-->
ಅಕ್ಕನ ಪತ್ರ - 36 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 36 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 36 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


         ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........
              
     ಜಗಲಿಯ ಎಲ್ಲಾ ಪ್ರೀತಿ ಪಾತ್ರರಿಗೂ ನಲ್ಮೆಯ ಶುಭ ನಮನಗಳು.... ನಾನು ಪ್ರಿಯ, 
       ಕ್ಷಮಿಸಿ... ಅಕ್ಕ...!! ನಿಮ್ಮ ಹಿಂದಿನ ಪತ್ರಗಳನ್ನು ಓದಿದರೂ ಉತ್ತರ ಬರೆಯಲು ಸಾಧ್ಯವಾಗಲಿಲ್ಲ.... ಹೌದು ಅಕ್ಕ ನಿಜವಾಗಿಯೂ ಮಕ್ಕಳ ಜಗಲಿಯು ಮಕ್ಕಳ ಖುಷಿ, ಕನಸು ಹಾಗೂ ಕೌಶಲಗಳನ್ನು ಒಟ್ಟುಗೂಡಿಸಿರುವ "ಪ್ರತಿಭಾ ಅರಮನೆ" ಎಂದರೆ ತಪ್ಪಾಗಲಾರದು. ಏಕೆಂದರೆ ಜಗಲಿಯಲ್ಲಿ ನಾವುಗಳೆಲ್ಲರೂ ಪ್ರತಿದಿನವೂ ಹೊಸತೊಂದನ್ನು ಕಲಿಯುತ್ತಿದ್ದೇವೆ. ಇಲ್ಲಿ ಪ್ರಕಟಿಸುವ ಪ್ರತಿಯೊಂದು ವಿಷಯಗಳು ಮೌಲ್ಯಯುತವಾದದ್ದು... ಮಹಾರಾಷ್ಟ್ರದ ವಿಷಯ ತಿಳಿದು ನಾನು ಬಹಳ ಕೌತುಕಳಾದೆ... ಎಷ್ಟು ಒಳ್ಳೆಯ ಮನಸ್ಸಿನ ಜನರು ಎಂದು ಅನಿಸಿತು.
        ಹೌದು ಅಕ್ಕ ಬೇರೆಯವರಿಗೆ ಸಹಾಯ ಮಾಡಲು ನಮಗೆ ಅನಿಸಿದರೆ ಹಿಂದೂ ಮುಂದೂ ನೋಡದೆ ಮಾಡಬೇಕು ಎಂದು ಹೇಳಲು ಇಚ್ಚಿಸುತ್ತೇನೆ... ಕಾರಣವೆಂದರೆ  ನಾನು ಒಂದು ಪುಸ್ತಕದಲ್ಲಿ ಒದ್ದಿದ್ದೆ. ದೀಪವು ಬೆಳಕನ್ನು ನೀಡುವ ಸಮಯದಲ್ಲಿ ಅದು ತನ್ನ ಬಗ್ಗೆ... ತಾನು ಹೊತ್ತಿಕೊಳ್ಳುತ್ತಿದ್ದೇನಲ್ಲ, ಸಣ್ಣದಾಗುತ್ತಿದ್ದೇನಲ್ಲ ಎಂದು ಯೋಚಿಸುವುದಿಲ್ಲ. ಕಾರಣವೆಂದರೆ ಅದು ಹಾಗೆ ಯೋಚಿಸಿದರೆ ತಾನು ಇಡೀ ಜಗತ್ತನ್ನು ಬೆಳಗಲು ಅಸಾಧ್ಯ ವಾಗುತ್ತಿತ್ತು. ನಾನು ಓದಿದ ಈ ವಿಚಾರವನ್ನು ನಿಮ್ಮ ಈ ಪತ್ರವನ್ನು ಓದಿ ನಿಮ್ಮೆಲ್ಲರೊಂದಿಗೂ ಹಂಚಿಕೊಳ್ಳಬೇಕೆನಿಸಿತು. ಸದಾ ನಮಗಾಗಿ ನಿಮ್ಮ ಪ್ರೀತಿ ಕಾಳಜಿ ತುಂಬಿದ ಧಾನ್ಯಗಳನ್ನು ಬಿತ್ತುವ ನಿಮ್ಮ ಪತ್ರಗಳ ಉಳುಮೆಗಾಗಿ. ವಂದನೆಗಳು ಅಕ್ಕ... ನಮ್ಮ ನಿಮ್ಮೊಂದಿಗಿನ "ಪತ್ರ ಸಂಚಲನ" ಸದಾ ಸಾಗುತಿರಲಿ.......
....................................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು, ಅಳದಂಗಡಿ.
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



