ಚಿತ್ರಕಥೆ : ಸಂಚಿಕೆ -11 ಇಲಿಮರಿ ಮತ್ತು ಬೆಣ್ಣೆ ತುಂಡು
Wednesday, September 28, 2022
Edit
ನಿನಾದ್ ಕೈರಂಗಳ
5ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಒಂದು ಹಳ್ಳಿಯಲ್ಲಿ ಒಂದು ಇಲಿಯ ಮನೆ ಇತ್ತು. ಮನೆಯಲ್ಲಿ ಅದು ತುಂಬಾ ತುಂಟತನ ಮಾಡುತ್ತಿತ್ತು. ಒಂದು ದಿವಸ ಇಲಿಗೆ ತುಂಬಾ ಹಸಿವಾಗುತ್ತಿತ್ತು. ಪಕ್ಕದಲ್ಲಿ ಒಂದು ದೊಡ್ಡ ಮನೆ ಇತ್ತು. ಇಲಿ ಆ ಮನೆಗೆ ಹೋಗಿ ಅಲ್ಲಿ ನೋಡಿದಾಗ ಅಲ್ಲಿ ಒಂದು ದೊಡ್ಡ ಬೆಣ್ಣೆ ತುಂಡು ಇತ್ತು. ಇಲಿ ಬೇಗ ಹೋಗಿ ಆ ಬೆಣ್ಣೆಯನ್ನು ತಿನ್ನುತ್ತಾ ಇತ್ತು.
ಅಲ್ಲಿ ಒಂದು ಬೆಕ್ಕು ಇತ್ತು. ಬೆಕ್ಕು ಇಲಿಯನ್ನು ತಿನ್ನಲಿಕ್ಕೆ ಅಂತ ಹೋದಾಗ ಇಲಿ ಬೆಣ್ಣೆಯನ್ನು ಬೆಕ್ಕಿನ ಮುಖಕ್ಕೆ ಬಿಸಾಡಿತು. ಬೆಕ್ಕಿಗೆ ಬೆಣ್ಣೆ ಎಂದರೆ ಇಷ್ಟವಿರಲಿಲ್ಲ ಬೆಕ್ಕು ಅದನ್ನು ನೆಕ್ಕಿದಾಗ ಅದು ಅಲ್ಲಿಯೇ ವಾಂತಿ ಮಾಡಿತು. ಅದನ್ನು ನೋಡಿದ ಇಲಿಗೆ ತುಂಬಾ ಖುಷಿಯಾಯಿತು. ಮನೆಯ ಮಾಲಿಕ ಬಂದು ನೋಡಿದಾಗ ಅಲ್ಲಿ ಬೆಕ್ಕು ವಾಂತಿ ಮಾಡುತ್ತಿತ್ತು. ಮನೆಯ ಮಾಲಿಕ ಬೆಕ್ಕಿಗೆ ಸರಿ ಪೆಟ್ಟು ಕೊಡುವುದನ್ನು ನೋಡಿ ಇಲಿ ಬಿದ್ದು ಬಿದ್ದು ನಗಾಡಿತು. ನಂತರ ಇಲಿ ಅಲ್ಲಿಯೇ ಬಿದ್ದಿದ್ದ ಬೆಣ್ಣೆ ತುಂಡನ್ನು ಹಿಡಿದುಕೊಂಡು ಓಡಿ ಹೋಯಿತು.
5ನೇ ತರಗತಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************