-->
ಪ್ರೀತಿಯ ಪುಸ್ತಕ : ಸಂಚಿಕೆ - 17

ಪ್ರೀತಿಯ ಪುಸ್ತಕ : ಸಂಚಿಕೆ - 17

ಪ್ರೀತಿಯ ಪುಸ್ತಕ
ಸಂಚಿಕೆ - 17

       ಮಕ್ಕಳಿಗೆ ಆಟ ಇಷ್ಟ. ಸುತ್ತಾಟ ಇಷ್ಟ. ಚಿತ್ರ ಇಷ್ಟ. ತಿಂಡಿ ಇಷ್ಟ. ಕತೆ ಇಷ್ಟ. ಹೊಸ ಹೊಸ ಅನುಭವ ಇಷ್ಟ. ಪುಸ್ತಕ ಇಷ್ಟ. ಅಲ್ಲವೇ..... ನಿಮಗಾಗಿ ಸುಂದರವಾದ ಪುಸ್ತಕಗಳ ಪರಿಚಯ ಮಾಡುವುದು ನನಗೆ ತುಂಬಾ ಇಷ್ಟ.. ಓದಿ ನೋಡಿ.. ನಿಮ್ಮ ಅನಿಸಿಕೆ ಹೇಳಿ. 

                          ನಾವು ಜಾಗರೂಕರಾಗೋಣ
      ಪ್ರೀತಿಯ ಮಕ್ಕಳೇ..... ಕಲಬೆರಕೆ ಬಗ್ಗೆ ನಿಮಗೆ ಗೊತ್ತೇ...? ಈ ಪುಸ್ತಕ ಬಹಳ ಚೆನ್ನಾಗಿ ಕುಟುಂಬದ ಕಥೆ ಒಂದನ್ನು ಹೇಳುವ ರೀತಿಯಲ್ಲಿ ಕಲಬೆರೆಕೆಯ ಬಗ್ಗೆ ಉತ್ತಮ ಮಾಹಿತಿ ಕೊಡುತ್ತದೆ. ಈ ಕಥೆಯ ಮುಖ್ಯವ್ಯಕ್ತಿ ನಾಣಿಯಮ್ಮ ಸಾಕ್ಷರತಾ ಶಾಲೆಗೆ ಹೋಗಿ ಬಹಳಷ್ಟು ವಿಷಯ ತಿಳಿದುಕೊಂಡಿದ್ದಾರೆ. ತಾವು ತಿಳಿದುಕೊಂಡದ್ದನ್ನು ತಮ್ಮ ಕುಟುಂಬದವರಿಗೆ ತಿಳಿಸಿಕೊಡುತ್ತಾರೆ. ಅಕ್ಕಿ, ಬೇಳೆ ಕಾಳುಗಳಿಗೆ ಅದಕ್ಕೆ ಸರಿಹೊಂದುವ ರೀತಿಯಲ್ಲಿ ಕಲ್ಲು ಮರಳು ಸೇರಿಸುತ್ತಾರೆ ಎಂಬುದನ್ನು ನಾಣಿಯಮ್ಮ ಗುರುತಿಸಬಲ್ಲವರು. ಅಂಗಡಿಗೆ ಹೋದಾಗ ರಶೀದಿ ಪಡೆದುಕೊಳ್ಳುವುದು ಯಾಕೆ ಮುಖ್ಯ, ಆ ರಶೀದಿಯನ್ನು ಸ್ವಲ್ಪ ಸಮಯ ಜೋಪಾನವಾಗಿ ಯಾಕೆ ಇರಿಸಿಕೊಳ್ಳಬೇಕು ಎಂಬುದನ್ನು ಅನುಭವ ಸಮೇತವಾಗಿ ತೋರಿಸಿಕೊಡಬಲ್ಲರು ನಾಣಿಯಮ್ಮ. ಚಹಾ ಫುಡಿಗೆ ಹಳೆಯ ಚಹಾ ಪುಡಿ ಅಥವಾ ಮದರಂಗಿ ಸೇರಿಸುವುದು, ಕಾಫಿ ಪುಡಿಗೆ ಹುಣಸೇ ಬೀಜ, ಖರ್ಜೂರದ ಬೀಜ ಸೇರಿಸುವುದು – ಮುಂತಾದುವುಗಳನ್ನು ಮೊಮ್ಮಗನಿಗೆ ಹೇಳಿಕೊಡುತ್ತಾರೆ ನಾಣಿಯಮ್ಮ. ಅಂದರೆ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಅಥವಾ ಇತರ ದಿನಬಳಕೆಯ ವಸ್ತುಗಳಲ್ಲಿ ನಮಗೆ ಗೊತ್ತಾಗದ ಹಾಗೆ ಏನೇನೋ ಬೆರೆಸುತ್ತಾರೆ, ಜನರಿಗೆ ಮೋಸ ಮಾಡಿ ಹೆಚ್ಚಿನ ಲಾಭ ಪಡೆಯುತ್ತಾರೆ. ನಾಣಿಯಮ್ಮ ಹೇಳುವ ವಿಚಾರಗಳ ಬಗ್ಗೆ ನಿಮಗೂ ಕುತೂಹಲ ಹುಟ್ಟಿರಬಹುದಲ್ಲವೇ....? ಓದಿ ನೋಡುವಿರಾ...?
ಪಿ.ವಿ. ಕೃಷ್ಣನ್ ಅವರ ಚಿತ್ರಗಳೂ ಕಥೆಗೆ ಒಪ್ಪುವ ರೀತಿಯಲ್ಲಿ ಇವೆ.
ಲೇಖಕರು: ಎನ್. ಕೆ. ಸತ್ಯಪಾಲನ್
ಅನುವಾದ: ರುಕ್ಮಿಣಿ ಪಿ.ಕೆ ವಿಶ್ವಕರ್ಮ 
ಚಿತ್ರಗಳು: ಪಿ.ವಿ. ಕೃಷ್ಣನ್   
ಪ್ರಕಾಶಕರು: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ   
ಬೆಲೆ: ರೂ.8 (ಬಹಳ ಹಿಂದಿನ ಪುಸ್ತಕ, ಬೆಲೆ ಬದಲಾಗಿರಲೂ ಬಹುದು)
ಏಳು ಎಂಟನೇ ತರಗತಿಯ ಮಕ್ಕಳು ತಾವೇ ಓದಿಕೊಳ್ಳಬಹುದು. 
............................... ವಾಣಿ ಪೆರಿಯೋಡಿ, 
ಕಲಾವಿದೆ ಹಾಗೂ ಸಾಮಾಜಿಕ ಕಾರ್ಯಕರ್ತರು 
ಬೀಡು, ಕಳ್ಳಿಗೆ ಅಂಚೆ, 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
PH: +91 94484 81340
******************************************


Ads on article

Advertise in articles 1

advertising articles 2

Advertise under the article