      ನಮಸ್ತೆ, ನಾನು ಧೀರಜ್.ಕೆ.ಆರ್. ನಮ್ಮ ಮಕ್ಕಳ ಜಗಲಿಗೆ 2ನೇ ವರ್ಷದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಮೊದಲನೆಯದಾಗಿ ನಾನು ಮಕ್ಕಳ ಜಗಲಿಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದೇನೆ. ಇಂದಿನ ನಿಮ್ಮ ಪತ್ರ ಓದಿ ನನಗೆ ತುಂಬಾ ಖುಷಿಯಾಯಿತು. ನೀವು ಹೇಳಿದ ಮಹಾರಾಷ್ಟ್ರದ ಕೋಲ್ಹಪುರದಲ್ಲಿ ನಡೆದ ನೈಜ ಘಟನೆಯು ನಮ್ಮವರು ಎಂಬ ಭಾವನೆಯನ್ನು ಸಾರುತ್ತವೆ. ಊರಿನವರ ಪ್ರೇಮ, ಮಮತೆಯು ವ್ಯಕ್ತವಾಗಿದೆ. ಈ ರೀತಿಯ ಭಾವನೆಗಳು ನಮ್ಮಲ್ಲೂ ಮೂಡಬೇಕು ಎಂಬುದನ್ನು ನೀವು ಒಂದು ಘಟನೆಯನ್ನು ಉದಾಹರಣೆ ಯಾಗಿಟ್ಟುಕೊಂಡು ನಮಗೆ ಸೊಗಸಾಗಿ ತಿಳಿಸಿದ್ದೀರಿ. ಅಕ್ಕಾ ನಿಮ್ಮಂತಹ ಪ್ರತಿಭಾ ಪ್ರೋತ್ಸಾಹಕರು ಇರುವವರೆಗೂ ನಮ್ಮಂತಹ ವಿದ್ಯಾರ್ಥಿಗಳು ಪ್ರತಿಭೆಯನ್ನು ಪ್ರದರ್ಶಿಸಬಹುದು. ನಮ್ಮ ಮಕ್ಕಳ ಜಗಲಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯು ಇನ್ನು ಹೆಚ್ಚಾಗಿ ಹೆಚ್ಚು ಹೆಚ್ಚು ಪ್ರತಿಭೆಗಳನ್ನು ಗುರುತಿಸುವಂತಾಗಲಿ. ಮಕ್ಕಳ ಜಗಲಿಯು ದೇಶ - ವಿದೇಶಾದ್ಯಂತ ಹೆಸರುವಾಸಿಯಾಗಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳು.
..................................... ಧೀರಜ್. ಕೆ ಆರ್ 
10ನೇ ತರಗತಿ  
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ ರಾಮಕುಂಜ. 
ಕಡಬ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


ಅಕ್ಕನ ಪತ್ರ ಸಂಚಿಕೆ 36 ಕ್ಕೆ ಶಿಶಿರನ ಉತ್ತರ              
         ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಾನು ಕ್ಷೇಮವಾಗಿರುವೆ. ನಿಮ್ಮ ಪತ್ರ ಓದಿ ಸಂತೋಷವಾಯಿತು. ನಮ್ಮ ಜಗಲಿಗೆ ಎರಡನೇಯ ವರ್ಷ ತುಂಬುತ್ತಿರುವುದು ಸಂತಸದ ವಿಚಾರ. ಮಕ್ಕಳ ಜಗಲಿಯಲ್ಲಿ ಬರುವ ಹಿರಿಯರ ಹಿತ ನುಡಿಯ ಲೇಖನಗಳು ನನಗೆ ಓದಲು ತುಂಬಾ ಇಷ್ಟ. ಮಕ್ಕಳ ಜಗಲಿಯಿಂದ ಅನೇಕ ಹೊಸ ವಿಚಾರಗಳನ್ನು ತಿಳಿದ್ದಿದೇನೆ. ಜಗಲಿಯು ಮಕ್ಕಳು ಬರೆದ ಕವನಗಳು, ಬಿಡಿಸಿದ ಚಿತ್ರಗಳನ್ನು ಪ್ರಕಟಿಸಿ ಅದನ್ನು ನಮಗೆ ಓದುವ , ತಿಳಿದುಕೊಳ್ಳುವ ಮತ್ತು‌ ವೀಕ್ಷಿಸುವ ಅವಕಾಶ ನೀಡಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಕ್ಕಳ ಜಗಲಿಯು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ವೇದಿಕೆಯಾಗಿದೆ. ಮಕ್ಕಳ ಜಗಲಿಯು ಇದೇ ರೀತಿ ನಿರಂತರವಾಗಿ ಮಕ್ಕಳ ಆಶೋತ್ತರಗಳನ್ನು ಪೂರೈಸುವ ವೇದಿಕೆಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇನೆ. ಮಕ್ಕಳ ಜಗಲಿಯ ಎಲ್ಲರಿಗೂ ಧನ್ಯವಾದಗಳು.
.............................................. ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



