-->
ಅಕ್ಕನ ಪತ್ರ - 27ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 27ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 27ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


     ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ ........  
ಅಕ್ಕನ ಪತ್ರ ‌ ಸಂಚಿಕೆ 27ಕ್ಕೆ ಶಿಶಿರನ ಉತ್ತರ
       ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಓದಿ ತುಂಬಾ ಸಂತೋಷವಾಯಿತು. ಏಕೆಂದರೆ ನೀವು ಹಿರಿಯ ಕವಿ ಡಿ.ವಿ.ಜಿ ಯವರ ಸರಳ ಜೀವನ ಮೌಲ್ಯಗಳ ಬಗ್ಗೆ ಬರೆದಿದ್ದೀರಿ. ಇವರ ಬಗ್ಗೆ ನಮಗೆ ಎಂಟನೇಯ ತರಗತಿಯಲ್ಲಿ "ಸಾರ್ಥಕ ಬದುಕಿನ ಸಾಧಕ" ಎಂಬ ಪಾಠವಿತ್ತು. ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದಾಗ ಡಿ.ವಿ.ಜಿಯವರು ಯುವ ಪತ್ರಕರ್ತರಾಗಿದ್ದರು. ದಸರಾ ಉತ್ಸವದ ವಿಶೇಷ ವರದಿ ನೀಡಿದಕ್ಕಾಗಿ ವಿಶ್ವೇಶ್ವರಯ್ಯನವರು ಸರ್ಕಾರದ ವತಿಯಿಂದ ನೀಡಿದ ಸಂಭಾವನೆಯನ್ನು ನಿರಾಕರಿಸಿ ವರದಿ ಮಾಡುವುದು ಪತ್ರಕರ್ತರ ಕರ್ತವ್ಯ ಎಂದು ಹೇಳಿದ್ದರು. ಇದು ನಮಗೆ ಇದ್ದ ಪಾಠದಿಂದ ತಿಳಿಯಿತು. ಇಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯಾದರೂ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದ ಆದರ್ಶ ವ್ಯಕ್ತಿಯ ಬಗ್ಗೆ ಬರೆದಿದ್ದೀರಿ. ನಿಮಗೆ ಧನ್ಯವಾದಗಳು ಅಕ್ಕ. ಒಂದು ವಾರದ ಮಳೆಯ ರಜೆಯೊಂದಿಗೆ ನಾನು ಸಂಭ್ರಮಿಸುತ್ತಾ ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ.
............................................... ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
      ನಮಸ್ತೆ ಅಕ್ಕ..... ನಾನು ಶ್ರಾವ್ಯ.... ಡಿ ವಿ ಜಿ ಎಂದಾಗ ಪಕ್ಕನೆ ನೆನಪಿಗೆ ಬರುವುದು ಮಂಕುತಿಮ್ಮನ ಕಗ್ಗ.‌ ಸರಳತೆಯನ್ನು ಸಾರಿರುವ ಕಗ್ಗ ತನ್ನದೇ ಆದ ಶ್ರೇಷ್ಠತೆ ಹೊಂದಿದೆ. ಅವರ ಕೃತಿಗಳ‌ ಬಗ್ಗೆಯಷ್ಟೇ ತಿಳಿದಿದ್ದ ನಮಗೆ ಅವರ ಸರಳ ವ್ಯಕ್ತಿತ್ವದ ಬಗ್ಗೆ ನೀವು ತಿಳಿಸಿರುವ ಮಾಹಿತಿ ಅವರ ಬಗೆಗಿನ ಅಭಿಮಾನವನ್ನು ‌ ಇನ್ನಷ್ಟು ಹೆಚ್ಚಿಸಿದೆ. ಪ್ರಸ್ತುತ ದಿನಗಳಲ್ಲಿ ಹೆಸರು‌ ಗೌರವ ಪ್ರಶಸ್ತಿ ಪ್ರಚಾರಕ್ಕಾಗಿ ಹಂಬಲಿಸುತ್ತಿರುವ ಮನಸ್ಸುಗಳ ನಡುವೆ , ಇದೆಲ್ಲದರರಿಂದಲೂ ಹಿಂದೆ ಉಳಿಯುತ್ತಿದ್ದ ಸರಳ ವ್ಯಕ್ತಿತ್ವದ ಡಿ ವಿ ಜಿ ನಮಗೆ ಮಾದರಿ ಎನಿಸುತ್ತಾರೆ. ಪ್ರಸ್ತುತ ದಿನಗಳಲ್ಲಿ‌‌ ಕಳೆದು‌‌ಹೋಗುತ್ತಿರುವ ಮೌಲ್ಯಗಳ ನಡುವೆ, ಇಂತಹ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜೊತೆಗೆ ಮಂಕುತಿಮ್ಮನ ಕಗ್ಗ ಸಾರಿರುವ ಮೌಲ್ಯವನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳುವುದರ ಅಗತ್ಯವೂ ಹೆಚ್ಚಿದೆ. ಧನ್ಯವಾದಗಳು ಅಕ್ಕಾ......
