
ರಾಜ್ಯಮಟ್ಟದ ಕವನ ಮತ್ತು ಕಥಾ ಸ್ಪರ್ಧೆ - 2022
Sunday, October 2, 2022
Edit
ಮಕ್ಕಳ ಜಗಲಿ
(ಮಕ್ಕಳಿಗಾಗಿ ಮೀಸಲಾದ ಆನ್ಲೈನ್ ಪತ್ರಿಕೆ )
www.makkalajagali.com
ಎರಡನೇ ವರ್ಷದ ಸಂಭ್ರಮದಲ್ಲಿ
ಪ್ರಥಮ ರಾಜ್ಯಮಟ್ಟದ
ಕವನ ಮತ್ತು ಕಥಾ ಸ್ಪರ್ಧೆ - 2022
◾ಫಲಿತಾಂಶ ಪ್ರಕಟ : ನವಂಬರ್ 14 , 2022
◾ಹಾಗೂ ಅತ್ಯುತ್ತಮ ಹತ್ತು ಕಥೆ ಮತ್ತು ಹತ್ತು ಕವನಗಳಿಗೆ ಮೆಚ್ಚುಗೆ ಪ್ರಶಸ್ತಿ ಪತ್ರಗಳು
◾ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪ್ರಮಾಣ ಪತ್ರ ನೀಡಲಾಗುವುದು.
◾ಸ್ಪರ್ಧೆಗಳು : ಕವನ ಮತ್ತು ಕಥಾಸ್ಪರ್ಧೆ
◾ಕವನದ ವಿಷಯ : ನಿಮ್ಮ ಆಯ್ಕೆಯ ವಿಷಯ
◾ಕವನ ಕನಿಷ್ಠ 12 ಸಾಲುಗಳು ಗರಿಷ್ಠ 20 ಸಾಲುಗಳು
◾ಕಥೆಯ ವಿಷಯ : ನಿಮ್ಮ ಆಯ್ಕೆಯ ವಿಷಯ
◾ಕಥೆ A4 ಅಳತೆಯ ಪೇಪರಲ್ಲಿ 2 ಪುಟವನ್ನು ಮೀರ ಬಾರದು
◾ಸ್ಪರ್ಧೆಗಳು : ಕವನ ಮತ್ತು ಕಥಾಸ್ಪರ್ಧೆ
◾ಕವನದ ವಿಷಯ : ನಿಮ್ಮ ಆಯ್ಕೆಯ ವಿಷಯ
◾ಕವನ ಕನಿಷ್ಠ 16 ಸಾಲುಗಳು ಗರಿಷ್ಠ 24 ಸಾಲುಗಳು
◾ಕಥೆಯ ವಿಷಯ : ನಿಮ್ಮ ಆಯ್ಕೆಯ ವಿಷಯ
◾ಕಥೆ A4 ಅಳತೆಯ ಪೇಪರಲ್ಲಿ 3 ಪುಟವನ್ನು ಮೀರ ಬಾರದು
2. ಭಾಗವಹಿಸುವ ಸ್ಪರ್ಧಿಗಳು ಅತ್ಯುತ್ತಮವಾದ 1 ಕಥೆ ಮತ್ತು 1 ಕವನವನ್ನು ಮಾತ್ರ ಕಳುಹಿಸಲು ಅವಕಾಶ.
3. ಸ್ಪರ್ಧಿಗಳು ಕಳುಹಿಸುವಾಗ ಒಂದು ಮೂಲ ಪ್ರತಿಯೊಂದಿಗೆ 3 ಜೆರಾಕ್ಸ್ ಪ್ರತಿಗಳನ್ನು ಕಳುಹಿಸಬೇಕು
4. ಸ್ಪರ್ಧಿಗಳು ಕವನ ಅಥವಾ ಕಥೆಯನ್ನು ಸ್ವಂತ ಕಲ್ಪನೆಯಲ್ಲಿ ಯಾರದೇ ಸಹಾಯವಿಲ್ಲದೆ ರಚನೆ ಮಾಡಿರಬೇಕು.
5. ಓದಿದ ಕಥೆ, ಕವನಗಳು ಅಥವಾ ಯಾರೋ ಹೇಳಿದ , ಕಥೆ, ಕವನಗಳನ್ನು ಬರೆದು ಕಳುಹಿಸಬಾರದು. ನಕಲು ಕೃತಿಗಳನ್ನು ಪರಿಗಣಿಸುವುದಿಲ್ಲ.
6. ವಿದ್ಯಾರ್ಥಿಗಳು ಸ್ವಂತವಾಗಿ ರಚನೆ ಮಾಡಿರುವುದನ್ನು ಶಾಲೆ/ಕಾಲೇಜಿನ ಮುಖ್ಯಸ್ಥರು ಶಾಲಾ ಮೊಹರು, ಸಹಿಯೊಂದಿಗೆ ದೃಢೀಕರಿಸಿರಬೇಕು.