ನಮಸ್ತೆ ಅಕ್ಕ ... ನಾನು ಶ್ರಾವ್ಯ. ನಾವು ಚೆನ್ನಾಗಿದ್ದೇವೆ ...
    ದಿನಗಳು ಹೇಗೆ ಉರುಳಿತು ಅಂತ ತಿಳಿಲೇ ಇಲ್ಲ. ಮೊನ್ನೆ ಮೊನ್ನೆ ಆರಂಭವಾದ ನಮ್ಮ ಮಕ್ಕಳ ಜಗಲಿ ೨ ವರ್ಷ ಪೊರೈಸುತ್ತಿದೆ, ಅದೂ ಸುಮ್ಮನೆ ಅಲ್ಲ ಸದಾ ಕಾರ್ಯ ಪ್ರವೃತ್ತ.... ಒಂದಲ್ಲ -ಒಂದು ಯೋಜನೆ, ಚಟುವಟಿಕೆ ಮಾಡುತ್ತಾ ಯಶಸ್ವಿಯ ೨ನೇ ವರ್ಷ...... ನಾನೂ ಈ ಜಗಲಿಯ ಒಂದು ಪುಟ್ಟ ಭಾಗ ಎನ್ನುವುದು ತುಂಬಾನೇ ಖುಷಿ ಮತ್ತು ಹೆಮ್ಮೆ ಇದೆ..
      ನಮ್ಮಜಗಲಿಯಿಂದ ನಾವು ಸಾಕಷ್ಟು ವಿಚಾರ ಕಲಿತಿದ್ದೇವೆ. ಇಲ್ಲಿ ಪ್ರಕಟಗೊಳ್ಳುವ ಬದಲಾಗೋಣವೇ ಪ್ಲೀಸ್, ಹಕ್ಕಿಯ ಕತೆ, ಪುಸ್ತಕ ಪರಿಚಯ, ಅಕ್ಕನ ಪತ್ರ, ಸಂಚಾರಿ ಡೈರಿ, ಆರ್ಟ್ ಗ್ಯಾಲರಿ ಹೀಗೇ ಅನೇಕ ಚಿತ್ರ, ಲೇಖನ, ಕತೆ, ಕವನಗಳು ಪ್ರತೀ ಸಂಚಿಕೆಯಲ್ಲೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತಹ ಮೌಲ್ಯಗಳನ್ನು ಸಾರುವ ಹೊಸ ಹೊಸ ವಿಚಾರವನ್ನು ಹೊತ್ತುತರುತ್ತದೆ. ಹಬ್ಬ ಹರಿ ದಿನವನ್ನು ವಿವಿಧ ಚಟುವಟಿಕೆಯ ಆಯೋಜನೆಯ ಮೂಲಕ ಆಚರಣೆ ಮಾಡುತ್ತದೆ. ನಮ್ಮ ಜಗಲಿಯು ಕತೆ, ಕವನ, ಚಿತ್ರ ಬಿಡಿಸುವ ಅನೇಕ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ... ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಜಗಲಿಯ ಮುಂದೆ ನಾವೂ ಅದರ ಒಂದು ಭಾಗ ಎನ್ನುವುದು ತುಂಬಾ ಹೆಮ್ಮೆಯಿದೆ.. ನಮ್ಮನ್ನೂ ಜಗಲಿಯ ಪಾಲುದಾರರಾಗಿಸಿರುವುದಕ್ಕ ಹೃದಯ ತುಂಬಿ ಧನ್ಯವಾದಗಳು......
...................................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರಿರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************



