ಹಬ್ಬಗಳು ನಮ್ಮನ್ನು ಮಗುವನ್ನಾಗಿಸಲಿ...
Monday, May 2, 2022
Edit
ರೆಹಮಾನ್ ಖಾನ್ ಕುಂಜತ್ತಬೈಲ್
ಸಂಚಾಲಕರು , ರಂಗ ಸ್ವರೂಪ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
+91 98808 35659
ಹಬ್ಬಗಳು ಬರುವಾಗ ಮನುಷ್ಯ ಮನಸ್ಸು ಮಗುವಿನಂತಾಗುತ್ತದೆ. ಎಲ್ಲಾ ಜಂಜಡಗಳನ್ನ ಮರೆತು ಒಂದಷ್ಟು ಹೊತ್ತು ಮಕ್ಕಳಾಗೋಣ, ಖುಷಿ ಅನುಭವಿಸೋಣ ಅನ್ನೊ ಆಸೆ ಬಾರದ ಮನುಷ್ಯನಿರಲಾರ. ಆಧ್ಯಾತ್ಮಿಕವಾಗಿ ಎತ್ತರಕ್ಕೇರಿದ ಮನುಷ್ಯರು ಆಚರಿಸುವ ಹಬ್ಬಕ್ಕೂ ನಮ್ಮ ನಿಮ್ಮಂತ ಸಾಮಾನ್ಯ ಜನರು ಆಚರಿಸುವ ಹಬ್ಬಕ್ಕೂ ಮಾನಸಿಕವಾಗಿ ವ್ಯತ್ಯಾಸ ಇರಬಹುದಾದರೂ ಈ ಜಗತ್ತು ಗುರುತಿಸಲ್ಪಡೋದು, ಬೆರೆತಿರೋದು ಸಾಮಾನ್ಯ ಜನರ ಬದುಕು, ಖುಷಿ, ಆನಂದ ಸಾಮರಸ್ಯದೊಂದಿಗೆ ಎಂಬುದು ನಮಗೆ ಗೊತ್ತಿದೆ. ಹಬ್ಬಗಳನ್ನು ಆಚರಿಸಲು ನಿರ್ದೇಶನ ನೀಡಿದ ದಾರ್ಶನಿಕರ ಮಾರ್ಗದರ್ಶನದಲ್ಲಿ ಸಾಮರಸ್ಯ, ಪ್ರೀತಿ, ಕರುಣೆ, ಪರಸ್ಪರ ಸಹಾಯದ ಗಳಿಗೆಗಳು ಬರುತ್ತಲಿರಬೇಕು ಎಂಬ ಮರ್ಮವೇ ಅಡಗಿದೆ.
ಇಂದು ಬಸವ ಜಯಂತಿ ಮಾನವ ಕುಲಕ್ಕೆ ಸಾರ್ವಕಾಲಿಕ ಮೌಲ್ಯಗಳನ್ನು ನೀಡಿದ ಬಸವಣ್ಣನವರ ಸಂದೇಶಗಳು ಇಡೀ ಮನುಕುಲಕ್ಕೆ ಕ್ಷೇಮವನ್ನು, ಮೋಕ್ಷವನ್ನು ಕಲ್ಪಿಸುತ್ತದೆ ಎಂಬ ಅರಿವು ನಮಗೆ ಬಂದರೆ ನಾಮ ಹಲವು ದೇವನೊಬ್ಬನೆ ಎಂಬ ತತ್ವವನ್ನು ಅಳವಡಿಸಲು ನಮಗೆ ಕಷ್ಟವಿಲ್ಲ.
ಸದಾ ಜಂಜಡಗಳಲ್ಲೆ ಬದುಕುವ ಮನುಷ್ಯ ಆಯುಷ್ಯ ಹೆಚ್ಚಾದಂತೆ ದುಗುಡ , ದುಮ್ಮಾನ, ನೋವು, ಕೋಪ ಹೆಚ್ಚಿಸಿಕೊಳ್ಳುತ್ತಾನೆಯೇ ಹೊರತು ಪ್ರಬುದ್ಧತೆ ಗೆ ಅನುಗುಣವಾಗಿ ತನ್ನ ಮನಸ್ಸನ್ನು ಸ್ಥಿರಪಡಿಸಲು ವಿಫಲವಾಗುವುದನ್ನೇ ಕಾಣಬಹುದು. ಹಾಗಾಗಿ ನಾವು ನಮ್ಮೊಳಗಿನ ಮಗುವನ್ನು ಯಾವತ್ತು ಕೊಲ್ಲಬಾರದು. ನಮ್ಮೊಳಗೊಂದು ಮಗು ಮನಸ್ಸು ಸದಾ ಇರಲೇಬೇಕು. ಮಗುವಾದಾಗ ನಮ್ಗೆ ಎಲ್ಲರನ್ನೂ ಪ್ರೀತಿಸಲು, ಬೇಧಭಾವ ಮರೆತು ಜೀವಿಸಲು ಸುಲಭ.
ಅರಿಷಡ್ವರ್ಗಗಳ ಮೂಟೆಯಾಗಿರುವ ಮನುಷ್ಯನಿಗೆ ಈದುಲ್ ಫಿತ್ರ್, ಬಸವ ಜಯಂತಿ ಆ ದೌರ್ಬಲ್ಯವನ್ನು ಹತೋಟಿಯಲ್ಲಿಟ್ಟು ಬದುಕಲು, ಇತರರಿಗೆ ಕೇಡನ್ನು ಬಯಸದೆ ಜೀವಿಸಲು, ಪ್ರೇರಣೆ ನೀಡಲಿ ಎಂದು ಬಯಸೋಣ.
ಸಂಚಾಲಕರು , ರಂಗ ಸ್ವರೂಪ
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
+91 98808 35659
*******************************************