7. ಸ್ವಂತವಾಗಿ ಬರೆದ ಕಥೆ - ಕವನಗಳ ಹಾಳೆಯ ಹಿಂಬದಿಯಲ್ಲಿ ಶಾಲೆ/ ಕಾಲೇಜಿನ ಮುಖ್ಯಸ್ಥರು ದೃಡೀಕರಿಸದಿದ್ದರೆ ಅಂತಹ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
8. ರಾಜಕೀಯ /ಧರ್ಮ / ಜಾತಿ / ವ್ಯಕ್ತಿ ನಿಂದನೆ ಯ ಬರಹಗಳಿಗೆ ಅವಕಾಶವಿಲ್ಲ.
9. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
10. ಬರಹಗಳ ಮೂಲಪ್ರತಿ, 3 ಜತೆ ಜೆರಾಕ್ಸ್ ಪ್ರತಿಯನ್ನು ಅಂಚೆ ಮೂಲಕ
ಮಕ್ಕಳ ಜಗಲಿ : ಕಥೆ ಮತ್ತು ಕವನ ಸ್ಪರ್ಧೆ - 2022
ತಾರಾನಾಥ್ ಕೈರಂಗಳ
ಚಿತ್ರಕಲಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Pin : 574 323
Mob: 9844820979
+919980223736
2. ರಮೇಶ್ ನಾಯ್ಕ ಉಪ್ಪುಂದ
+919448887713
3. ಶಿವಕುಮಾರ್ ಎಂ.ಜಿ.
9964499583
4. ಅರವಿಂದ ಕುಡ್ಲ
+919844898124
5. ಅಬ್ದುಲ್ ಮಜೀದ್ ಎಸ್
+919535522717
6. ವಿಜಯಾ ಶೆಟ್ಟಿ ಸಾಲೆತ್ತೂರು
7892587191
7. ತೇಜಸ್ವಿ ಅಂಬೆಕಲ್ಲು
+919480345799
8. ತುಳಸಿ ಕೈರಂಗಳ
9480288214
9. ವಿದ್ಯಾಕಾರ್ಕಳ
+917619447371
*******************************************
ಕೊರೋನ ಸಮಯದ ಸಂಧಿಗ್ಧತೆಯು ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ನಮ್ಮ ನಿತ್ಯದ ಚಟುವಟಿಕೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಒಟ್ಟಾಗಿ ಹೇಳುವುದಾದರೆ ಹೊಸತೊಂದು ಹುಡುಕಲು ಅಥವಾ ಪರ್ಯಾಯವಾಗಿ ಶೋಧಿಸಲು ಕಾರಣವಾಗಿದೆ.
ಮಕ್ಕಳ ಶೈಕ್ಷಣಿಕ ವ್ಯವಸ್ಥೆಯಲ್ಲಿ ಏರು ಪೇರುಗಳಾಗಿ ಡಿಜಿಟಲ್ ಪದ್ಧತಿ ಸಾಧಕ ಬಾಧಕಗಳ ನಡುವೆಯೇ ಪಾಠ ಬೋಧನೆಗಳನ್ನು ನಡೆಸಬೇಕಾದ ಅನಿವಾರ್ಯತೆ ಎದುರಾದಂತಹ ಸಂದರ್ಭದಲ್ಲಿ ಮಕ್ಕಳು ನಿತ್ಯ ಕಲಿಕಾ ಚಟುವಟಿಕೆಯಿಂದ ಇರಬೇಕಾದುದನ್ನು ಮನಗಂಡು ಕಂಡುಕೊಂಡ ಫಲವೇ ಮಕ್ಕಳ ಜಗಲಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು, ಈ ಗ್ರಾಮೀಣ ಭಾಗದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುವ ಯೋಜನೆಯನ್ನು ರೂಪಿಸಲಾಯಿತು. ವಿವಿಧ ಸ್ಪರ್ಧೆಗಳ ಮೂಲಕ ಹಾಗೂ ವೀಕೆಂಡ್ ಟಾಸ್ಕ್ ಅನ್ನುವ ವೈವಿಧ್ಯ ಚಟುವಟಿಕೆಯ ಮೂಲಕ ಮಕ್ಕಳು ನಿರಂತರವಾಗಿ ಭಾಗವಹಿಸುವುದನ್ನು ಗಮನಿಸಿಕೊಳ್ಳಲಾಯಿತು. ಮಕ್ಕಳ ಆಸಕ್ತಿ ಕುತೂಹಲಗಳನ್ನು ಗಮನಿಸಿ ಒಂದು ಹೆಜ್ಜೆ ಮುಂದುವರಿದಂತೆ ಮಕ್ಕಳ ಪತ್ರಿಕೆಯನ್ನು ನಡೆಸುವ ಚಿಂತನೆ ಆರಂಭವಾಯಿತು. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗಳಿಗೆ ಪೂರಕವಾಗುವಂತೆ ಮಕ್ಕಳ ಜಗಲಿ ಪತ್ರಿಕೆಯನ್ನು ಆರಂಭಿಸುವ ಎಲ್ಲಾ ನಿರ್ಧಾರಗಳು ಸರಿಯಾದ ದಿಕ್ಕಿನಲ್ಲೇ ಸಾಗಿತು.