      ಪ್ರೀತಿಯ ಅಕ್ಕನಿಗೆ ಸಿಂಚನಶೆಟ್ಟಿ ಮಾಡುವ ನಮಸ್ಕಾರಗಳು. ನಾನು ಚೆನ್ನಾಗಿದ್ದೇನೆ ಅಕ್ಕ. ನೀವು ಕೂಡ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಮಕ್ಕಳ ಜಗಲಿ ಒಂದು ದೊಡ್ಡ ವೇದಿಕೆ. ನಾನು  ನವೆಂಬರ್ 14ಕ್ಕೆ ಕಾಯುತ್ತಿದ್ದೇನೆ. ಮಕ್ಕಳ ಜಗಲಿಯಲ್ಲಿರುವ ಅಕ್ಕನ ಪತ್ರ, ಹಕ್ಕಿಗಳ ಕಥೆ, ಪದದಂಗಳ  ಎಲ್ಲ ಸಂಚಿಕೆಗಳು ತುಂಬಾ ತುಂಬಾ ಚೆನ್ನಾಗಿತ್ತು. ಅಕ್ಕನ ಪತ್ರದಲ್ಲಿ ಒಂದೊಂದು ವಾರ ಒಂದೊಂದು ವಿಷಯಗಳನ್ನು ತಿಳಿದೆನು. ನಾನು ಅಂತಲ್ಲ ಭಾಗವಹಿಸಿರುವ ಎಲ್ಲರೂ ಕೂಡ ತಿಳಿದಿರುತ್ತಾರೆ. ಈ ವೇದಿಕೆ ಬೇರೆಯವರಿಗೆ ಸಿಗಲು ಸಾಧ್ಯವಿಲ್ಲ. ಮಕ್ಕಳ ಜಗದಲ್ಲಿ ಭಾಗವಹಿಸಿರುವ ಎಲ್ಲಾ ಪುಟಾಣಿಗಳು ಪುಣ್ಯವಂತರು. ನಾನು ಮನೆಯಿಂದ ಹೊರಗೆ ಹೊರಟಾಗ ನನ್ನನ್ನು ಮಕ್ಕಳ ಜಗಲಿ ಸಿಂಚನ ಎಂದು ಗುರುತಿಸುತ್ತಾರೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಹಾಗೂ ಮಕ್ಕಳ ಜಗಲಿಯನ್ನು ನಾನು ಗೌರವಿಸುತ್ತೇನೆ ಹಾಗೂ ಪ್ರೀತಿಸುತ್ತೇನೆ. ಶಾಲೆಯ ಪರವಾಗಿ ನನಗೆ ಶಿಕ್ಷಕರು ಅಭಿನಂದನೆಗಳನ್ನು ಹೇಳುತ್ತಾರೆ. ಇದೇ ಒಂದು ಸಂತಸ ಅಲ್ಲವೇ. ನನಗೆ ನವೆಂಬರ್ 14 ತುಂಬಾ ಸಂಭ್ರಮದ ದಿನವಾಗಿರುತ್ತದೆ. ನನಗೆ  ನನ್ನ ಕುಟುಂಬದವರಿಗೆ ನನ್ನ ಶಾಲೆಯ ಎಲ್ಲರಿಗೂ ಸಂತೋಷವಾಗುತ್ತದೆ ಎಂದು ಭಾವಿಸುತ್ತೇನೆ. ನನ್ನ ಆರೋಗ್ಯ ವಿಚಾರಿಸಿದ ಅಕ್ಕನಿಗೆ ಧನ್ಯವಾದಗಳು ನಿಮ್ಮ ಆರೋಗ್ಯ ಕೂಡ ಜೋಪಾನ ಅಕ್ಕಾ. ಮುಂದಿನ ಪತ್ರದಲ್ಲಿ ಸಿಗೋಣ. ಅಲ್ಲಿವರೆಗೆ ಪ್ರೀತಿಯ ಅಕ್ಕನಿಗೆ ಸಿಂಚನ ಶೆಟ್ಟಿ ಮಾಡುವ ನಮನಗಳು. ಧನ್ಯವಾದಗಳು
..................................... ಸಿಂಚನಾ ಶೆಟ್ಟಿ 
5ನೇ ತರಗತಿ 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸೇಡಿಗುಳಿ  
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


       ನಾನು ಪ್ರಣಮ್ಯ. ಅಕ್ಕನ ಈ ವಾರದ ಪತ್ರ ಓದಿ ಸಂತೋಷವಾಯಿತು. ಅಕ್ಕ ಮಕ್ಕಳ ಜಗಲಿಯ ಬಗ್ಗೆ ವಿವರಿಸಿದಾಗ, ನಾನೂ ಈ ಜಗಲಿಯ ಬಳಗದ ಆವರಣಕ್ಕೆ ಸೇರಿಕೊಂಡ ಬಗ್ಗೆ ಹೆಮ್ಮೆ ಉಂಟಾಯಿತು. ಹಲವಾರು ವಿಧದ ವಿಚಾರಗಳನ್ನು ಬಿತ್ತರಿಸುತ್ತಿರುವ ಜಗಲಿ ನಿಜಕ್ಕೂ ನಮಗೆಲ್ಲ ಅದ್ಭುತ ವೇದಿಕೆಯಾಗಿದೆ. ಅಕ್ಕನ ಮಾತಿನಂತೆ... ನಾವು ಯಾರೊಡನೆಯಾಗಲೀ ನಿರ್ಮಲ ಮನಸ್ಸಿನಿಂದ ಒಡನಾಟ ಮಾಡಿದರೆ ಅಲ್ಲಿ ಮೋಸಕ್ಕೆ ಆಸ್ಪದವಿರುವುದಿಲ್ಲ. ಜೀವನದಲ್ಲಿ ವಿಶ್ವಾಸ ಎನ್ನುವುದು ಅತೀ ಮುಖ್ಯವಾಗುತ್ತದೆ. ಸದಾಚಾರಗಳನ್ನು ಪಾಲಿಸುತ್ತಾ, ಹಿರಿಯರ ಆಶಯದಂತೆ ಖುಷಿಯಾಗಿ ಬಾಳೋಣ... ಎಂಬ ನುಡಿಯೊಂದಿಗೆ.....
................................................ ಪ್ರಣಮ್ಯ
10 ನೇ ತರಗತಿ 
ಸಂತಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


