-->
ಅಕ್ಕನ ಪತ್ರ - 24ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 24ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 24ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1


  ಮಕ್ಕಳ ಜಗಲಿಯಲ್ಲಿ......... ಮಕ್ಕಳಿಗೆ ಬಹಳ ಆಪ್ತವಾದ ತೇಜಸ್ವಿ ಅಂಬೆಕಲ್ಲು ಇವರು ಬರೆಯುತ್ತಿರುವ ಅಕ್ಕನ ಪತ್ರ ವಿದ್ಯಾರ್ಥಿಗಳಲ್ಲಿ ಕಾಳಜಿಯನ್ನು ಮೂಡಿಸುವ ಪ್ರಯತ್ನವಾಗಿದೆ. ಓದುವ ಅಭಿರುಚಿ ಹಾಗೂ ಬರೆಯುವ ಕೌಶಲ್ಯ ಬೆಳೆಸಬೇಕೆನ್ನುವುದು ಮಕ್ಕಳ ಜಗಲಿಯ ಉದ್ದೇಶ...... ಜಗಲಿಯಲ್ಲಿ ಅನೇಕ ಮಕ್ಕಳು ನಿರಂತರವಾಗಿ ಬರೆಯುತ್ತಿದ್ದು ಬರೆಯುವ ಇನ್ನಷ್ಟು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ವಿದ್ಯಾರ್ಥಿಗಳ ಸ್ವ- ಅನಿಸಿಕೆಯನ್ನು ಭಾವನಾತ್ಮಕವಾಗಿ ಬರೆದು ಕಳುಹಿಸಿದ ಪತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ........  
 
        ನಮಸ್ತೇ ಅಕ್ಕ...... ನಾನು ಶ್ರಾವ್ಯ.... ನಾವು ಬರೆದ ಕಳೆದ ಬಾರಿಯ ಪತ್ರ ನಿಮಗೆ ಖುಷಿ ನೀಡಿದೆ ಎಂದು ತಿಳಿದು ಆನಂದವಾಯಿತು. ನಮ್ಮ-ನಿಮ್ಮ ಸಂಬಂಧ ಈ ಪತ್ರದ ಮೂಲಕ ಇನ್ನೂ ಗಟ್ಟಿ ಹಾಗೂ ಆತ್ಮೀಯವಾಗುತ್ತಿರುವುದು ನಮಗೂ ಖುಷಿಯ ವಿಚಾರ. ಪ್ರತೀ ಬಾರಿಯಂತೆ ಈ ಬಾರಿಯೂ ನಮ್ಮ ಮುಂದೆ ಒಂದು ಒಳ್ಳೆಯ ಮೌಲ್ಯ ಸಾರುವ ವಿಚಾರವನ್ನು ಪ್ರಸ್ತಾಪಿಸಿರುವಿರಿ. ಹೌದು ಅಕ್ಕ, ಅನಿವಾರ್ಯಕ್ಕಾಗಿ ಆರಂಭವಾದ ಮೊಬೈಲ್ ಬಳಕೆ ಈಗ ತನ್ನ ಮಿತಿಯನ್ನು ಮೀರುತ್ತಿದೆ. ಮೊಬೈಲ್ ಎನ್ನುವ ಭೂತ ಏನೋ ಮೋಡಿ ಮಾಡಿಬಿಟ್ಟಿದೆ. ಬೇರೆಯವರನ್ನು ಬೆರಳು ಮಾಡಿ ಹೇಳುವ ಬದಲು, ನಮ್ಮನ್ನೇ ನಾವು ಸರಿ ಗಮನಿಸಿದಾಗ ತಿಳಿಯುತ್ತದೆ, ನಾವೆಷ್ಟು ಸಮಯವನ್ನು ಮೊಬೈಲ್ ನೋಡುತ್ತಾ ಕಳೆಯುತ್ತಿದ್ದೇವೆ ಎಂದು. ಅದನ್ನು ಬದಿಗಿಡುವ ಯೋಚನೆ ಬಂದರೂ ನಮ್ಮಿಂದಲೇ ಅದರಿಂದ ದೂರ ಬರಲಾರದಂತಹ ಸಂದರ್ಭ ಈಗ ಸೃಷ್ಟಿಯಾಗಿದೆ. ಎಷ್ಟೋ ಬಾರಿ ಬೇಡ - ಬೇಡ ಎಂದಾಗಲೂ ಅದೇ ತನ್ನಡೆಗೆ ಮನಸ್ಸು ವಾಲುವಂತೆ ಮಾಡುತ್ತದೆ. ನಿಜಕ್ಕೂ ಇದರ ಅತಿಯಾದ ಬಳಕೆ ಮನಸ್ಸಿಗೂ- ಆರೋಗ್ಯಕ್ಕೂ ದುಷ್ಪರಿಣಾಮ ಬೀರುವುದಂತೂ ಖಂಡಿತ. ನಾವೇಕೆ ಮೊಬೈಲ್ ನೋಡಲು ಬಳಸುವ ಸಮಯವನ್ನು ಬೇರಾವುದೋ ಒಳ್ಳೆ ಕಾರ್ಯಕ್ಕೆ ಬಳಕೆಯಾಗುವಂತೆ ಮಾಡಬಾರದು. ಒಳ್ಳೆ ಅಭ್ಯಾಸ ಬೆಳೆಸಿಕೊಳ್ಳುವುದು ಎಷ್ಟು ಕಠಿಣವೋ, ಅದೇ ರೀತಿ ಕೆಟ್ಟ ಅಥವಾ ಒಳಿತಲ್ಲದ ಕೆಲಸದಿಂದ ಹಿಂದೆ ಸರಿಯುವುದು ನಿಜಕ್ಕೂ ಬಲು ಕಠಿಣ. ಹೇಗಾದರೂ ಮಾಡಿ ಮನಸ್ಸನ್ನು ಮೊಬೈಲ್ ಕಡೆ ವಾಲದಂತೆ ತಡೆ ಹಿಡಿಯೋಣ'ಮೊಬೈಲ್ ಬದಲು ಪುಸ್ತಕ,'ಹಿರಿಯರು, ನೆರೆ ಹೊರೆಯ ಗೆಳೆಯರು ' ಹೀಗೆ ಹಲವರೊಂದಿಗಿನ ಸಂಬಂಧ ಗಟ್ಟಿಗೊಳಿಸೋಣ 'ಮೊಬೈಲ್ ನಿಂದ ದೂರಬರೋಣ. ಸ್ನೇಹ-ಪ್ರೀತಿ ಸಂಪಾದಿಸೋಣ........ ಅಕ್ಕ ನಿಮ್ಮ ಮೌಲ್ಯಯುತ ಮಾತು ನಮ್ಮೊಂದಿಗಿರಲಿ... ಧನ್ಯವಾದಗಳು......
....................................... ಶ್ರಾವ್ಯ 
ಪ್ರಥಮ ಪಿ.ಯು. ಸಿ
ಶ್ರಿ ರಾಮ ವಿದ್ಯಾ ಕೇಂದ್ರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************ಮಕ್ಕಳ ಜಗಲಿ..., ಅಕ್ಕನ ಪತ್ರ...24
     ಪ್ರೀತಿಯ ಅಕ್ಕ ನಿಮ್ಮ ಪ್ರೀತಿಯ ಲಹರಿ ಮಾಡುವ ನಮಸ್ಕಾರಗಳು... ಧನ್ಯವಾದಗಳು ಅಕ್ಕ..... ನೀವು ಹೇಳಿದಂತೆ ಬಳಕೆಯಾಗದ ಪೆನ್ನುಗಳನ್ನು ಕ್ರಾಫ್ಟ್ ಮಾಡುವ ಮೂಲಕ ಮರುಬಳಕೆ ಮಾಡಲು ಪ್ರಯತ್ನಿಸುತ್ತೇನೆ. ಮೊಬೈಲ್ ಬಳಕೆಯ ಬಗ್ಗೆ ನೀವು ತುಂಬಾ ಚೆನ್ನಾಗಿ ನಮಗೆ ಮಾಹಿತಿ ಕೊಟ್ಟಿದ್ದೀರಿ.... ನನಗೂ ಕೂಡ ಮೊಬೈಲ್ ಕೈಗೆ ಬಂದರೆ ತುಂಬಾ ಹೊತ್ತು ನೋಡಬೇಕೆನಿಸುತ್ತದೆ.... ಆದರೆ ಅಮ್ಮ ಆಗಾಗ ಎಚ್ಚರಿಸುತ್ತಿರುವ ಕಾರಣ ನಾನು ಮೊಬೈಲನ್ನು ಮಿತವಾಗಿ ಬಳಸುತ್ತಿದ್ದೇನೆ..... ಶಾಲೆಯಲ್ಲಿ ಕೊಡುವ ಚಟುವಟಿಕೆಗಳಿಗೆ ಕೆಲವು ಸಲ ಮೊಬೈಲ್ ಗಳನ್ನು ಬಳಸಬೇಕಾಗುತ್ತದೆ... ತುಂಬಾ ಮಾಹಿತಿಗಳು ಅದರಿಂದ ಲಭ್ಯವಾಗುತ್ತದೆ.... ಹಾಗಾಗಿ ಚಟುವಟಿಕೆಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.... ಈ ರೀತಿಯಲ್ಲಿ ವಿದ್ಯಾರ್ಥಿಗಳಾದ ನಮಗೆ ಮೊಬೈಲ್ ಲಾಭದಾಯಕವಾಗಿದ್ದರೆ ನೀವಂದಂತೆ ಕೆಲವೊಂದು ಸಲ ಇದೇ ಮೊಬೈಲ್ ವಿದ್ಯಾರ್ಥಿಗಳನ್ನು ತಪ್ಪು ದಾರಿಗೂ ಎಳೆಯುತ್ತದೆ.... ಹಾಗಾಗಿ ಮೊಬೈಲ್ಗಳ ಸರಿಯಾದ ಬಳಕೆ ಮಾಡಲು ಮಾರ್ಗದರ್ಶನ ನೀಡುವುದು ಹೆತ್ತವರ ಜವಾಬ್ದಾರಿಯಾಗಿದೆ.... ನಿಮ್ಮ ಪತ್ರದಲ್ಲಿ ನಾವು ಇದರ ಬಗ್ಗೆ ಒಳ್ಳೆಯ ಮಾಹಿತಿಯನ್ನು ಪಡೆದಿದ್ದೇವೆ.... ಧನ್ಯವಾದಗಳು ಅಕ್ಕ... ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಿರುತ್ತೇನೆ ಇಂತಿ ನಿಮ್ಮ ಲಹರಿ.
....................................... ಲಹರಿ ಜಿ.ಕೆ.
8ನೇ ತರಗತಿ,
ತುಂಬೆ ಸೆಂಟ್ರಲ್ ಸ್ಕೂಲ್
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


          ಜಗಲಿಯ ಎಲ್ಲರಿಗೂ ಆತ್ಮೀಯ ಶುಭ ನಮನಗಳು.... ನಾನು ಪ್ರಿಯ, ಕೆಲವು ವಾರಗಳ ಹಿಂದೆ ನಾನು ಅಕ್ಕನ ಪತ್ರಕ್ಕೆ ಉತ್ತರ ಬರೆಯಲು ಸಾಧ್ಯವಾಗಲಿಲ್ಲ... ಇದಕ್ಕಾಗಿ ನಾನು ಅಕ್ಕನಿಗೆ ಕ್ಷಮೆಯಾಚಿಸುತ್ತೇನೆ. ಇಂದಿನ ಪತ್ರದಲ್ಲಿ ನೀವು ಒಂದೆರಡು ಒಳ್ಳೆಯ ಉದಾಹರಣೆಗಳೊಡನೆ ನಾವುಗಳೆಲ್ಲರೂ ದಿನನಿತ್ಯ ಜೀವನದಲ್ಲಿ ಬಳಸುತ್ತಿರುವ Mobile ನ ಬಗ್ಗೆ ಮಾಹಿತಿ ಹಾಗೂ ಅದರ ಕೆಲವು ದುಷ್ಪರಿಣಾಮಗಳ ಬಗ್ಗೆ ತಿಳಿಸಿದ್ದೀರಿ. ಹೌದು