ಮಕ್ಕಳ ಜಗಲಿ ಇದು ಮಕ್ಕಳಿಗಾಗಿ ಮೀಸಲಾದ ಇ-ಪತ್ರಿಕೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ವೈವಿಧ್ಯ ಪ್ರಾಕಾರಗಳಲ್ಲಿ ಪ್ರಕಟ ಪಡಿಸಲು ಇರುವಂತಹ ವೇದಿಕೆ. ಮಕ್ಕಳ ಸ್ವರಚಿತ ಕಥೆ, ಲೇಖನ, ಕವನ, ಆರ್ಟ್ ಮತ್ತು ಕ್ರಾಪ್ಟ್ ಹೀಗೆ ಹಲವಾರು ಮಕ್ಕಳ ಸೃಜನಾತ್ಮಕ ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳಿಗೆ ಪ್ರೇರಣೆ ನೀಡಲು ಸಹಕಾರಿಯಾಗಬಲ್ಲುದು.
ಹಳೆ ಶೈಲಿ ಮನೆಗಳಲ್ಲಿ ಹೆಚ್ಚಾಗಿ ಮನೆ ಮುಂದೆ ಜಗಲಿ ಇರುತ್ತಿತ್ತು. ಮನೆಮಕ್ಕಳೆಲ್ಲಾ ಜಗಲಿ ಮೇಲೆ ಕುಳಿತು ಬರೆಯುವುದು, ಓದುವುದು, ಹಾಡುವುದು, ರಂಗೋಲಿ ಬಿಡಿಸುವುದು, ಕಲ್ಲಾಟವಾಡುವುದು ಹೀಗೆ ಹಲವು ಚಟುವಟಿಕೆಗಳಿಗೆ ಅದುವೇ ವೇದಿಕೆ. ನನ್ನಂತಹ ಅನೇಕರಿಗೆ ಜೀವನದ ಹಲವು ಮೈಲುಗಲ್ಲುಗಳನ್ನು ಯಶಸ್ವಿಯಾಗಿ ದಾಟಲು ಮನೆ ಜಗಲಿ ಪ್ರೇರಣೆ ನೀಡಿದೆ. ಜಗಲಿ ಮಾಯವಾಗಬಾರದು, ಅದನ್ನು ಮತ್ತೆ ಕಟ್ಟಬೇಕೆಂದು ಕನಸು.
ಮಂಚಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲ ವಿಟ್ಲ, ವಿಜ್ಞಾನ ಶಿಕ್ಷಕರಾದ ಶ್ರೀ ವಿ. ಶ್ರೀರಾಮಮೂರ್ತಿ, ಸಹೋದ್ಯೋಗಿ ಬಂಧುಗಳು, ಶಾಲಾ ಎಸ್.ಡಿ.ಎಂ.ಸಿ, ಶಾಲಾ ಮಕ್ಕಳು, ಜಗಲಿಯ ಕನಸಿಗೆ ಸಾಕ್ಷಿಗಳು. ಸೃಜನಶೀಲ ಚಿಂತನೆಗಳಿಗೆ ರೂಪ ಕೊಟ್ಟಂತಹ ಶಿಕ್ಷಣ ಚಿಂತಕ ಗೋಪಾಡ್ಕರ್, ಸ್ಪೂರ್ತಿಯಾಗಿರುವ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ, ಪ್ರೇರಣೆಯನ್ನು ನೀಡುತ್ತಾ ಬಂದಿರುವ ಕಲಾವಿದ, ಸಾಹಿತಿ ದಿನೇಶ ಹೊಳ್ಳ, ತಾಂತ್ರಿಕ ಸಹಕಾರ ನೀಡುತ್ತಿರುವ ಪತ್ರಕರ್ತ ಮಿತ್ರರಾದ ವಿನೋದ್ ಪುದು, ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಜ್ಞಾನೇಶ್, ಮಾರ್ಗದರ್ಶಕರಾದ ಶ್ರೀ ವೈ ಶಿವರಾಮಯ್ಯ, ಶಿವಪ್ರಕಾಶ ಎನ್ ಇವರೆಲ್ಲ ಕನಸಿನ ಜಗಲಿಯ ಪಾಲುದಾರರು.