     ನಮಸ್ತೇ ಅಕ್ಕಾ.... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
       ನಾನು ಕ್ಷೇಮದಿಂದ ಇರುವೆನು. ನಿಮ್ಮ ಪತ್ರವನ್ನು ಓದಿದೆನು. ಒಬ್ಬ ವ್ಯಕ್ತಿಯು ಜಗತ್ತಿನಲ್ಲಿ ಎಲ್ಲಿ ವಾಸಿಸುತ್ತಿದ್ದರೂ ನಾವು ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಅಥವಾ ಸಂದೇಶ ಕಳುಹಿಸಲು ಅವರೊಂದಿಗೆ ಮಾತನಾಡಲೂ ಇಂಟರ್ನೆಟ್ ನ ಮೂಲಕ ಸಾಧ್ಯ. ಈಗ ಕೆಲವು ವರ್ಷಗಳ ಹಿಂದೆ ಕೊರೋನ ಎಂಬ ರೋಗವು ಬಂದು ಲಾಕ್ ಡೌನ್ ಸಮಸ್ಯೆಯಿಂದ ಒಬ್ಬರನ್ನು ಒಬ್ಬರು ಕಾಣದೆ ಮಾತನಾಡಲೂ ಆಗದೆ , ಶಾಲೆಗೆ ಹೋಗಲೂ ಆಗದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ವಿಷಯವನ್ನು ತಿಳಿಯಲು ಮತ್ತು ಮಕ್ಕಳ ಪ್ರತಿಭೆಯನ್ನು ತಿಳಿಸಲು ಉಪಯುಕ್ತವಾದ ಒಂದು ಆನ್ ಲೈನ್ ಪತ್ರಿಕೆ ಮಕ್ಕಳ ಜಗಲಿ ಆಗಿದೆ. ಮಕ್ಕಳಿಗೆ ಕವನ, ಕಥೆ
ಚಿತ್ರ ಮಾಡಲು, ಪತ್ರಬರೆಯಲು ಪ್ರೋತ್ಸಾಹಿಸಿದ ನಮ್ಮಲ್ಲರ ಮಕ್ಕಳ ಜಗಲಿ ಆನ್ ಲೈನ್ ಪತ್ರಿಕೆಯಿಂದ ಹಕ್ಕಿಗಳ ಪರಿಚಯ, ಸ್ಫೂರ್ತಿಯ ಮಾತು, ಪದದಂಗಳ, ಅಕ್ಕನ ಪತ್ರ , ಜೀವನ ಸಂಭ್ರಮ, ಪ್ರತಿಫಲನ, ಬದಲಾಗೋಣವೇ ಪ್ಲೀಸ್, ಮೊದಲಾದವುಗಳನ್ನೂ ತಿಳಿಯಲು ಮತ್ತು ಒಳ್ಳೆಯ ಜ್ಞಾನವನ್ನು ಗಳಿಸಲು ಸಹಾಯವಾಗುತ್ತದೆ. ಈ ಜಗಲಿಯಲ್ಲಿ ತುಂಬಾ ಮಕ್ಕಳು ಇದ್ದಾರೆ. ಇವರಲ್ಲಿ ನಾನು ಒಬ್ಬನಾಗಿರುವೆನು. ಇದು ನನಗೆ ತುಂಬಾ ಸಂತೋಷದ ವಿಷಯ. ನಮಗೆ ಒಳ್ಳೆಯ ವಿಷಯವನ್ನು ತಿಳಿಸುವ ನನ್ನ ಎಲ್ಲಾ ಗುರುಗಳಿಗೆ ನನ್ನ ಪ್ರೀತಿಯ ವಂದನೆಗಳು. ಮಕ್ಕಳ ಜಗಲಿ ವಿಶ್ವ ಜಗಲಿ ಆಗಿರುವುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ.
       ಎಲ್ಲರೂ ನಮ್ಮವರು ಎನ್ನುವ ಭಾವನೆಯೂ ಹೂವಿನ ವ್ಯಾಪರಿಯವರ ಮನಸಿನಲ್ಲಿ ಇದ್ದುದರಿಂದ ಅವರಿಗೆ ಹೂವನ್ನು ಇಟ್ಟು ಹೋಗಲು ಮನಸ್ಸು ಬಂದಿತು. ಎಲ್ಲರೂ ಅವರಂತೆಯೇ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಿದರೆ ಹಣವಿದ್ದು ಶ್ರೀಮಂತನಾಗದೆ ಒಳ್ಳೆಯ ಹೃದಯವಂತ ನಾಗಬಹುದು. ಧನ್ಯವಾದಗಳು ಅಕ್ಕಾ,
..................................... ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************     



