
ಪ್ರೀತಿಯ ಪುಸ್ತಕ : ಸಂಚಿಕೆ - 23
Friday, September 9, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 23
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ...... ಒಂದು ಬೀಜದ ಕಥೆ. ಇದರಲ್ಲಿ ಬರಹವೇ ಇಲ್ಲ. ಚಿತ್ರಗಳನ್ನೇ ನೋಡುತ್ತಾ ಕಥೆ ಓದಬೇಕು. ನಮಗೆ ನಾವೇ ಓದಿಕೊಳ್ಳಬೇಕು. “ಒಂದು ಬೀಜ ಬಿತ್ತುವುದು ಎಂದರೆ ಪ್ರೀತಿ, ಕಾಳಜಿಯ ಸಂಕೇತ. ಹೊಸದರ ನಿರೀಕ್ಷೆ. ದಿನವೂ ಹೊಸ ಹೊಸ ಅಚ್ಚರಿ. ಹೀಗೆ… ಅಸಂಖ್ಯಾತ ಸಾಧ್ಯತೆಗಳ ಮೆರವಣಿಗೆ. "ಇನ್ಯಾಕೆ ತಡ? ಬಿತ್ತೋಣ, ಬೆಳೆಯುವ ಗಿಡದೊಂದಿಗೆ ನಾವೂ ಬೆಳೆಯೋಣ.” ಎಂದು ಕರೆ ನೀಡುತ್ತದೆ ಈ ಪುಸ್ತಕ. ಬೀಜ ಮೊಳಕೆಯೊಡೆದು ಬೆಳೆಯುತ್ತಾ ಹೋಗುವ ಸಹಜವಾದ ಚಿತ್ರಣಗಳು ಇಲ್ಲಿ ಇವೆ. ಪ್ರತಿ ಪುಟದಲ್ಲೂ ಚಿತ್ರವಿದ್ದು, ಸಾಕಷ್ಟು ಖಾಲಿ ಜಾಗ ಕೂಡಾ ಇದೆ. ನಿಮಗೆ ಬೇಕೆನಿಸಿದರೆ ನೀವು ನಿಮ್ಮದೇ ಕಥೆ ಬರೆದುಕೊಳ್ಳಬಹುದು. ಅಷ್ಟೇ ಅಲ್ಲ, ನೀವೂ ಇಂತಹ ಒಂದು ವಿಚಾರ ಇಟ್ಟುಕೊಂಡು ಚಿತ್ರಪುಸ್ತಕ ತಯಾರಿಸಬಹುದು.
‘ಎಲ್ಲರ ಪುಸ್ತಕದ‘ ನಾಲ್ಕನೆಯ ಪುಸ್ತಕ ಇದು. ಈ ಹಿಂದೆ ಇದೇ ಪ್ರಕಾಶಕರ ‘ನವಿಲೂರ ಸಂತೆ’ ಪುಸ್ತಕ ಪರಿಚಯ ಮಾಡಿದ್ದೆನಲ್ಲಾ, ನೆನಪಿರಬಹುದು. ಈ ಪುಸ್ತಕ ತಯಾರಿಸಿದ ಶ್ವೇತಾ ಮಕ್ಕಳ ಜೊತೆಗೆ ಬೆರೆಯಲು ಇಷ್ಟಪಡುವವರು. ಒಳ್ಳೆಯ ಕಲಾವಿದೆ ಕೂಡಾ.
ಚಿತ್ರ ಕಥೆ : ಶ್ವೇತಾ ಜಿ ನಂಬಿಯಾರ್
ಪ್ರಕಾಶಕರು: ಎಲ್ಲರ ಪುಸ್ತಕ (9141184535)
ಬೆಲೆ: ರೂ.85
ವಯಸ್ಸಿನ ಮಿತಿಯೇ ಇಲ್ಲ.. ಚಿತ್ರ ಓದಬೇಕು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************