಗಿದ್ದು ವಿಜೇತರ ನಿರ್ಣಯವೇ ಕಠಿಣವೆನಿಸಿತ್ತು. ಭಾಗವಹಿಸಿದ ಪ್ರಯೊಂದು ಮಗುವೂ ಅಭಿನಂದನೆಗೆ ಅರ್ಹ. ಮಕ್ಕಳಲ್ಲಿ ಸೃಜನಶೀಲತೆ ಇನ್ನೂ ಜೀವಂತವಾಗಿದೆ ಎಂಬ ವಿಷಯ ಇಂದಿನ ಯಾಂತ್ರಿಕ, ಸ್ಪರ್ಧಾತ್ಮಕ, ಮೊಬೈಲ್ ಜಗತ್ತಲ್ಲಿ ನಿಜಕ್ಕೂ ಆಶಾದಾಯಕ ಬೆಳವಣಿಗೆ. ಮಕ್ಕಳ ಕೈಯಲ್ಲಿ ಮೂಡಿ ಬಂದ ಒಂದೊಂದು ಚಿತ್ರವೂ ಒಂದೊಂದು ಕಥೆ ಹೇಳುವಂತಿತ್ತು. ಕೆಲವೊಂದು ಕಲಾಕೃತಿಗಳು ನಿಜಕ್ಕೂ ಮಕ್ಕಳ ಮಟ್ಟವನ್ನು ಮೀರಿ ಅದ್ಭುತ ಲೋಕವನ್ನೇ ಸೃಷ್ಟಿಸಿತ್ತು. ತಂತ್ರಜ್ಞಾನದ, ಸಾಮಾಜಿಕ ಜಾಲತಾಣಗಳ ಬಿರುಗಾಳಿಯ ನಡುವೆಯೂ ಮಕ್ಕಳಲ್ಲಿ ಪ್ರತಿಭೆಯ ದೀಪ ಪ್ರಜ್ವಲಿಸುತ್ತಿದೆ ಎಂಬುದು ಆಶಾದಾಯಕ ಬೆಳವಣಿಗೆ. ಪೋಷಕರಾದ ನಾವೆಲ್ಲರೂ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ನೀಡಿದಷ್ಟೇ ಪ್ರೋತ್ಸಾಹವನ್ನು ಅವರ ಭಾವನಾತ್ಮಕ ಬೆಳವಣಿಗೆಗೂ ನೀಡಬೇಕು. ಸಂಗೀತ, ನೃತ್ಯ, ಚಿತ್ರ, ಕಥೆ ಹೀಗೆ ಅವರ ಯಾವುದೇ ಆಸಕ್ತಿಯ ಚಿಗುರಿಗೆ ನೀರೆರೆದು ಪೋಷಿಸಬೇಕು ಅದು ಮುಂದೊಂದು ದಿನ ಹೆಮ್ಮರವಾಗಿ ಅವರ ಜೀವನಕ್ಕೆ ನೆರಳಾಗಿ ತಂಪೆರೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಮತ್ತೊಮ್ಮೆ ವಿಜೇತ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಅಭಿನಂದನೆಗಳು. 'ಮಕ್ಕಳ ಜಗಲಿ' ವೇದಿಕೆಯಿಂದ ಇನ್ನಷ್ಟು ಪ್ರತಿಭೆಗಳು ಅರಳುವಂತಾಗಲಿ ಎಂಬ ಹಾರೈಕೆ.
................................. ಅಜಯ್ ಕುಮಾರ್
ARTIST 
AMPLE INSIGHTS &
AMPLE PHOTOGRAPHY
MANGALORE 
Mob ; +91 99800 53200
*******************************************


         ಸ್ಪರ್ಧೆಗೆ ಬಂದಿರುವ ಎಲ್ಲಾ ಕಲಾಕೃತಿಗಳನ್ನು ಪರಿಶೀಲಿಸಿ ಪ್ರತಿಯೊಬ್ಬರಿಗೂ ಆನ್ ಲೈನ್ ಮೂಲಕ ಭಾಗವಹಿಸುವಿಕೆಯ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. 
       ಮಕ್ಕಳ ಜಗಲಿಯ ತುಳಸಿ ಕೈರಂಗಳ ಇವರು ನಿರ್ವಹಿಸುತ್ತಿದ್ದು ಸದ್ಯದಲ್ಲೇ ಎಲ್ಲ ವಿದ್ಯಾರ್ಥಿಗಳಿಗೂ ಮೊಬೈಲ್ ಮೂಲಕ ಪ್ರಮಾಣ ಪತ್ರ ತಲುಪಲಿದೆ.

ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ
ಇದರ ಪ್ರೋತ್ಸಾಹಕರು

        ದೇವರು ನಮಗೆ ಕರುಣಿಸಿರುವ ಪ್ರತಿಭೆಗಳನ್ನು ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಸಂಪೂರ್ಣವಾಗಿ ಬಳಸಿದರೆ ಮಾತ್ರ ಅವುಗಳನ್ನು ಅಭಿವೃದ್ಧಿಪಡಿಸಬಹುದು. ಜನಿಸಿರುವ ಪ್ರತಿಯೊಂದು ಮಗು ಕೂಡ ವೈವಿಧ್ಯಮಯ ಕೌಶಲ್ಯವನ್ನು ಹೊಂದಿರುವವರು. ಇಂತಹ ಪ್ರತಿಭಾನ್ವಿತ ಮಕ್ಕಳ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮಕ್ಕಳ ಜಗಲಿ ಆನ್ಲೈನ್ ಪತ್ರಿಕೆಯೊಂದು ಸಾಧನವಾಗಿದೆ... ಈ ತರಹದ ವೇದಿಕೆಯ ಜೊತೆ ನಾವೂ ಭಾಗವಾಗಿರುವುದು ಖುಷಿಯ ವಿಚಾರ.
....................................ಅಲ್ಫೀಸ್ ಡಿ ಸೋಜ
NATTIHITHLU CONSTRUCTIONS
MUDIPU , BANTWALA
Mob ; +91 6366 189 549
*******************************************


    ಮಕ್ಕಳ ಜಗಲಿ ಮೂಲಕ ನಡೆಯುವ ಕವನ, ಕಥೆ, ಚಿತ್ರಕಲಾ ಸ್ಪರ್ಧೆಗಳು ಮಕ್ಕಳಲ್ಲಿನ ಪ್ರತಿಭೆಗಳನ್ನು ಹೊರತರಲು ಉತ್ತಮ ವೇದಿಕೆ. ಇದನ್ನು ಚೆನ್ನಾಗಿ ನಡೆಸಿಕೊಂಡು ಬರುತ್ತಿರುವ ಮಕ್ಕಳ ಜಗಲಿ ಬಳಗದವರೊಂದಿಗೆ ಹೈಸ್ಕೂಲ್ ಸಹಪಾಠಿಗಳಾದ ನಮಗೂ ಅವಕಾಶ ನೀಡಿರುವುದು ತುಂಬಾ ಖುಷಿಯನ್ನು ನೀಡಿದೆ. ಧನ್ಯವಾದಗಳು
.................................... ಶಿವಪ್ರಕಾಶ್ ಕೆ ಟಿ
 SMK DEVELOPERS
KONAJE MANGALORE
Mob ; +91 98449 93975
*******************************************


      ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹದಾಯಕ ಕೆಲಸ ಮಾಡುತ್ತಿರುವ ಮಕ್ಕಳ ಜಗಲಿಯಲ್ಲಿ ದೇಶದ ಹೊರ ದೇಶದ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿ. ಸಾಹಿತ್ಯಿಕ ಹಾಗೂ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಕೊಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮ್ಮ ಜಾಗೃತಿ ಮನಸ್ಸು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಸಮಾಜದಲ್ಲಿ ಉತ್ತಮ ಕಾರ್ಯಗಳು ನೆರವೇರುತ್ತದೆ.
.................................... ಅಬ್ದುಲ್ ಜಲೀಲ್
BRIGHT CONSTRUCTIONS
MUDIPU BANTWALA
Mob ; +91 98864 95252
*******************************************