............................................... ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************    


      ನಮಸ್ತೇ ಅಕ್ಕ...... ನಾನು ಬಿಂದುಶ್ರೀ.... ನೀವು ಇವತ್ತು ಡಿ ವಿ ಜಿ ಯ ಜೀವನ ದ ಕಥೆ ಯನ್ನು ಹೇಳಿದ್ದಿರಿ. ನಾನು ಅವರ ಹೆಸರುನ್ನು ಕೇಳಿದ್ದೀನಿ. ಅವರ ಕಗ್ಗವನ್ನು ಓದಿದ್ದೇನೆ. ಆದರೆ ಅವರ ಜೀವನ ಹೇಗಿತ್ತು ಎಂದು ಗೊತ್ತಿರಲಿಲ್ಲ. ಅಕ್ಕ..... ನೀವು ಅವರ ಬಗ್ಗೆ ಬರೆದಿದ್ದರಿಂದ ಗೊತ್ತಾಯಿತು.     ............................................... ಕೆ ಬಿಂದುಶ್ರೀ  
ಪ್ರಥಮ ಪಿಯುಸಿ
ವಿವೇಕಾನಂದ ಕಾಲೇಜು ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


     ನಮಸ್ತೆ ಅಕ್ಕ...... ನಾನು ನಿಮ್ಮ ಒಲವಿನ ತಂಗಿ ಧೃತಿ. ಹೇಗಿದ್ದೀರಾ.... ಪತ್ರವನ್ನು ಓದಿದೆ . ಬಹಳ ಚೆನ್ನಾಗಿತ್ತು. ಡಿವಿಜಿಯವರ ಮಂಕುತಿಮ್ಮನ ಕಗ್ಗಗಳನ್ನು ನಾನು ಓದಿದ್ದೇನೆ ಹಾಗೂ ಇತರರಿಂದ ಕೇಳಿದ್ದೇನೆ. ಬಹಳ ಚೆನ್ನಾಗಿ ಬರೆಯುತ್ತಾರೆ. ಅವರು ಬರೆದ ಪದ್ಯವನ್ನು ಒಮ್ಮೆ ಓದಿದೆ. ಅರ್ಥವಾಗಲಿಲ್ಲ, ಮತ್ತೆ ಪದಗಳ ಅರ್ಥವನ್ನು ಹುಡುಕಿ ತಿಳಿದುಕೊಂಡೆ. ನಂತರ ಓದಿದೆ ಅರ್ಥವಾಯಿತು. ಅಂದರೆ ಅವರು ಬರೆದಂತಹ ಮಂಕುತಿಮ್ಮನ ಕಗ್ಗ ಹೇಗೆಂದರೆ ಆ ಕಗ್ಗದಲ್ಲಿ ಅರ್ಥಪೂರ್ಣತೆಯ ವಾಕ್ಯವು ಅದರಲ್ಲಿತ್ತು. ನಮಗೆ ನಮ್ಮ ಕನ್ನಡ ಸರ್ ಪಾಠ ಮಾಡುವಾಗ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಆಗಾಗ ಹೇಳುತ್ತಿರುತ್ತಾರೆ. ಅವರದ್ದು ಒಂದು ಪಾಠ ಸಹ ಇತ್ತು. ಇನ್ನೊಂದು ವಿಷಯ ನನಗೆ ತಿಳಿದಿದ್ದೇನೆಂದರೆ , ಅವರ ಸರಳತೆ ಮತ್ತು ಗುಣನಡತೆ. ಎಷ್ಟೊಂದು ಸರಳವಾದ ಭಾವ. ನಾವು ಸಹ ಅವರಂತೆ ಆಗದಿದ್ದರೂ ಅವರ ಗುಣ ನಡತೆಯನ್ನು ಸ್ವಲ್ಪವಾದರೂ ನಮ್ಮ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸೋಣ. ಧನ್ಯವಾದಗಳೊಂದಿಗೆ 