ಅಕ್ಕ ನೀವು ಹೇಳುವ ಹಾಗೆ ನಮ್ಮೆಲ್ಲರ ಕೈಯಲ್ಲಿ ಹಿಂದೆ Mobile ಫೋನ್ ಇರಲಿಲ್ಲ. ಆದರೆ ಈ ಕೊರೋನ ಮಹಾಮಾರಿಯಿಂದಾಗಿ Online ಶಿಕ್ಷಣಕ್ಕಾಗಿ ನಮ್ಮೆಲ್ಲರ ಕೈ ಸೇರಿದ Mobile ಫೋನ್, ಇಂದು ನಮ್ಮನ್ನು ಬಿಟ್ಟು ಹೋಗಲಾರೆನೆಂಬಂತಿದೆ. ನಿಮ್ಮ ಈ ಪತ್ರವನ್ನು ಓದಿದ ಬಳಿಕ ನನಗೂ ಅನಿಸಿತು... ನಾವು ಈ Mobile ಫೋನ್ ಜೊತೆ ಕಳೆಯುವ ಸಮಯವನ್ನು ಕಡಿಮೆ ಮಾಡಬೇಕು, ಸಾಧ್ಯವಾದರೆ ಬಿಟ್ಟೆ ಬಿಡಬೇಕು. ಬದಲಾಗಿ ಆ ಸಮಯವನ್ನು ನಮ್ಮ ಅಮ್ಮ-ಅಪ್ಪ, ತಂಗಿ, ಅಜ್ಜ - ಅಜ್ಜಿ ಯ ಜೊತೆ ಬಹಳ ಪ್ರೀತಿ, ವಿಶ್ವಾಸ, ನಲುಮೆಯಿಂದ ಕಳೆಯಬೇಕು. ಹಾಗೂ ಒಳ್ಳೆಯ ಮೌಲ್ಯಗಳುಳ್ಳ ಪುಸ್ತಕಗಳನ್ನು ಓದುವುದರ ಮೂಲಕ ಅಥವಾ ಕ್ರಾಫ್ಟ್ , ಚಿತ್ರಕಲೆ ಹೀಗೆ ಅನೇಕ ಸುಂದರ ಚಟುವಟಿಕೆಗಳೊಡನೆ ಕಳೆಯಬೇಕು ಎಂದು. ಹಾಗೆಯೇ ನನ್ನ ಮನಕ್ಕೆ ಹೊಳೆಯಿತು... ನಾವು ಈ Mobile ಫೋನ್ ನೋಡುವ ಸಮಯವನ್ನು ಪಶು - ಪಕ್ಷಿಗಳನ್ನು ಪ್ರೀತಿಯಿಂದ ಮುದ್ದಾಡಲು ಮೀಸಲಿಡೋಣ ಎಂದು. ಅಕ್ಕ ನಿಮ್ಮ ಈ ಪತ್ರವನ್ನು ಓದಿ ನಾವು ನಿರ್ಣಯಿಸಿದ್ದೇವೆ... ನಾವು ಇನ್ನು Mobile ಫೋನ್ ನೋಡುವುದನ್ನು ಕಡಿಮೆ ಮಾಡುತ್ತೇವೆ, ಹಾಗೂ ಅವಶ್ಯವಿದ್ದಾಗ ಮಾತ್ರ ಬಳಸುತ್ತೇವೆ. ಅದಲ್ಲದೇ ಈಗ ಫೋನ್ ನ ಅವಶ್ಯಕತೆ ಇಲ್ಲ... ಯಾಕೆಂದರೆ ಈಗ ಮುಂಚಿನಂತೆ ಶಾಲೆಗಳು ಪ್ರಾರಂಭವಾಗಿದೆ. ಸದಾ ಒಳ್ಳೆಯ ಪ್ರೀತಿ, ವಿಶ್ವಾಸ, ಕಾಳಜಿ ಹಾಗೂ ಮೌಲ್ಯ ತುಂಬಿದ ವಿಷಯಗಳೊಡನೆ ಜಗಲಿಯ ಮಕ್ಕಳಿಗೋಸ್ಕರ ಪತ್ರ ಬರೆಯುವ ನಿಮಗೆ ಧನ್ಯವಾದಗಳು ಅಕ್ಕ....ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ.
......................................................ಪ್ರಿಯ.
ಪ್ರಥಮ ಪಿ.ಯು.ಸಿ
ಸರಕಾರಿ ಪದವಿ ಪೂರ್ವ ಕಾಲೇಜು , ಅಳದಂಗಡಿ.