      ನಮಸ್ತೆ ನಾನು ಸಪ್ತಮಿ ಅಶೋಕ ದೇವಾಡಿಗ. ಹೌದು ಅಕ್ಕ ನಿಮ್ಮ ಪತ್ರ ಓದಿ ತುಂಬಾನೇ ಖುಷಿ ಕೊಟ್ಟಿದೆ. ನಾನು ಚೆನ್ನಾಗಿದ್ದೇನೆ.... ನೀವು ಹೇಗಿದ್ದೀರಾ??. ಮಕ್ಕಳ ಜಗಲಿ 2ನೇ ವರ್ಷದ ಸಂಭ್ರಮ. ಮಕ್ಕಳ ಜಗಲಿಯ ವೇದಿಕೆ ಅದೆಷ್ಟೋ ಮಕ್ಕಳಿಗೆ ದಾರಿದೀಪವಾಗಿದ್ದಂತೂ ಸತ್ಯ. ಈ ವೇದಿಕೆ ಕುರಿತು ಎಷ್ಟು ಹೇಳಿದರೂ ಸಾಲದು. ನಾನು ಎಲ್ಲ ವಿಷಯದಲ್ಲಿ ಉತ್ತಮವಾದ ಅಂಕವನ್ನು ಪಡೆಯುತ್ತಾ ಬಂದಿದ್ದೇನೆ. ಆದರೆ ಕನ್ನಡದಲ್ಲಿ ಮಾತ್ರ ಕಡಿಮೆ ಅಂಕ ಬಂದಿದ್ದ ಕಾರಣ ನಾನು ಕಥೆಗಳನ್ನು, ಪ್ರಬಂಧಗಳನ್ನು, ಕವನಗಳನ್ನು, ಬರೆಯಲು ಹಾಗೂ ಭಾಷಣವನ್ನು ಹೇಳಲು ಪ್ರಾರಂಭಿಸಿದೆ. ನಂತರ ನನಗೆ ಸಿಕ್ಕ ಒಂದು ಅದ್ಭುತವಾದ ವೇದಿಕೆ ಅಂದರೆ ಅದು ಮಕ್ಕಳ ಜಗಲಿ. ಹೌದು ಅಕ್ಕ.. ನೀವು ಹೇಳಿದ ಹಾಗೆ ಬರೆಯದವರನ್ನು ಬರೆಸಿದ, ಓದದವರನ್ನು ಓದಿಸಿದ, ಚಿತ್ರ ಬಿಡಿಸದವರನ್ನು ಗೆರೆ ಎಳೆಯುವ ಆಸಕ್ತಿಯನ್ನು ಬೆಳೆಸಿದ ಈ ವೇದಿಕೆಗೆ ನನ್ನ ವಂದನೆಗಳು. ಇದು ಬರೀ ವೇದಿಕೆಯಲ್ಲ ಇದು ಮಕ್ಕಳ ಅಭ್ಯುದಯದ ಒಂದು ಬೇರು ಇದ್ದ ಹಾಗೆ. ಮಕ್ಕಳನ್ನು ಪ್ರೋತ್ಸಾಹಿಸುವ ವೇದಿಕೆಯೇ ಈ ಮಕ್ಕಳ ಜಗಲಿ.
      "ಎಲ್ಲರ ಜೊತೆಯಲ್ಲಿ ಪ್ರೀತಿ, ವಾತ್ಸಲ್ಯದಿಂದ ಬದುಕುವುದನ್ನು ಕಲಿಯಬೇಕು. ಪ್ರೀತಿ ವಾತ್ಸಲ್ಯವನ್ನು ಸಂಪಾದಿಸಬೇಕೆಂದರೆ ಮೊದಲು ನಮ್ಮ ಮನಸ್ಸು ಸರಿಯಾಗಿರಬೇಕು. ನಮ್ಮ ಮನಸ್ಸು ಸರಿಯಾಗಿಲ್ಲವೆಂದರೆ ಪ್ರೀತಿ, ವಾತ್ಸಲ್ಯವನ್ನು ಗಳಿಸುವುದು ಕಷ್ಟ" ಎಂಬುದನ್ನು ನಿಮ್ಮ ಪತ್ರದಿಂದ ಕಲಿತಿದ್ದೇನೆ. ಮಕ್ಕಳ ಬದುಕಿಗೆ ಬೆಳಕನ್ನು ಚೆಲ್ಲುತ್ತಿರುವ ಮಕ್ಕಳ ಜಗಲಿಗೆ ನನ್ನ ಧನ್ಯವಾದಗಳು..
........................ ಸಪ್ತಮಿ ಅಶೋಕ್ ದೇವಾಡಿಗ
8ನೇ ತರಗತಿ 
ಶುಭದ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
******************************************     


