ಪ್ರೀತಿಯ ಪುಸ್ತಕ : ಸಂಚಿಕೆ - 22
Friday, September 2, 2022
Edit
ಪ್ರೀತಿಯ ಪುಸ್ತಕ
ಸಂಚಿಕೆ - 22
ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ....... ವಾಣಿ ಪೆರಿಯೋಡಿ
ಪ್ರೀತಿಯ ಮಕ್ಕಳೇ.... “ಒಂದು ಪುಟ್ಟ ಹುಡುಗಿ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಅವಳು ತನ್ನ ಮಿತ್ರರನ್ನು ಹುಡುಕುತ್ತಿದ್ದಳು. ಅವಳಿಗೆ ಒಂದು ಗೂಬೆ ಸಿಕ್ಕಿತು.. ಊದಾ ಬಣ್ಣದ ಗರಿ ಒಂದನ್ನು ನೆಲದ ಮೇಲೆ ಹಾಕಿತು.. ಪುಟ್ಟ ಹುಡುಗಿ ಆ ಗರಿಯನ್ನು ತನ್ನ ಕೂದಲಿನೊಳಗೆ ಇಟ್ಟುಕೊಂಡಳು. ತಕ್ಷಣ ಅವಳು ಗರಿಗಳು ತುಂಬಿರುವ ಸ್ಥಳದಲ್ಲಿ ಇದ್ದಳು..” ಕಥೆ ಹೀಗೆ ಶುರುವಾಗುತ್ತದೆ. ಪುಟ್ಟ ಕಥೆ.. ಮಾಯದ ಗರಿಯ ಜೊತೆಗೆ ಮಾಯದ ಸ್ಥಳಗಳಿಗೆ ಅವಳ ಪ್ರಯಾಣ ನಡೆಯುತ್ತದೆ. ಪ್ರತಿಯೊಂದು ಪುಟದಲ್ಲೂ ಆಕರ್ಷಕ ಚಿತ್ರಗಳು ತುಂಬಿಕೊಂಡಿವೆ. ಮಕ್ಕಳು ಚಿತ್ರಗಳನ್ನೇ ನೋಡಿಕೊಂಡು ಆನಂದಿಸುವ ಹಾಗೆ ಇದೆ. ಕಡಿಮೆ ಬರಹ ಇದೆ. ಎಂತೆಂತಹುದೋ ಲೋಕದ ಕಲ್ಪನೆಗಳಿವೆ. ರೋಮಾ ಸಿಂಗ್ ಅವರು ಮೊದಲು ಚಿತ್ರಗಳನ್ನು ಬರೆದು ಅದಕ್ಕೆ ತಕ್ಕಂತೆ ಕಥೆ ಹೆಣೆದಿದ್ದಾರೆ. ನೀವು ನೋಡಿದರೆ, ಓದಿದರೆ ಒಂದು ಮಾಯಾ ಲೋಕಕ್ಕೆ ಹೋದ ಅನುಭವ ಸಿಗುವುದು ಖಂಡಿತ. ನೀವೂ ಇಂತಹ ಒಂದಷ್ಟು ಕಲ್ಪನೆ ಮಾಡಿ ನಿಮ್ಮದೇ ಮಾಯಾ ಲೋಕ ಕೂಡಾ ಸೃಷ್ಟಿಸಬಹುದು. ಓದುತ್ತೀರಿ ತಾನೇ?
ಲೇಖಕರು: ರೋಮಾ ಸಿಂಗ್
ಅನುವಾದ: ಶಾಲಿನಿ ಜಯಕುಮಾರ್
ಪ್ರಕಾಶಕರು: ತುಲಿಕಾ
ಬೆಲೆ: ರೂ.100/
ನಾಲ್ಕು ವಯಸ್ಸಿನ ಮಕ್ಕಳಿಗಾಗಿ ಇದೆ. ಚಿಕ್ಕ ಮಕ್ಕಳೂ ಚಿತ್ರ ನೋಡಿ ಆನಂದಿಸಬಹುದು.
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು
ಬೀಡು, ಕಳ್ಳಿಗೆ ಅಂಚೆ,
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************