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


       ನಮಸ್ತೆ ಅಕ್ಕ. ನಾನು ನಿಮ್ಮ ತಂಗಿ ಆಯಿಷಾ ಹಮ್ನ ತಿಳಿಸುವ ನಮಸ್ಕಾರಗಳು. ನಾನು ಚೆನ್ನಾಗಿದ್ದೇನೆ. ನೀವು ಕೂಡ ಚೆನ್ನಾಗಿದ್ದೀರಿ ಅಂತ ಭಾವಿಸುತ್ತೇನೆ. ನಿಮ್ಮ ಪತ್ರ ವನ್ನು ಓದಿದೆ. ನಿಮ್ಮ ಪತ್ರ ದಿಂದ ನನಗೆ ಮನವರಿಕೆ ಏನಾಯ್ತು ಎಂದರೆ , ಮಕ್ಕಳಿಂದ ಮೊಬೈಲನ್ನು ದೂರಮಾಡಲು ಹಲವು ವಿಧಾನಗಳು ಇರಬಹುದು. ನನ್ನ ಅನಿಸಿಕೆ ಪ್ರಕಾರ ಮಕ್ಕಳು ಮೊಬೈಲಲ್ಲಿ ಹೀಗೆ ಅಂಟಿಕೊಳ್ಳಲು ಕಾರಣ ಕೆಲವು ಅಪ್ಪ-ಅಮ್ಮಂದಿರು ಅವಿದ್ಯಾವಂತ ರಾಗಿರುವುದ ರಿಂದಲೂ , ಅದನ್ನು ಮಕ್ಕಳಿಂದ ಹೇಗೆ ನಿಭಾಯಿಸುವುದು ಎಂಬ ತಿಳಿವಳಿಕೆ ಇಲ್ಲದಿರುವುದ ರಿಂದಲೂ ಆಗಿರಬಹುದು . ಆದ್ದರಿಂದ ನನ್ನ ಅನಿಸಿಕೆ ಏನೆಂದರೆ, ಅವಿದ್ಯಾವಂತರಾದ ತಂದೆತಾಯಂದಿರು ಅಲ್ಪ ಸಮಯವನ್ನು ಮಕ್ಕಳು ಕಲಿಯುವ ಜಾಗದಲ್ಲಿ ಮಕ್ಕಳ ಜೊತೆಗೆ ಕಾಳಜಿಯನ್ನು ವಹಿಸಬೇಕು. ಹೀಗೆ ದಿನದಲ್ಲಿ ಕೆಲವು ಸಮಯವನ್ನು ಮಕ್ಕಳ ಜೊತೆಗೆ ನಿಯೋಜಿ ಸಿದರೆ ಮಕ್ಕಳು ಕಲಿಕೆಗೆ ಅಲ್ಲದೆ ಮೊಬೈಲನ್ನು ಉಪಯೋಗಿಸುವಾಗ ಸ್ವಲ್ಪ ಭಯ ಬರಬಹುದು. ತಂದೆ-ತಾಯಿಯರು ಜೊತೆ ಇರುವಾಗ ಮಕ್ಕಳು ಅನಾವಶ್ಯಕವಾಗಿ ಮೊಬೈಲು ಉಪಯೋಗಿಸುವುದನ್ನು ದೂರಮಾಡಲು ಸಹಾಯವಾಗಬಹುದು ಎಂದು ನಾನು ಅನಿಸುತ್ತೇನೆ........ ಧನ್ಯವಾದಗಳು.
.......................................ಆಯಿಷಾ ಹಮ್ನ
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************      ನಮಸ್ತೆ ಅಕ್ಕ. ನಾನು ನಿಮ್ಮ ಪ್ರೀತಿಯ ಮಮತೆಯ ತಂಗಿ ಧೃತಿ. ನೀವು ಹೇಗಿದ್ದೀರಾ...? ನಿಮ್ಮ ಕಾಳಜಿ , ಮಾತನಾಡುವ ಮಾತಿಗೆ ಧನ್ಯವಾದಗಳು ಅಕ್ಕ. ಶಾಲಾ ಪ್ರಾರಂಭೋತ್ಸವ ಬಹಳ ಚೆನ್ನಾಗಿತ್ತು. ತಿನ್ನಲು ಬಹಳ ಸಿಹಿಯಾದ ಪಾಯಸವಿತ್ತು. ನಾನು ಇಷ್ಟು ದಿನ ಶಾಲೆಯನ್ನು ಬಹಳ ಮಿಸ್ ಮಾಡ್ಕೊಂಡೆ. ನನ್ನ ಗೆಳೆಯ ಗೆಳತಿಯರನ್ನು ಶಿಕ್ಷಕರನ್ನು ಆಡಿದ ಆಟವನ್ನು , ನೋಡಿದ ಪಾಠವನ್ನು ಕಳೆದ ಸಮಯವನ್ನೆಲ್ಲವನ್ನು