       ಪ್ರೀತಿಯ ಅಕ್ಕನಿಗೆ ಲಹರಿ ಮಾಡುವ ಪ್ರೀತಿಯ ನಮಸ್ಕಾರಗಳು. ಅಕ್ಕ ನೀವು ಹೇಗಿರುವಿರಿ. ನಾನು ಇಲ್ಲಿ ಸೌಖ್ಯವಾಗಿರುವೆನು. ನಮ್ಮ ಶಾಲಾ ವಾರ್ಷಿಕೋತ್ಸವದ ತಯಾರಿಯು ಭರ್ಜರಿಯಾಗಿ ನಡೆಯುತ್ತಿದೆ. ಇಂದಿನ ಪತ್ರದಲ್ಲಿ ನೀವು ಹೂವಿನ ವ್ಯಾಪಾರಿಗಳ ಘಟನೆಯೊಂದನ್ನು ಬಹಳ ಮನಮುಟ್ಟುವಂತೆ ಹೇಳಿದ್ದೀರಿ. ಈಗಲೂ ಇಂತಹವರು ಇದ್ದಾರೆಂದರೆ ತುಂಬಾ ಸಂತೋಷದ ವಿಚಾರ.... ಇಂತಹ ಒಳ್ಳೆಯ ಜನರಿರುವುದ ರಿಂದಲೇ ಬಹುಶಃ ಇಂದಿಗೂ ಮಳೆ ಬೆಳೆ ಚೆನ್ನಾಗಿ ಆಗುತ್ತಿದೆಯೇನೋ. ಆದರೂ ವಾರ್ತೆಯಲ್ಲಿ ಕೆಲವೊಂದು ಕಡೆ ಸುರಿದ ಭಾರಿ ಮಳೆಯಿಂದಾಗಿ ಅವರು ಅನುಭವಿಸುವ ಕಷ್ಟಗಳನ್ನು ನೋಡಿದಾಗ ಮನಕಲುಕುವುದು. ದೇವರು ಎಲ್ಲರಿಗೂ ಒಳ್ಳೆಯ ಆರೋಗ್ಯ ಮತ್ತು ತೃಪ್ತಿದಾಯಕ ಜೀವನವನ್ನು ಒದಗಿಸಲಿ ಎಂದು ನಾನು ಪ್ರಾರ್ಥಿಸುತ್ತಿರುತ್ತೇನೆ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕ... ಇಂತಿ ನಿಮ್ಮ ಪ್ರೀತಿಯ ಲಹರಿ.
..................................... ಲಹರಿಜಿ.ಕೆ.
ಏಳನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್, ತುಂಬೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************     


      ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. ನೀವು ಹೇಗಿದ್ದೀರಿ. ನಾನು ಚೆನ್ನಾಗಿದ್ದೇನೆ. ನೀವು ಬರೆದ ಪತ್ರ ಬಹಳ ಚೆನ್ನಾಗಿತ್ತು. ಆ ಹೂವಿನ ವ್ಯಾಪಾರಿಗಳ ಪ್ರೀತಿ, ಉದಾರತೆ ಮೆಚ್ಚುವಂತಹುದು. ಈಗಿನ ಈ ಮೋಸ, ವಂಚನೆ ಜಗತ್ತಿನಲ್ಲಿ ಪ್ರೀತಿ, ಔದಾರ್ಯಗಳು ಕಡಿಮೆಯಾಗಿವೆ. ತಾನು ತನ್ನದು ಎಂಬ ಸ್ವಾರ್ಥವೇ ಕಂಡು ಬರುತ್ತಿದೆ. ನಾವು ಒಳ್ಳೆಯವರಾಗಿದ್ದರೆ ನಮಗೆ ಎಂದಿಗೂ ಒಳ್ಳೆಯದಾಗುತ್ತದೆ. ಪ್ರೀತಿ ಮಾನವೀಯತೆ ಇರುವಲ್ಲಿ ಒಳ್ಳೆತನ ಇದ್ದೇ ಇರುತ್ತದೆ. ಅಕ್ಕ ನಾನು ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳೊಂದಿಗೆ....
..................................... ವೈಷ್ಣವಿ ಕಾಮತ್
6ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ.
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************              