............................................... ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


       ಮಕ್ಕಳ ಜಗಲಿಯ ಸರ್ವರಿಗೂ ಆತ್ಮೀಯ ಶುಭ ನಮನಗಳು.... ನಾನು ಪ್ರಿಯ. ಅಬ್ಬಬ್ಬಾ..!! ಎಂಥಾ ಮಳೆ..!! ಇಂತಹ ಮಳೆಯಲ್ಲೂ ಮನೆಯಲ್ಲಿ ಕುಳಿತು ಅಕ್ಕನ ಪ್ರೀತಿಯ ಪತ್ರಕ್ಕೆ ಉತ್ತರ ಬರೆಯುವಲ್ಲಿ ನಮ್ಮ ಚಿತ್ತ... ಅಕ್ಕಾ... ನಿಮ್ಮ ಇಂದಿನ ಪತ್ರ ನನಗೆ ತುಂಬಾ ಖುಷಿ ನೀಡಿತು. ಕಾರಣವೇನೆಂದರೆ ನಿಮ್ಮ ಇಂದಿನ ಪತ್ರದಲ್ಲಿ ಬಹಳ ಮೇರು ವ್ಯಕ್ತಿತ್ವ ದವರಾದಂತಹ ಡಿ.ವಿ.ಜಿ ಯವರ ಜೀವನ ಗಾಥೆಯನ್ನು ಬಹಳ ಅಲಂಕಾರಿಕವಾಗಿ ವರ್ಣಿಸಿದ್ದೀರಿ...
ನಾವೆಲ್ಲರೂ ಸಣ್ಣ ತರಗತಿಯಲ್ಲಿ ಓದುತ್ತಿರುವಾಗ ಡಿ.ವಿ.ಜಿ ಯವರ ಕುರಿತು ಪಾಠ ಓದುತ್ತಿದ್ದೆವು...
ಆದರೆ ನಿಮ್ಮ ಈ ಲೇಖನ ದ ಮೂಲಕ ಅವರ ಬಗ್ಗೆ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿಯುವಂತಾಯ್ತ... ನಾವು ಕೂಡಾ ಡಿ.ವಿ.ಜಿ ಯವರ ಜೀವನದ ಅನೇಕ ಸಂಸ್ಕೃತಿ , ಮೌಲ್ಯಗಳನ್ನು ನಮ್ಮ ಜೀವನದಲ್ಲೂ ರೂಡಿಸಿಕೊಳ್ಳೋಣ ಎಂದು ಹೇಳುತ್ತಾ...
ಇಂಥ ಗಣ್ಯರ ಬಗ್ಗೆ ನಮಗೆ ತಿಳಿಸಿದಕ್ಕಾಗಿ ನಿಮಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ...
............................................... ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************     ನಮಸ್ತೆ ಅಕ್ಕಾ... ನಾನು ನಿಭಾ.... 