ಮತ್ತೆ ಪಡೆಯಲು ನನಗೆ ಒಂದು ಅವಕಾಶವಿದೆ. ಧನ್ಯವಾದ ಚೆನ್ನಾಗಿ ಬಯಸುತ್ತೇನೆ. ಇದೊಂದು ನಮಗೆ ಸಿಕ್ಕ ಒಳ್ಳೆಯ ಅವಕಾಶ ಹಾಗೂ ಸೌಭಾಗ್ಯ ಎಂದು ಹೇಳಬಹುದು. ಮೊಬೈಲ್ ಕೈಗೆ ಸಿಗುತ್ತದೆಂದು ಅದನ್ನ ದುರ್ಬಳಕೆಯಾಗಿದೆ ಬಳಸಬಾರದು. ಬದಲಿಗೆ ಬಳಕೆಯಾಗಿ ಬಳಸಬೇಕು ಎಂಬ ನಿಮ್ಮ ಕಿವಿಮಾತು ನನಗೆ ಬಹಳ ಇಷ್ಟವಾಯಿತು ಹಾಗೂ ನಾನು ಅದನ್ನು ಪಾಲಿಸುತ್ತೇನೆ. ನನಗೂ ಮನೆಯಲ್ಲಿ ಮೊಬೈಲ್ ಕೊಡುತ್ತಾರೆ. ಕೊಡುತ್ತಾರೆಂದು ಅದನ್ನು ನಾನು ದುರ್ಬಳಕೆಯಾಗಿ ಬಳಸುವುದಿಲ್ಲ. ನನಗೆ ಇದರಿಂದ ಬಹಳ ಉಪಯೋಗವಾಗಿದೆ. ಮೊದಲಿಗಿಂತ ಈಗ ಜಗತ್ತು ಬಹಳ ವೇಗವಾಗಿ ಓಡುತ್ತಿದೆ. ಅದರ ಹಿಂದೆ ನಾವು ವೇಗವಾಗಿ ಚೆನ್ನಾಗಿ ಅರಿತುಕೊಂಡು ಹೋಗಬೇಕಾಗಿದೆ. ಮೊಬೈಲ್ ನೋಡಬೇಕು ಹೌದು ಹೇಳಿದ ಹಾಗೆ ಅದಕ್ಕೆ ಲಿಮಿಟ್ ಇರಬೇಕು. ನಾನು ಅದರ ಬದಲು ಒಂದು ಪುಸ್ತಕ ಓದುವುದನ್ನು ಅಭ್ಯಾಸ ಮಾಡಿದ್ದೇನೆ. ಅದು ನನ್ನ ಹವ್ಯಾಸವಾಗಿಬಿಟ್ಟಿದೆ. ನಾವು ಮೊಬೈಲ್ ನೋಡುವುದನ್ನು ಬಿಡಬಹುದಾದರೆ ಅದು ಸಾಧ್ಯವಿದೆ . ಅಸಾಧ್ಯವಾದದ್ದು ಅದರಲ್ಲೂ ಮಕ್ಕಳಾದ ನಮಗೆ ಖಂಡಿತ ಇಲ್ಲ... ಉದಾಹರಣೆಗೆ ಹೇಳುವುದಾದರೆ ಎಷ್ಟೊಂದು ನೈಜ ಘಟನೆಗಳನ್ನು ನಾವು ಶಾಲೆಯಲ್ಲಿ ಕೇಳಿದ್ದೇವೆ ಹಾಗೂ ನೋಡಿದ್ದೇವೆ . ಇದೇ ನಮಗೆ ಸ್ಪೂರ್ತಿಯಾಗಿದೆ. ನಾವು ಮೊಬೈಲ್ ನೋಡಿ ಓದುವುದಕ್ಕೂ ಪುಸ್ತಕ ನೋಡಿ ಓದುವುದಕ್ಕೂಬಹಳ ವ್ಯತ್ಯಾಸವಿದೆ. ನನಗೆ ಪುಸ್ತಕ ನೋಡಿ ಓದುವುದೆಂದರೆ ಬಹಳ ಪ್ರೀತಿ. ಮನಸ್ಸಿದ್ದರೆ ಮಾರ್ಗ ಇದನ್ನು ನಾವು ಎಷ್ಟೊ ಸಾರಿ ಕೇಳಿದರೂ ಕೇಳದ ಹಾಗೆ ವರ್ತಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಧನ್ಯವಾದಗಳೊಂದಿಗೆ 
.......................................................ಧೃತಿ 
10 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
ನಮಸ್ತೆ ಅಕ್ಕ..... ನಾನು ಶ್ರಾನ್ವಿ ಶೆಟ್ಟಿ  
ನೀವು ಹೇಗಿದ್ದೀರ ಅಕ್ಕ.... ನಿಮ್ಮ ಪತ್ರ ಓದಿದೆ 
