ಮಕ್ಕಳ ಜಗಲಿ - ಕವನ
Sunday, October 30, 2022
Edit
ಕವನ ರಚನೆ : ಮೌಲ್ಯ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಬೆಟ್ಟು
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
ಮಕ್ಕಳ ಜಗಲಿಯು ಪ್ರತಿಭೆಗಳಿಗೆ ಕೈ ಬೀಸಿ ಕರೆಯುವಂತ ಒಂದು ಪತ್ರಿಕೆ. ಇದು ಲಾಕ್ಡೌನ್ ಸಮಯದಲ್ಲಿ ಪ್ರತಿಭೆಗಳಿಗೆ ಅವಕಾಶ ಕೊಟ್ಟಂತಹ ಪತ್ರಿಕೆ ಇದಾಗಿದೆ. ನಾನು ಇಂದು ನನ್ನ ಭಾವನೆಗಳನ್ನು ಈ ಕವನದ ಮೂಲಕ ಹಂಚಿಕೊಳ್ಳುತ್ತೇನೆ..... ಮೌಲ್ಯ
8 ನೇ ತರಗತಿ
ಯಾವತ್ತೂ ಸ್ಮೈಲಿ
ನಕ್ಕಿದರೆ ಜಗತ್ತು ಆಗುವುದೇ ಖಾಲಿ..?
ನಗುವಿಗೆ ಹಾಕಬೇಡಿ ಬೇಲಿ
ಇದ್ದೆವು ಎರಡು ವರ್ಷ ಮನೆಯಲಿ
ಸ್ನೇಹಿತರ ಕೂಡ ಆಡುತಾ ಜೊತೆಯಲಿ
ಕಾಲ ಕೂಡಿ ಬಂತು ಕೊನೆಯಲ್ಲಿ
ಹೆಗಲಲ್ಲಿ ಬ್ಯಾಗು ಬಾಯಲ್ಲಿ ಸಾಂಗು
ಹೇಳುತ್ತಾ ಕುಳಿತೆವು ಶಾಲೆಯಲಿ
ಪುನಃ ಆವರಿಸಿತು ವೈರಸ್ ಆ ಸಮಯದಲ್ಲಿ
ಮನೆಯಲ್ಲೇ ಉಳಿಯಿತು ಬಾಟಾ ಚಪ್ಪಲಿ
ಶಾಲೆಗೆ ಟಾಟಾ ಅಂದೆವು ಬೆಸರದಲಿ.
ಬರವಣಿಗೆಯೂ ಮರೆತುಹೋಯ್ತು ಆ ಕ್ಷಣದಲಿ
ಕಾಡಿತು ವಿದ್ಯೆಯು ಭಾರತಕ್ಕೆ ಮರೆಯಲಿ
ಇನ್ನು ಹೊರಡಲೇಬೇಕೆಂದು ಕಿಚ್ಚು
ಆವರಿಸಿತು ಎಲ್ಲರಲಿ
ಹಾಗೆಯೇ ಪ್ರತಿಭೆಗಳಿಗೆ ಕೈ ಬೀಸಿ ಕರೆಯಿತು
ಆ ಕ್ಷಣದಲಿ
ಅದುವೇ ಪ್ರತಿಭೆಯನು ಪ್ರಕಟಿಸುವ ಪತ್ರಿಕೆ
ಮಕ್ಕಳ ಜಗಲಿ
8 ನೇ ತರಗತಿ
ಸರಕಾರಿ ಪ್ರೌಢಶಾಲೆ ಕಾಬೆಟ್ಟು
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
******************************************