   ಬಾಲ್ಯದಲ್ಲಿ ನಾವು ಕಳೆದುಕೊಂಡಿರುವ ಅವಕಾಶಗಳನ್ನು ಇಂದಿನ ಮಕ್ಕಳಿಗೆ ನೀಡಬೇಕಾದುದು ಹಿರಿಯರಾದ ನಮ್ಮೆಲ್ಲರ ಕರ್ತವ್ಯ. ಮಗುವಿಗೆ ಐಷಾರಾಮದ ವಸ್ತುಗಳನ್ನು ಕೊಡುವುದಕ್ಕಿಂತ ಬದುಕಿನಲ್ಲಿ ಸಂತಸ ಪಡುವ ಕಲೆಗಳನ್ನು ಮೈಗೂಡಿಸಲು ಅವಕಾಶ ಒದಗಿಸಬೇಕು. ಪ್ರತಿಯೊಬ್ಬ ತಂದೆ ತಾಯಿ ಈ ನಿಟ್ಟಿನಲ್ಲಿ ಆಲೋಚಿಸಿದರೆ, ಎಲ್ಲಾ ಮಕ್ಕಳು ಪ್ರತಿಭಾ ಸಂಪನ್ನರಾಗಿ ಈ ದೇಶಕ್ಕೆ ಕೊಡುಗೆಯಾಗಬಲ್ಲರು. ಮಕ್ಕಳ ಜಗಲಿಯ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಇದೆ.
.................................... ವಸಂತ್ ಬೆರ್ಮದೆ
SRI VASU SHYAM VENTURE
BALMATA MANGALORE
Mob ; +91 99647 58023
*******************************************


      ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022
ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಹಕಾರ
ನಿನಾದ್ ಕೈರಂಗಳ

ನಿಧಿ ಕೈರಂಗಳ 



◾ ಸ್ಪರ್ಧೆಯ ಕುರಿತು ಸಕಾಲಕ್ಕೆ ಮಾಹಿತಿಯನ್ನು ನೀಡಿ ಸಹಕರಿಸಿದ ಆತ್ಮೀಯರು :

◾ಪೆರ್ಮುದೆ ಮೋಹನ್‌ ಕುಮಾರ್
MOB : 9448539003

◾ತುಳಸಿ ಕೈರಂಗಳ್
MOB : 9480288214

◾ಪ್ರಸನ್ನ ಐವರ್ನಾಡು
MOB : 9449331609
 
◾ಝುಬೈರ್ ಖಾನ್ ಕುಡ್ಲ
MOB : 6363417394

◾ಭಾಸ್ಕರ್ ನೆಲ್ಯಾಡಿ
MOB : 9901114843

◾ಅನಿಲ್‌ ಕುಮಾರ್ ಎಚ್‌. ಪಿ.
MOB : 9964912411

◾ಪ್ರಕಾಶ್ ವಿಟ್ಲ
MOB : 9901325219

◾ಬಾಲಕೃಷ್ಣ ಶೆಟ್ಟಿ
MOB : 9902196309

ಸಹಕಾರ : ಮಕ್ಕಳ ಜಗಲಿ ಬಳಗದ ಎಲ್ಲಾ ಆತ್ಮೀಯರು ಮತ್ತು ದ. ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ


ಇದು ನಿಮ್ಮ ಮನೆಯ
ಮಕ್ಕಳ ಜಗಲಿ
www.makkalajagali.com
          ಕೊರೋನ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ.
      ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರುಗಳಾಗಿ ಡಿಜಿಟಲ್ ಪದ್ಧತಿ ಸಾಧಕ ಬಾಧಕಗಳ ನಡುವೆಯೇ ಪಾಠ ಬೋಧನೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ.
       ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು ಆರಂಭಿಸುವ ಎಲ್ಲಾ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲೇ ಸಾಗಿತು.
       ಮಕ್ಕಳ ಜಗಲಿ ಇದು ಮಕ್ಕಳಿಗಾಗಿ ಮೀಸಲಾದ ಇ-ಪತ್ರಿಕೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ವೈವಿಧ್ಯ ಪ್ರಾಕಾರಗಳಲ್ಲಿ ಪ್ರಕಟ ಪಡಿಸಲು ಇರುವಂತಹ ವೇದಿಕೆ. ಮಕ್ಕಳ ಸ್ವರಚಿತ ಕಥೆ, ಲೇಖನ, ಕವನ, ಆರ್ಟ್ ಮತ್ತು ಕ್ರಾಪ್ಟ್ ಹೀಗೆ ಹಲವಾರು ಮಕ್ಕಳ ಸೃಜನಾತ್ಮಕ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗಬಲ್ಲುದು. 
       ಹಳೆ ಶೈಲಿ ಮನೆಗಳಲ್ಲಿ ಹೆಚ್ಚಾಗಿ ಮನೆ ಮುಂದೆ ಜಗಲಿ ಇರುತ್ತಿತ್ತು. ಮನೆಮಕ್ಕಳೆಲ್ಲಾ ಜಗಲಿ ಮೇಲೆ ಕುಳಿತು ಬರೆಯುವುದು, ಓದುವುದು, ಹಾಡುವುದು, ರಂಗೋಲಿ ಬಿಡಿಸುವುದು, ಕಲ್ಲಾಟವಾಡುವುದು ಹೀಗೆ ಹಲವು ಚಟುವಟಿಕೆಗಳಿಗೆ ಅದುವೇ ವೇದಿಕೆ. ನನ್ನಂತಹ ಅನೇಕರಿಗೆ ಜೀವನದ ಹಲವು ಮೈಲುಗಲ್ಲುಗಳನ್ನು ಯಶಸ್ವಿಯಾಗಿ ದಾಟಲು ಮನೆ ಜಗಲಿ ಪ್ರೇರಣೆ ನೀಡಿದೆ. ಜಗಲಿ ಮಾಯವಾಗಬಾರದು, ಅದನ್ನು ಮತ್ತೆ ಕಟ್ಟಬೇಕೆಂದು ಕನಸು.
        ಮಂಚಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ವಿಟ್ಲ, ವಿಜ್ಞಾನ ಶಿಕ್ಷಕರಾದ ಶ್ರೀ ವಿ. ಶ್ರೀರಾಮಮೂರ್ತಿ, ಸಹೋದ್ಯೋಗಿ ಬಂಧುಗಳು, ಶಾಲಾ ಎಸ್.ಡಿ.ಎಂ.ಸಿ, ಶಾಲಾ ಮಕ್ಕಳು, ಜಗಲಿಯ ಕನಸಿಗೆ ಸಾಕ್ಷಿಗಳು. ಸೃಜನಶೀಲ ಚಿಂತನೆಗಳಿಗೆ ರೂಪ ಕೊಟ್ಟಂತಹ ಶಿಕ್ಷಣ ಚಿಂತಕ ಗೋಪಾಡ್ಕರ್, ಸ್ಪೂರ್ತಿಯಾಗಿರುವ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಪ್ರೇರಣೆಯನ್ನು ನೀಡುತ್ತಾ ಬಂದಿರುವ ಕಲಾವಿದ, ಸಾಹಿತಿ ದಿನೇಶ ಹೊಳ್ಳ, ತಾಂತ್ರಿಕ ಸಹಕಾರ ನೀಡುತ್ತಿರುವ ಪತ್ರಕರ್ತ ಮಿತ್ರರಾದ ವಿನೋದ್ ಪುದು, ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಜ್ಞಾನೇಶ್, ಮಾರ್ಗದರ್ಶಕರಾದ ಶ್ರೀ ವೈ ಶಿವರಾಮಯ್ಯ, ಶಿವಪ್ರಕಾಶ ಎನ್, ಮಕ್ಕಳ ಜಗಲಿಯಲ್ಲಿ ಬರೆಯುತ್ತಿರುವ ಎಲ್ಲಾ ಅಂಕಣಕಾರರು ಹಾಗೂ ನಿರಂತರವಾಗಿ ಪಾಲ್ಗೊಳ್ಳುವ ಮಕ್ಕಳು, ಓದುಗರು ಇವರೆಲ್ಲ ಕನಸಿನ ಜಗಲಿಯ ಪಾಲುದಾರರು. 