ನಮಗೆ ಶಾಲೆ ಶುರುವಾಗಿದೆ. ತುಂಬಾ ಕುಷಿಯಾಗಿದೆ. ಕೊರೊನಾದಿಂದ ಮನೆಯಲ್ಲೇ ಇದ್ದು ಬೋರಾಗಿತ್ತು, ನೀವು ಪತ್ರದಲ್ಲಿ ಬರೆದಿರುವಂತೆ ಆನ್ಲೈನ್ ತರಗತಿ ಮುಗಿದಿದೆ, ರಜೆಯಲ್ಲಿ ತುಂಬಾ ಹೊತ್ತು ಮಲಗಿ ಈಗ ಬೇಗ ಏಳಲು ಆಲಸ್ಯ, ಆದರೆ ನಮ್ಮ ಸ್ಕೂಲಲ್ಲಿ ಯೋಗ ತರಗತಿ ಆರಂಭಿಸಿದ್ದಾರೆ, ಬೆಳಿಗ್ಗೆ 5 ಗಂಟೆಯಿಂದ 6.30ರವರೆಗೆ ಹಾಗಾಗಿ ಈಗ ಬೇಗ ಏಳುತ್ತೇನೆ..... ಅಕ್ಕ ನೀವು ಹೇಳಿದ ಹಾಗೆ ನಾವೆಲ್ಲ ಮೊಬೈಲ್ಗೆ ಅವಲಂಬಿತರಾಗಿದ್ದೆವು. ನಾನು ಕೂಡ ರಜೆಯಲ್ಲಿ ಜಾಸ್ತಿ ಪೋನಲ್ಲೇ ಗೇಮ್ಸ್ ಅಂತ ಇರುತ್ತಿದ್ದೆ. ಡ್ರಾಯಿಂಗ್ ಕೂಡ ನೋಡಿ ಮಾಡುತ್ತಿದ್ದೆ. ಮೊಬೈಲ್ ನಮ್ಮನ್ನು ಹಿಡಿದಿಲ್ಲ ನಾವೇ ಅದನ್ನು ಬಿಡಲು ಆಗುತ್ತಿಲ್ಲ. ಆದರೆ ನಮ್ಮಲ್ಲೇ ಸ್ವಯಂ ಬದಲಾವಣೆ ಆಗಬೇಕು, ನಾನು ನನ್ನ ಸ್ವಂತ ನಿರ್ದಾರದಿಂದಲೇ ಮೊಬೈಲ್ ನೋಡುವುದನ್ನು ಕಡಿಮೆ ಮಾಡಿದ್ದೇನೆ, ರಜೆಯಲ್ಲಿ ಅಮ್ಮ ಜೋರು ಮಾಡುತಿದ್ದರು, ಈಗ ನಾನೇ ದಿನಕ್ಕೆ ಒಂದು ಸಲ ಸಂಜೆಯ ಹೊತ್ತು ಅರ್ದ ಗಂಟೆ ಮೊಬೈಲ್ ನೋಡುತ್ತೇನೆ, ನಮ್ಮಿಂದಲೇ ಬದಲಾವಣೆ ಆಗಬೇಕು, ಧನ್ಯವಾದಗಳು ಅಕ್ಕ,
....................................... ಸ್ರಾನ್ವಿ ಶೆಟ್ಟಿ 
9ನೇ ತರಗತಿ 
ಓಂ ಜನ ಹಿತಾಯ ಇಂಗ್ಲೀಷ್ ಮೀಡಿಯಂ 
ಶಾಲೆ, ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
    ನಮಸ್ತೇ ಅಕ್ಕ....... ನಾನು ಬಿಂದುಶ್ರೀ ... ಎಲ್ಲರಿಗೂ ಮೇ 16 ರಂದು ಶಾಲೆಗೆ ಹೋಗುವ ಸಂಭ್ರಮ. ಈ ವರುಷ ಮಕ್ಕಳಿಗೆ ಬೇಗನೆ ಶಾಲೆ ಗಳು ಆರಂಭ. ಕೊರೋನ ಎಂಬ ಮಹಾಮಾರಿಯಿಂದ ನಮಗೆ ಕಲಿಕೆ ಗೆ ತುಂಬಾ ತೊಂದರೆ ಯಾಗುತಿತ್ತು. ಆದರೆ ಈಗ ಆ ಭಯ ಇಲ್ಲ. ನೀವು ಹೇಳಿದ ಹಾಗೆ ಮಕ್ಕಳ ಕೈಗಳಿಗೆ ಮೊಬೈಲ್ ಎಂಬ ಸಾಧನ ಸಿಕ್ಕಿದ್ದರಿಂದ ಅನೇಕ ತರ ತೊಂದರೆ ಉಂಟಾಗಿದೆ. ಮೊಬೈಲ್ ಗಳನ್ನು ಬಳಕೆ ಮಾಡುವ ರೀತಿ ಸರಿಯಾಗಿರಬೇಕು. ಆದರಿಂದ ನಾವು ಮೊಬೈಲ್ ಗಳನ್ನು ಅತಿಯಾಗಿ ಬಳಸದೆ ಇರುವುದು ಒಳ್ಳೇದು. ಅಕ್ಕ ನೀವು ಮೊಬೈಲ್ ನ ಬಗ್ಗೆ ಸುಂದರವಾದ ಸಂದೇಶ ನೀಡಿದ್ದೀರಾ. ಧನ್ಯವಾದಗಳು.......