   ಎಲ್ಲರಿಗೂ ಜೈ ಶ್ರೀರಾಮ್..... ನಾನು ಪೂಜಾ... ಅಕ್ಕನಿಗೆ ನನ್ನ ನಮಸ್ಕಾರಗಳು. ನೀವು ಹೇಳಿದ ಹಾಗೆ ಶಾಲೆಯನ್ನು ನಾನು ತುಂಬಾ ಸಂಭ್ರಮಿಸುತ್ತೇನೆ. ನೀವು ಹೇಳಿದ ಹಾಗೆ ನಾವು ಈ ಜಗಲಿಯಿಂದ ತುಂಬ ಕಲಿತಿದ್ದೇವೆ. ನಾನು ಕವನ, ಕತೆ, ಚಿತ್ರ ಮಾಡಲು ಕಲಿತೆ. ಹಾಗೆಯೇ ಅಕ್ಕನ ಪತ್ರದಿಂದ ನಾವೆಲ್ಲರೂ ತುಂಬ ವಿಷಯಗಳನ್ನು ಕಳಿತಿದ್ದೇವೆ. ಹೊರ ಜಗತ್ತಿನೊಂದಿಗೆ ಬೆಸೆಯುತ್ತಿರುವ ಈ ವೇದಿಕೆಯು ನಂಗೆ ತುಂಬಾ ಕುಶಿ ಕೊಟ್ಟಿದೆ. ವಾಣಿ ಪೇರಿಯೋಡಿಯವರ ಪ್ರೀತಿಯ ಪುಸ್ತಕ ಉಪಯೋಗಕ್ಕೆ ಬಂದಿದೆ. ಹಾಗೆ ಹಕ್ಕಿ ಕತೆ, ಸ್ಪೂರ್ತಿಯ ಮಾತುಗಳು, ಮಕ್ಕಳ ಕವನಗಳು ಹಾಗೆಯೇ ಬೇರೆ ಬೇರೆ ವಿಷಯಗಳನ್ನು ಈ ಜಗಲಿಯು ತಿಳಿಸಿಕೊಟ್ಟಿದೆ. ಈ ಮಕ್ಕಳ ಜಗಲಿಯು ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸುತತ್ತಾ.... ನನ್ನ ವಂದನೆಗಳು
................................................. ಪೂಜಾ 
ಎಂಟನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


     ನಮಸ್ತೆ ಅಕ್ಕಾ ನಾನು ನಿಭಾ. ನಿಮ್ಮ ಪತ್ರಕ್ಕಾಗಿಯೇ ಕಾಯುತ್ತಿದ್ದೆ ಓದಿ ತುಂಬಾ ಸಂತೋಷವಾಯಿತು. ನೀವು ಹೇಳಿದಂತೆ ಶಾಲೆಯನ್ನು ತುಂಬಾ ಸಂಭ್ರಮಿಸುತ್ತಿದ್ದೇವೆ. ನಾಡಿದ್ದು ಮಕ್ಕಳ ದಿನಾಚರಣೆಯ ದಿನ ನಮಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯುತ್ತವೆ. ಹಾಗೆ ನಮಗೆಲ್ಲ ಎಲ್ಲಿಲ್ಲದ ಸಂತೋಷ. ನೀವು ಹೇಳಿದ ಆ ಸುದ್ದಿ ತುಂಬಾ ಚೆನ್ನಾಗಿತ್ತು ನಮ್ಮವರೇ ಬೇಡ ಎನ್ನುವಂತಹ ಈ ಕಾಲದಲ್ಲಿ ಬೇರೆಯವರ ಕಷ್ಟಕ್ಕೆ ಸಹಕರಿಸುವ ಅವರನ್ನು ಮೆಚ್ಚಲೇಬೇಕು. ಈಗ ಹೇಗಾಗಿದೆ ಎಂದರೆ ನಮ್ಮವರು ಸತ್ತರೆ ಮಾತ್ರ ನೋಡಲು ಬರುವವರು ಸಹ ಇದ್ದಾರೆ. ಅಂಥದರಲ್ಲಿ ಹೀಗೆ ಸಹಾಯ ಮಾಡುವರು ಸಿಗುವುದು ತುಂಬಾ ಕಡಿಮೆ. ನಾವು ಸಹಾಯ ಮಾಡದಿದ್ದರೂ ಪರವಾಗಿಲ್ಲ ಉಪದ್ರವಂತು ಮಾಡಬಾರದು. ಸಹಾಯ ಮಾಡುವವರಿಗೆ ಪ್ರೋತ್ಸಹವಾದರೂ ನೀಡಬೇಕು. ಎಂದು ಹೇಳುತ್ತಾ ಮುಂದಿನ ಪತ್ರದಲ್ಲಿ ಮತ್ತೆ ಸಿಗೋಣ.... ಧನ್ಯವಾದಗಳು.
........................................................ ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************




Ads on article

Advertise in articles 1

advertising articles 2

Advertise under the article