        ಮಕ್ಕಳ ಜಗಲಿಯನ್ನು ಎಲ್ಲರ ಮನ ಮನೆಗಳಿಗೆ ತಲುಪಿಸಬೇಕೆಂದು ನಮ್ಮ ಗುರಿಯಾಗಿದೆ. ಈ ಸಂದರ್ಭದಲ್ಲಿ ಶೀರ್ಷಿಕೆ ಗೀತೆಯನ್ನು ನಿರ್ಮಿಸಿ ಪ್ರಸಾರ ಮಾಡುವ ಆಲೋಚನೆ ಮೂಡಿತು. ಸಾಹಿತಿ ಚಂದ್ರಶೇಖರ ಪಾತೂರು ಬರೆದ ಸಾಹಿತ್ಯಕ್ಕೆ ಮಂಗಳೂರಿನ ಕೋಣಾಜೆ ವಿಶ್ವ ಮಂಗಳ ಪ್ರೌಢ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಅದ್ಭುತವಾಗಿ ಹಾಡಿದಳು. ಪುತ್ತೂರಿನ ಮಕ್ಕಳ ಮಂಟಪದ ಅನೇಕ ಪುಟಾಣಿಗಳು ಈ ದೃಶ್ಯ ಸಂಯೋಜನೆಯಲ್ಲಿ ಹಾಡಿ ನಲಿದರು. ಮಕ್ಕಳ ಜಗಲಿಯ ಹಾಡು ಎಲ್ಲರನ್ನು ತಲುಪುವ ಮೂಲಕ ಜಗಲಿಗೆ ಬರೆಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿತು.
       ಮಕ್ಕಳ ಜಗಲಿ ಅದು ನಿಮ್ಮ ಮನೆಯ ಮಕ್ಕಳ ಜಗಲಿ. ಇಲ್ಲಿ ಸಣ್ಣ ಮಕ್ಕಳಿಂದ ಪಿ.ಯು.ಸಿವರೇಗೆ ಕಲಿಯುತ್ತಿರುವ ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಮನೆಯ ಮಕ್ಕಳೂ ಶ್ರೇಷ್ಠರೇ. ಅವರಿಗೆ ಅವಕಾಶ ಕೊಡಬೇಕಾಧದ್ದು ಹಿರಿಯರಾದ ನಮ್ಮ ಕರ್ತವ್ಯ. ಆ ಮೂಲಕ ಪ್ರತಿಯೊಂದು ಮನೆಯ ಮಕ್ಕಳನ್ನು ಜಗಲಿಯಲ್ಲಿ ಸ್ವತಂತ್ರವಾಗಿ ಬೆಳೆಯಲು ಬಿಡಿ ಎಂದು ನಮ್ಮ ಬೇಡಿಕೆ.
       2020ನೇಯ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಉದ್ಘಾಟನೆಗೊಂಡು ಮಕ್ಕಳ ಪ್ರತಿಭಾ ವೇದಿಕೆಯಾಗಿ ಗುರುತಿಸಿಕೊಂಡಿತು. ದ.ಕ. ಜಿಲ್ಲೆಗೆ ಮಾತ್ರ ಮೀಸಲಿದ್ದ ಈ ವೇದಿಕೆ ಈಗ ವಿಸ್ತಾರಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದೆ. ಹೊರ ರಾಷ್ಟದಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳೂ ಮಕ್ಕಳ ಜಗಲಿಗೆ ಬೆರೆಯುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಪ್ರತಿಭಾನ್ವಿತ ಮಕ್ಕಳು ಬೆಳೆಯಬೇಕೆಂದು ನಮ್ಮ ಉದ್ದೇಶ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂದು ಪ್ರೋತ್ಸಾಹದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿ ಸದಾ ಸಿದ್ದವಾಗಿದೆ.
............................. ತಾರಾನಾಥ್ ಕೈರಂಗಳ
ದಕ್ಷಿಣ ಕನ್ನಡ ಜಿಲ್ಲೆ
9844820979
******************************************

Ads on article

Advertise in articles 1

advertising articles 2

Advertise under the article