................................................... ಬಿಂದುಶ್ರೀ
ಪ್ರಥಮ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************      ನಮಸ್ತೇ,..... ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಮಾಡುವ ನಮಸ್ಕಾರಗಳು. ನಿಮ್ಮ ಪತ್ರವನ್ನು ಓದಿದೆ. ನಾನು 8ನೇ ತರಗತಿಗೆ ಹೊಸ ಶಾಲೆಗೆ ಸೇರಿದ್ದೇನೆ. ಅಲ್ಲಿಗೆ ಹೋಗುವಾಗ ನನಗೆ ಇನ್ನೂ ಹೊಸ ಗೆಳೆಯರ ಪರಿಚಯ ವಾಗಬೇಕಷ್ಟೆಎಂಬ ಭಾವನೆ ಇತ್ತು. ಆದರೆ ನಾನು ಶಾಲೆಗೆ ಹೋದಾಗ ನನ್ನ ಬಜಿರೆ ಶಾಲೆ ಗೆಳೆಯರನ್ನು ಕಂಡು ತುಂಬಾ ಸಂತೋಷವಾಯಿತು. ನಂತರ ಎಲ್ಲರ ಪರಿಚಯ ಮಾಡಿಕೊಂಡೆವು. ಈಗ ಹೊಸ ಅಧ್ಯಾಪಕರ ಪರಿಚಯವೂ ಆಯಿತು.
         ನಾನು ಮೊಬೈಲ್ ಬಳಕೆ ಮಾಡುವುದೇ ಕಡಿಮೆಯಾಗಿತ್ತು ನನಗಂತೂ ಆನ್ಲೈನ್ ಪಾಠ ಇಲ್ಲದ್ದು ತುಂಬಾ ತುಂಬಾ ಸಂತೋಷ. ಫೋನ್ ಮುಂದೆ ಕುಳಿತು ಪಾಠ ಕೇಳುವುದು, ಅದನ್ನು ನೋಡಿ ಬರೆಯುವುದು ಬೇಸರವಾಗಿತ್ತು. ಶಾಲೆಯಲ್ಲಿ ಅಧ್ಯಾಪಕರ ಜೊತೆ ಕಲಿತಂತೆ ಆಗುತ್ತಿರಲಿಲ್ಲ ಅವರ ಜೊತೆ ಕುಳಿತು ಪಾಠ ಕೇಳುವ ಸಂತಸವೇ ಬೇರೆಯಾಗಿತ್ತು. ನಾವು ಫೋನನನ್ನು ಅನಗತ್ಯವಾಗಿ ಬಳಸಬಾರದು . "ಅತಿಯಾದರೆ ಅಮೃತವೂ ವಿಷವೇ" ಎನ್ನುವಂತೆ ಮೊಬೈಲನ್ನು ಅನಗತ್ಯವಾಗಿ ಬಳಸಿದರೆ ತೊಂದರೆ. ನಾವು ನಮಗೆ ಓದಿ ಬರೆದು ಬಿಡುವಿರುವ ಸಮಯದಲ್ಲಿ ಅಮ್ಮನಿಗೆ ನಮ್ಮಿಂದ ಸಾಧ್ಯವಾದಷ್ಟು ಚಿಕ್ಕ ಪುಟ್ಟ ಸಹಾಯ ಮಾಡಬಹುದು . ಕ್ರಾಫ್ಟ್ , ಕವನ, ಕಥೆ , ಬರೆಯುವುದು. ಪುಸ್ತಕ ಓದುವುದು ಮೊದಲಾದವನ್ನು ಮಾಡಬಹುದು. ಧನ್ಯವಾದಗಳು ಅಕ್ಕಾ.....
..............................................ಸಾತ್ವಿಕ್ ಗಣೇಶ್
8ನೇ ತರಗತಿ 
ಸರಕಾರಿ ಪದವಿಪೂರ್ವ ಕಾಲೇಜು ವೇಣೂರು
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************

Ads on article

Advertise in articles 1

advertising articles 2

Advertise under the article