ಕಳೆದ ಕೆಲವು ದಿನಗಳಿಂದ ನಿಮ್ಮ ಪತ್ರಗಳನ್ನು ಓದಿಯೂ ಕಾರಣಾಂತರಗಳಿಂದ ಪ್ರತ್ಯುತ್ತರ ನೀಡಲಾಗಲಿಲ್ಲ. ಕ್ಷಮೆ ಇರಲಿ. ನಿಮ್ಮ ಈ ಪತ್ರ ಓದಿ ತುಂಬಾ ಖುಷಿ ಆಯಿತು. ನಾನು ಕೂಡ ಡಿ.ವಿ.ಜಿ ಅವರ ಅಭಿಮಾನಿ. ನನಗೂ ಅವರ ಸರಳತೆ ವ್ಯಕ್ತಿತ್ವ ತುಂಬಾ ಇಷ್ಟವಾಯಿತು. ಅವರಂತಹ ಮಹಾನ್ ವ್ಯಕ್ತಿತ್ವ ಇರುವ ಇನ್ನೊಬ್ಬ ವ್ಯಕ್ತಿ ಇರಲಾರ. ಅಂತಹ ವ್ಯಕ್ತಿತ್ವ ಡಿ.ವಿ.ಜಿಯವರದು. ನಾನು 8 ನೇ ತರಗತಿಯಲ್ಲಿ ಅವರ ಬಗ್ಗೆ ಅಧ್ಯಯನವನ್ನೂ ಮಾಡಿದ್ದೇನೆ. ಹಾಗೆಯೇ ಅಕ್ಕಾ ನಿಮ್ಮ ಮಾತುಗಳು ಅರಿವಿನೊಳಗೆ ಪಸರಿಸಿದಾಗ ಬದುಕು ವಾಸ್ತವದತ್ತ ಹೊರಳುತ್ತದೆ. ಧನ್ಯವಾದಗಳು
............................................... ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು 
ಪ್ರೌಢ ಶಾಲಾ ವಿಭಾಗ ಪುತ್ತೂರು
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


      ಮಕ್ಕಳ ಜಗಲಿಯ ವೃಂದಕ್ಕೆ ನಮಸ್ಕಾರಗಳು...
ನಾನು ಪೂರ್ತಿ. ಮಳೆಗಾಲದ ಸಮಾಚಾರದದಲ್ಲಿ... ಮಕ್ಕಳ ಜಗಲಿಯ ಅಕ್ಕನ ಪತ್ರಕ್ಕೆ ನಾ ಬರೆಯುತ್ತಿರುವ ನುಡಿಗಳು... ಪ್ರತಿ ದಿನಾಲೂ ಯಾವುದಾದರೂ ಹೊಸತೊಂದನ್ನು ನಮ್ಮೊಂದಿಗೆ ಹಂಚಿಕೊಳ್ಳುವ ನಿಮಗೆ ನನ್ನ ಪ್ರೀತಿಯ ಧನ್ಯವಾದಗಳನ್ನು ಅರ್ಪಿಸಲು ಇಚ್ಚಿಸುತ್ತೇನೆ..... "ಮಂಕು ತಿಮ್ಮನ ಕಗ್ಗ" ಎಂಬ ತಮ್ಮ ಕಾವ್ಯ ದಿಂದ ಪ್ರಸಿದ್ದಿ ಪಡೆದ ಹಿರಿಯರಾದ ಡಿ.ವಿ.ಜಿ ಯವರ ಜೀವನದ ಕಥನವನ್ನು ನಮಗೆ ತಿಳಿಸುವುದರ ಮೂಲಕ ಅವರ ವ್ಯಕ್ತಿತ್ವ ವನ್ನ ನಮಗೆ ಪರಿಚಯಿಸಿದ್ದೀರಿ ನಿಮಗೆ ಧನ್ಯವಾದಗಳು... ಇಂತಹ ಅದ್ಭುತವಾದ ವ್ಯಕ್ತಿಯ ಕಥೆಯನ್ನು ಓದಿ ನಂಗೆ ತುಂಬಾ ಸಂತೋಷವಾಯಿತು... ನಿಮ್ಮ ಮುಂದಿನ ಪತ್ರದ ಬರಹಕ್ಕಾಗಿ ಕಾಯುತ್ತಿರುತ್ತೇನೆ... ವಂದನೆಗಳು....
............................................... ಪೂರ್ತಿ 
9ನೇ ತರಗತಿ.