ಮಕ್ಕಳ ಜಗಲಿಯನ್ನು ಎಲ್ಲರ ಮನ ಮನೆಗಳಿಗೆ ತಲುಪಿಸಬೇಕೆಂದು ನಮ್ಮ ಗುರಿಯಾಗಿದೆ. ಈ ಸಂದರ್ಭದಲ್ಲಿ ಶೀರ್ಷಿಕೆ ಗೀತೆಯನ್ನು ನಿರ್ಮಿಸಿ ಪ್ರಸಾರ ಮಾಡುವ ಆಲೋಚನೆ ಮೂಡಿತು. ಸಾಹಿತಿ ಚಂದ್ರಶೇಖರ ಪಾತೂರು ಬರೆದ ಸಾಹಿತ್ಯಕ್ಕೆ ಮಂಗಳೂರಿನ ಕೋಣಾಜೆ ವಿಶ್ವ ಮಂಗಳ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಅದ್ಭುತವಾಗಿ ಹಾಡಿದಳು. ಪುತ್ತೂರಿನ ಮಕ್ಕಳ ಮಂಟಪದ ಅನೇಕ ಪುಟಾಣಿಗಳು ಈ ದೃಶ್ಯ ಸಂಯೋಜನೆಯಲ್ಲಿ ಹಾಡಿ ನಲಿದರು. ಮಕ್ಕಳ ಜಗಲಿಯ ಹಾಡು ಎಲ್ಲರನ್ನು ತಲುಪುವ ಮೂಲಕ ಜಗಲಿಗೆ ಬರೆಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿತು.
ಮಕ್ಕಳ ಜಗಲಿ ಅದು ನಿಮ್ಮ ಮನೆಯ ಮಕ್ಕಳ ಜಗಲಿ. ಇಲ್ಲಿ ಸಣ್ಣ ಮಕ್ಕಳಿಂದ ಪಿ.ಯು.ಸಿವರೇಗೆ ಕಲಿಯುತ್ತಿರುವ ಮಕ್ಕಳಿಗೆ ಅವಕಾಶ ನೀಡುತ್ತಿದ್ದೇವೆ. ಎಲ್ಲಾ ಮನೆಯ ಮಕ್ಕಳೂ ಶ್ರೇಷ್ಠರೇ. ಅವರಿಗೆ ಅವಕಾಶ ಕೊಡಬೇಕಾಧದ್ದು ಹಿರಿಯರಾದ ನಮ್ಮ ಕರ್ತವ್ಯ. ಆ ಮೂಲಕ ಪ್ರತಿಯೊಂದು ಮನೆಯ ಮಕ್ಕಳನ್ನು ಜಗಲಿಯಲ್ಲಿ ಸ್ವತಂತ್ರವಾಗಿ ಬೆಳೆಯಲು ಬಿಡಿ ಎಂದು ನಮ್ಮ ಬೇಡಿಕೆ.
2020ನೇಯ ನವೆಂಬರ್ 14ರ ಮಕ್ಕಳದಿನಾಚರಣೆಯಂದು ಉದ್ಘಾಟನೆಗೊಂಡು ಮಕ್ಕಳ ಪ್ರತಿಭಾ ವೇದಿಕೆಯಾಗಿ ಗುರುತಿಸಿಕೊಂಡಿತು. ದ.ಕ. ಜಿಲ್ಲೆಗೆ ಮಾತ್ರ ಮೀಸಲಿದ್ದ ಈ ವೇದಿಕೆ ಈಗ ವಿಸ್ತಾರಗೊಂಡು ರಾಜ್ಯದ ವಿವಿಧ ಜಿಲ್ಲೆಗಳಿಗೂ ವ್ಯಾಪಿಸಿದೆ. ಹೊರ ರಾಷ್ಟದಲ್ಲಿ ವಾಸವಿರುವ ಭಾರತೀಯ ವಿದ್ಯಾರ್ಥಿಗಳೂ ಮಕ್ಕಳ ಜಗಲಿಗೆ ಬೆರೆಯುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಪ್ರತಿಭಾನ್ವಿತ ಮಕ್ಕಳು ಬೆಳೆಯಬೇಕೆಂದು ನಮ್ಮ ಉದ್ದೇಶ. ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂದು ಪ್ರೋತ್ಸಾಹದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ಜಗಲಿ ಸದಾ ಸಿದ್ದವಾಗಿದೆ.
.................................. ತಾರಾನಾಥ್ ಕೈರಂಗಳ
ದಕ್ಷಿಣ ಕನ್ನಡ ಜಿಲ್ಲೆ
9844820979
******************************************