ಸರಕಾರಿ ಪ್ರೌಢಶಾಲೆ ನಾರಾವಿ.
ದಕ್ಷಿಣ ಕನ್ನಡ ಜಿಲ್ಲೆ , ಬೆಳ್ತಂಗಡಿ ತಾಲೂಕು.
******************************************
ಮಕ್ಕಳ ಜಗಲಿ..... ಅಕ್ಕನ ಪತ್ರ:27-----
      ಪ್ರೀತಿಯ ಅಕ್ಕನಿಗೆ ಲಹರಿಯು ಮಾಡುವ ಪ್ರೀತಿಯ ನಮನಗಳು..... ಡಿವಿಜಿಯವರ ಕಗ್ಗ ಹಾಗೂ ಅವರ ಬದುಕಿನ ಕೆಲವು ಘಟನೆಗಳನ್ನು ಎಷ್ಟೊಂದು ಸುಂದರವಾಗಿ ಹೇಳಿದ್ದೀರಿ..... ನಿಜಕ್ಕೂ ಡಿವಿಜಿಯವರು ಅದ್ಭುತ ಲೇಖಕರೇ ಸರಿ..... ಅವರ ಜೀವನವು ಸರಳವಾಗಿ ಬದುಕುವವರಿಗೆ ಮಾದರಿ ಆಗಿದೆ.... "ನಾನೇನು ಅಲ್ಲ , ಎಲ್ಲವೂ ನೀನೆ; ನನ್ನದೇನೇನೂ ಇಲ್ಲ ಎಲ್ಲವೂ ನಿನ್ನದೇ" ಎಂದು ತಮ್ಮ ಜೀವನವನ್ನೇ ಭಗವಂತನಿಗೆ ಅರ್ಪಿಸಿದ ಮಹಾನ್ ಜನಗಳ ಸಾಲಿಗೆ ಸೇರುತ್ತಾರೆ ಡಿವಿಜಿಯವರು.... ನನಗೂ ಮಳೆ ತುಂಬಾ ಇಷ್ಟ ಅಕ್ಕ... ಆದರೆ ಈಗ ಹೊರಗೆ ಹೋಗುವ ಹಾಗಿಲ್ಲವಲ್ಲ..... ಅಲ್ಲಿ.... ಇಲ್ಲಿ .....ಎಲ್ಲಿ ನೋಡಿದರೂ ನೀರೇ ನೀರು ಕಾಣುವುದು.... ಇಂದಿನ ನಿಮ್ಮ ಲೇಖನ ಓದುವಾಗ ಮಳೆಗಾಲದಲ್ಲಿ ಬಿಸಿ ಬಿಸಿಯಾದ ವಡೆ ತಿಂದಷ್ಟೇ ಸಂತೋಷವಾಯಿತು ಅಕ್ಕ.... ಧನ್ಯವಾದಗಳು ಅಕ್ಕ.... ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುವೆನು. ಇಂತಿ ನಿಮ್ಮ ಪ್ರೀತಿಯ ಲಹರಿ.
............................................... ಲಹರಿ ಜಿ.ಕೆ.
7ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್. ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************
     ಪ್ರೀತಿಯ ಅಕ್ಕನಿಗೆ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು..... ಅಕ್ಕಾ ನೀವು ಹೇಗಿದ್ದೀರಿ.....? ನಾನು ಚೆನ್ನಾಗಿದ್ದೇನೆ. ಮಳೆಗೆ ಸಿಕ್ಕಿದ ರಜೆಯಿಂದ ತುಂಬಾ ಬೋರಾಯಿತು. ನೀವು ಕಳಿಸಿದ ಪತ್ರದಲ್ಲಿ 
ಡಿ.ವಿ.ಜಿಯವರ ಆದರ್ಶ ಮೌಲ್ಯಗಳನ್ನು ತಿಳಿದುಕೊಳ್ಳುವಂತಾಯಿತು.... ಈಗಿನ ಈ ಸಮಾಜದಲ್ಲಿ ನಾವು ಆದರ್ಶ ಮೌಲ್ಯಗಳನ್ನು ಹುಡುಕುವುದೇ ಕಷ್ಟವಾಗಿದೆ. ಎಷ್ಟೋ ಹಿರಿಯರು ಸ್ವಾಭಿಮಾನದಿಂದ ತಮ್ಮ ಬದುಕನ್ನು ನಡೆಸಿದರು. ಎಷ್ಟೇ ಕಷ್ಟಗಳಿದ್ದರೂ, ಅದನ್ನು ತೋರ್ಪಡಿಸದೆ ಜೀವನಕ್ಕೊಂದು ಅರ್ಥವನ್ನು ಕಲ್ಪಿಸಿದರು. ನಾವು ಕೂಡ ಹಿರಿಯರು ಹಾಕಿಕೊಟ್ಟ ಪಥದಲ್ಲಿ ಸಾಗಬೇಕು. ಆಗಲೇ ಬದುಕಿಗೊಂದು ಅರ್ಥ. ಸ್ವಾಭಿಮಾನ ಇರುವವರು ಯಾವತ್ತೂ ಯಾರ ಮುಂದೆಯೂ ತಲೆ ತಗ್ಗಿಸುವುದಿಲ್ಲ. ಹೇಗೆ ಬಂತು ಹಾಗೆ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಬದುಕಿನ ನಿಜವಾದ ಆನಂದವನ್ನು ಸವಿಯುತ್ತಾರೆ. ಈ ಮೌಲ್ಯಗಳು ನಮ್ಮದಾಗಲಿ. ಧನ್ಯವಾದಗಳೊಂದಿಗೆ
............................................... ವೈಷ್ಣವಿ ಕಾಮತ್
5ನೇ ತರಗತಿ 
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ. 
ಬಂಟ್ವಾಳ ತಾಲೂಕು ,  ದಕ್ಷಿಣ ಕನ್ನಡ ಜಿಲ್ಲೆ.
******************************************      ನಮಸ್ತೇ.... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು.
   ಮಳೆ ಬಂದರೆ ತುಂಬಾ ಸಂತೋಷವೇ, ಆದರೆ ಈಗಿನ ಮಳೆಯಿಂದ ಎಲ್ಲಾ ಕಡೆ ಜನರಿಗೆ , ರೈತರಿಗೆ ತುಂಬಾ ತೊಂದರೆಯಾಗಿದೆ. ಮಕ್ಕಳಿಗೆ ಇದರ ಸಲುವಾಗಿ ರಜೆ ಘೋಷಿಸಿ ಶಾಲೆಗೆ ಹೋಗದೇ ತುಂಬಾ ಕಷ್ಟವಾಗುತ್ತದೆ. ಡಿ.ವಿ. ಜಿ ಯವರ ಸಮಾಜದ ಮೇಲಿನ ಪ್ರೀತಿ, ಕಾಳಜಿಯು ಇದರಿಂದ ತಿಳಿಯುತ್ತದೆ. ನಮ್ಮ ತಾಯ್ನಾಡಿನಲ್ಲಿ ಇಂತಹ ವ್ಯಕ್ತಿಗಳು ಜನಿಸಿರುವುದು ನಮಗೆ ಹೆಮ್ಮೆಯ ವಿಷಯ. "ಇನ್ನೊಬ್ಬರಿಗೆ" ಕಾಣಲು ಮಾಡುವುದಕ್ಕಿಂತ ನಮ್ಮ ಸಂತೋಷಕ್ಕೆ ಮತ್ತು ಬೇರೆಯವರಿಗೆ ಉಪಕಾರವಾಗುವಂತೆ ನಾವು ಸಹಾಯ ಮಾಡಬಹುದು ಎಂಬುದನ್ನು ಅವರಿಂದ ಕಲಿಯಬಹುದು. ಧನ್ಯವಾದಗಳು ಅಕ್ಕಾ,
........................................ಸಾತ್ವಿಕ್ ಗಣೇಶ್ 
8ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
******************************************
       


    ನಮಸ್ತೆ ಅಕ್ಕಾ...... ನಾನು ರಕ್ಷಿತಾ.... ನಾವು ಚೆನ್ನಾಗಿದ್ದೇವೆ ನೀವು ಹೇಗಿದ್ದೀರ.... ನೀವು ಬರೆದ ಡಿ. ವಿ. ಜಿ ಯವರ ಪುಟ್ಟದೊಂದು ಕಥೆಯು ನನ್ನ ಮನಸ್ಸಿಗೆ ತಂಬಾ ಸಂತೋಷ ನೀಡಿದೆ. ಇದರಿಂದ ಡಿ. ವಿ. ಜಿ ರವರ ಬಗ್ಗೆ ತಿಳಿದಂತಾಯಿತು. ಅವರ ಮನೋಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಡಿ. ವಿ. ಜಿ ರವರ ಬಗ್ಗೆ ಅಷ್ಟೊಂದು ತಿಳಿಯದ ನನಗೆ ಅವರ ಜೀವನಶೈಲಿ ಯನ್ನು ನೋಡಿ ಅವರ ಬಗ್ಗೆ ತಿಳಿಯಬೇಕೆಂದೆನಿಸಿದೆ. ಮನೆಯಲ್ಲಿ ಕಷ್ಟದ ಕಾಲವಿದ್ದರೂ ಪರರಿಗೆ ಸಹಾಯ ಮಾಡುವ ಡಿ. ವಿ. ಜಿ ರವರ ಗುಣ ನನಗೆ ಬಹಳ ಇಷ್ಟವಾಯಿತು. ಮುಂದಿನ ಪತ್ರ ಕ್ಕಾಗಿ ಕಾಯುತ್ತಿರುತ್ತೇನೆ.... ಧನ್ಯವಾದಗಳು
............................................... ರಕ್ಷಿತಾ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಾಣಿಲ ಮುರುವ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


      ಪ್ರೀತಿಯ ಅಕ್ಕನಿಗೆ ಹಿತಾಶ್ರೀ ಮಾಡುವ ನಮನಗಳು. ಅಕ್ಕಾ... ನೀವು ಬರೆಯುವ ಎಲ್ಲಾ ಪತ್ರದಲ್ಲಿ ಒಂದೊಂದು ರೀತಿಯ ಅರ್ಥವಿದೆ. ಅದು ನಮಗೆ ಸ್ಪೂರ್ತಿಯನ್ನು ತುಂಬುತ್ತದೆ. ನೀವು 27ನೇ ಸಂಚಿಕೆಯಲ್ಲಿ ಬರೆದದ್ದು ಡಿ.ವಿ.ಜಿ ಯವರ ಬಗ್ಗೆ. ನನಗೆ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಇಂದು ನಿಮ್ಮ ಪತ್ರವನ್ನು ಓದಿ ನನಗೆ ಅವರ ಬಗ್ಗೆ ತಿಳಿಯಿತು. ಡಿವಿಜಿಯವರು ಯಾವತ್ತು ಯಾವುದಕ್ಕೂ ಆಸೆ ತೋರಿಸಲಿಲ್ಲ. ಆದ್ದರಿಂದ ಅವರು ಉತ್ತಮ ರೀತಿಯಲ್ಲಿ ಪ್ರಸಿದ್ಧಿಯಾದರು ಇದು ನಮಗೆ ಮಾದರಿ. ಅವರು ತನ್ನ ಸಣ್ಣ ಪುಟ್ಟ ಸಾಧನೆಯ ಹೊಗಳಿಕೆಗೆ ಪಾತ್ರರಾದವರಲ್ಲ. ಎಂಬುವುದು ತಿಳಿಯುತ್ತದೆ. ವಂದನೆಗಳು.
............................................... ಹಿತಶ್ರೀ ಪಿ.
7 ನೇ ತರಗತಿ
ಶ್ರೀ ವೇಣುಗೋಪಾಲ ಅ. ಹಿ.ಪ್ರಾ.ಶಾಲೆ 
ಪಕಳಕುಂಜ ಮಾಣಿಲ
ಬಂಟ್ಟಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************


Ads on article

Advertise in articles 1

advertising articles 2

Advertise under the article